ಶರಣ ಧರ್ಮದ ಸೇವಕ ಮಹಾಜನ್ ಅವರಿಗೆ 55ನೇ ಜನ್ಮದಿನ ಸಂಭ್ರಮ

ಶರಣ ಧರ್ಮದ ಸೇವಕ ಮಹಾಜನ್ ಅವರಿಗೆ 55ನೇ ಜನ್ಮದಿನ ಸಂಭ್ರಮ

ಶರಣ ಧರ್ಮದ ಸೇವಕ ಮಹಾಜನ್ ಅವರಿಗೆ 55ನೇ ಜನ್ಮದಿನ ಸಂಭ್ರಮ

ಕಲಬುರಗಿ, ಫೆ. 10: ಶರಣ ಧರ್ಮವನ್ನು ಪರಿಪಾಲಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿವಕಾಂತ ಮಹಾಜನ್ ಅವರ 55ನೇ ಜನ್ಮದಿನವನ್ನು ಫೆಬ್ರವರಿ 10ರಂದು ಸಂಜೆ 7 ಗಂಟೆಗೆ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಅವರ ನೂತನ ಗೃಹದಲ್ಲಿ ಜಿಲ್ಲಾ ಹಟಗಾರ ಸಮಾಜದ ವತಿಯಿಂದ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಿವಕುಮಾರ್ ಪುರಂತ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಸತೀಶಕುಮಾರ ಅವರ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ಪರಿಚಯಿಸಿದರು. ಬಳಿಕ ಮಾತನಾಡಿದ ನ್ಯಾಯವಾದಿ ಸತೀಶಕುಮಾರ ಜಮಖಂಡಿ ಅವರು, ಸಮಾಜದ ವಿಶ್ವಾಸವೇ ತನ್ನ ಶಕ್ತಿ ಎಂದು ತಿಳಿಸಿ, ಹಟಗಾರ ಸಮಾಜದ ಅಭಿವೃದ್ಧಿಗೆ ಸದಾ ಬೆಂಬಲವಾಗಿ ನಿಂತು ಸೇವೆ ಸಲ್ಲಿಸುವುದಾಗಿ ಹೇಳಿದರು.

ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಶ್ರವಣ್ ಕುಮಾರ ಮುನ್ನೊಳ್ಳಿ ಅವರು ಶಾಲು ಹೊದಿಸಿ, ನೂಲಿನ ಹಾರ ಹಾಕಿ ಹಾಗೂ ಮುತ್ತಿನ ಮಣಿ ಸಮರ್ಪಿಸಿ ಸತ್ಕರಿಸಿ, ಮಾತನಾಡಿ, “ಸಮಾಜದ ಕಾರ್ಯಗಳಲ್ಲಿ ಸದಾ ಕಾಳಜಿ ವಹಿಸಿ ಮುಂಚೂಣಿಯಲ್ಲಿ ನಿಂತಿರುವ ಸತೀಶಕುಮಾರ ಅವರು ನಮಗೆ ಅಚ್ಚುಮೆಚ್ಚಿನವರು. ಅವರ ಸಹಕಾರ ಹೀಗೆ ಮುಂದುವರಿಯಲಿ” ಎಂದು ಶುಭಾಶಯ ಕೋರಿದರು.

ಸಮಾಜದ ಹಿರಿಯರಾದ ರಾಜಶೇಖರ್ ಆರ್. ಘಸನೆ, ಶರಣಬಸವ ಚೌಡಗುಂಡ, ಉಮೇಶ್ ಪಾತಾಳೆ, ಯುವ ನಾಯಕ ಈರಣ್ಣ ಸೊನ್ನದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕೊನೆಯಲ್ಲಿ ಸಾಮಾಜಿಕ ನ್ಯಾಯ ಹೋರಾಟಗಾರ ಜೆ.ಎಸ್. ವಿನೋದಕುಮಾರ ಅವರು ಮಾತನಾಡಿ, “ಮಹಾಜನ್ ಅವರಲ್ಲಿರುವ ಶರಣ ತತ್ವ ಮತ್ತು ಸಿದ್ಧಾಂತಗಳನ್ನು ಯುವಕರು ಅನುಸರಿಸುತ್ತಿದ್ದಾರೆ. ಅವರ ಮಾದರಿ ನಡೆ ನಮ್ಮೆಲ್ಲರಿಗೂ ಪ್ರೇರಣೆ” ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಾಬು ಪರಸಬಾದ, ವಿನೋದ ಭಾಲ್ಕಿ, ಶಾಂತು ಶಾಬಾದಿ ಸೇರಿದಂತೆ ಹಲವರು ಹಾಜರಿದ್ದರು.