ಧರ್ಮ -ಹಿಂದೂ ಜಾತಿ -ವೀರಶೈವ ಲಿಂಗಾಯತ ಬರೆಸುವಂತೆ -ಅಂಬಾಡಿ ಮನವಿ

ಧರ್ಮ -ಹಿಂದೂ  ಜಾತಿ -ವೀರಶೈವ ಲಿಂಗಾಯತ ಬರೆಸುವಂತೆ -ಅಂಬಾಡಿ  ಮನವಿ

ಧರ್ಮ -ಹಿಂದೂ ಜಾತಿ -ವೀರಶೈವ ಲಿಂಗಾಯತ ಬರೆಸುವಂತೆ -ಅಂಬಾಡಿ ಮನವಿ

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪದೇ ಭಾಗವಹಿಸಬೇಕು ಮತ್ತು 

ಧರ್ಮದ ಕಾಲಂ 8 ರಲ್ಲಿ 'ಹಿಂದೂ' ಎಂತಲೂ ಜಾತಿಯ ಕಾಲಂ 9 ರಲ್ಲಿ 'ವೀರಶೈವ ಲಿಂಗಾಯತ (A-1524)' ಎಂತಲೂ ಮತ್ತು ಉಪ ಜಾತಿ ಕಾಲಂ 10 ರಲ್ಲಿ ಅವರವರ ಉಪಜಾತಿಗಳ ವಿವರ ಗಳನ್ನು ನಮೂದಿಸಬೇಕು ಹಾಗೂ

ಸಮಾಜದ ಎಲ್ಲ ಬಂಧುಗಳು ಯಾವುದೇ ಗೊಂದಲಗಳಿಂದ ಪ್ರಭಾವಿತರಾಗದೆ ಮೇಲೆ ಹೇಳಿದ ರೀತಿ ಧರ್ಮ-ಹಿಂದೂ, ಜಾತಿ-ವೀರಶೈವ ಲಿಂಗಾಯತ ಮತ್ತು ಅವರವರ ಉಪಜಾತಿಗಳನ್ನು ನಮೂದಿಸಿ ಇಡೀ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಭವಿಷ್ಯಕ್ಕೆ ಸುಭದ್ರ ತಳಹದಿ ನಿರ್ಮಾಣ ಮಾಡಬೇಕೆಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾ ವೇದಿಕೆಯ ಕಲಬುರ್ಗಿ ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ ಪತ್ರಗೋಷ್ಠಿ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ