ಪುರಾಣ ಪ್ರವಚನ ಕೇಳುವುದರಿಂದ ಪರಿಶುದ್ಧ ಜೀವನಕ್ಕೆ ದಾರಿ : ಯಡ್ರಾಮಿ ಶ್ರೀ

ಪುರಾಣ ಪ್ರವಚನ ಕೇಳುವುದರಿಂದ ಪರಿಶುದ್ಧ ಜೀವನಕ್ಕೆ ದಾರಿ : ಯಡ್ರಾಮಿ ಶ್ರೀ

ಪುರಾಣ ಪ್ರವಚನ ಕೇಳುವುದರಿಂದ ಪರಿಶುದ್ಧ ಜೀವನಕ್ಕೆ ದಾರಿ : ಯಡ್ರಾಮಿ ಶ್ರೀ

ಕಲಬುರಗಿ : ಪುರಾಣ ಎಂಬುದೊಂದು ಹೊಳಿ, ಅದರೊಳಗೆ ಇಳಿ, ಆಧ್ಯಾತ್ಮ ತಿಳಿ

ಸಿದ್ಧಲಿಂಗ ಶ್ರೀಗಳು ಯಡ್ರಾಮಿ 

ಕಲ್ಯಾಣ ಕರ್ನಾಟಕ ಭಾಗವು ಶರಣರು, ಶಿವಶರಣರು, ಸಾಧು-ಸಂತರ ನಾಡಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಬದುಕಿಗೆ ಪುರಾಣ ಪ್ರವಚನ ಕೇಳುವುದರಿಂದ ಪರಿಶುದ್ಧ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಧಾನ, ಧರ್ಮ, ಒಳ್ಳೆಯದು, ಯಾವುದು ಎಂದು ಬರಿ ನಾವು ಕೇಳುವುದು ಆಗಿದೆ. ಆದರೆ ಕೇಳಿದ್ದನ್ನು ಆಚರಣೆಗೆ ತರುವುದು ಮಾತ್ರ ಉಳಿದಿದೆ. ಒಳ್ಳೆಯದನ್ನು ಶ್ರವಣ ಮಾಡುವುದೆ ಶ್ರಾವಣ ಮಾಸದ ವಿಶೇಷ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತಂದರೆ ಮಾತ್ರ ನಮ್ಮ ಜೀವನ ಸಾರ್ಥಕ ಎನ್ನುತ್ತ ಪಾಪ ಪುಣ್ಯಗಳ ಬಗ್ಗೆ ಯಾರಿಗೂ ಗೊತ್ತಿಲ್ಲದೆ ಇರಬಹುದು, ಆದರೆ ಒಂದಂತು ನಿಜ ಯಾರ ಮನಸ್ಸನ್ನು ನೋಯಿಸುತ್ತೀವೋ ಅದು ಪಾಪ, ಯಾರನ್ನು ಸಂತೋಷದಿಂದ ನೋಡಿಕೊಂಡು ನಾವು ಸಂತೋಷ ಪಡುತ್ತೇವೋ ಅದು ಪುಣ್ಯ ಎನ್ನುತ್ತ ಮಹಾದಾಸೋಹಿ ಶರಣಬಸವೇಶ್ವರ ಕಾಯಕ ಮತ್ತು ದಾಸೋಹ ಪ್ರಭಾವಕ್ಕೊಳಗಾಗಿದ್ದ ಸಗರನಾಡಿನ ಮಹಾತ್ಮಾ ಚರಬಸವೇಶ್ವರ ಶರಣರ ಪುರಾಣ ಪ್ರವಚನ ಆಚರಣೆ ಪುಣ್ಯದ ಕೆಲಸ ಅಂತಹ ಕೆಲಸ ವಿದ್ಯಾನಗರದ ವಿದ್ಯಾವಂತರು ತಿಂಗಳ ಪರ್ಯಂತ ಆಚರಣೆ ಮಾಡಿದ್ದು, ಅರ್ಥಪೂರ್ಣವಾಗಿದೆ ಎಂದು ಯಡ್ರಾಮಿಯ ವೀರಕ್ತ ಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ ಸಿದ್ಧಲಿಂಗ ಸ್ವಾಮಿಗಳು ಪುರಾಣ ಮಂಗಲೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಧರ್ಮೋ ರಕ್ಷತಿ ರಕ್ಷಿತಃ ಅಂದರೆ ನಾವು ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಎಂಬುದು ಪ್ರಾಚೀನ ಉಕ್ತಿ, ಆದರೆ ಇಂದು ಧರ್ಮದ ಅಪವ್ಯಾಖ್ಯಾನದಿಂದ ಸಮಾಜ ಅವನತಿಯತ್ತ ಸಾಗುತ್ತಿದೆ. ಧರ್ಮ ಎಂಬುದು “ಮತ” ಎಂಬ ಸಂಕೂಚಿತ ಅರ್ಥದಲ್ಲಿ ಬಳಕೆಯಾಗುತ್ತಿರುವುದು ವಿಷಾಧನಿಯ ಎನ್ನುತ್ತ ಒಂದಂತು ನಿಜ ಈ ಭೂಮಿಯ ಋಣ ಮುಗಿದಿಲ್ಲ ಎಂದಾದರೆ ಎಂತಹ ರೋಗ ಬಂದರು ನಮಗೆ ಏನೂ ಆಗುವುದಿಲ್ಲ. ಋಣ ಮುಗಿಯಿತು ಅಂದರೆ ನಮ್ಮೆತ್ತರಕ್ಕೆ ಹಣದ ರಾಶಿ ಸೂರಿದರು ನಾವು ಉಳಿಯುವುದಿಲ್ಲ. ಎಂದು ಅನೇಕ ಧರ್ಮ ಹಾಗು ಆಧ್ಯಾತ್ಮಿಕ ಮಹತ್ವದ ಕುರಿತು ಚರಬಸವೇಶ್ವರ ಸಂಸ್ಥಾನದ ವಂಶಸ್ಥರು ಹಾಗು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ. ಶರಣು ಬಿ. ಗದ್ದುಗೆ ಮಾತನಾಡಿದರು. 

ಮಹಾನಗರ ಪಾಲಿಕೆ ಸದಸ್ಯರಾದ ಯಂಕಮ್ಮ ಗುತ್ತೇದಾರ, ಆರಕ್ಷಕ ನಿರೀಕ್ಷಕರಾದ ಶಿವಾನಂದ ವಾಲಿಕಾರ, ವಿದ್ಯಾನಗರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ ಸಂಗೀತ ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ಧಣ್ಣ ದೇಸಾಯಿ ಕಲ್ಲೂರ ಅವರಿಂದ ಪ್ರಾರ್ಥನೆ ಹಾಗು ವಚನ ಸಂಗೀತ ನಡೆಯಿತು. ಪುರಾಣ ಪ್ರವಚನಕಾರರಾದ ವೇ.ಮೂ. ಶಂಭುಲಿಂಗ ಶಾಸ್ತಿçಗಳು, ಪುರಾಣ ಅಧ್ಯಯನ ಓದಿ ಮಂಗಳಗೊಳಿಸಿದ ನಂತರ ತೊಟ್ಟಿಲು ಹರಾಜಿನ ಪ್ರಕ್ರೀಯೆಯಲ್ಲಿ ರೇವಣಸಿದ್ದಪ್ಪ ಜೀವಣಗಿ, ರೇವಣಸಿದ್ದಪ್ಪ ಗೌನಳ್ಳಿ, ಮಲ್ಲಿಕಾರ್ಜುನ ಕಾಳೆ ಭಾಗವಹಿಸಿ ಕೊನೆಯಲ್ಲಿ ರೇವಣಸಿದ್ದಪ್ಪ ಜೀವಣಗಿ ಅವರು ಪೂಜ್ಯಶ್ರೀಗಳಿಂದ ತೊಟ್ಟಿಲು ಪಡೆದುಕೊಂಡರು. 

ಪ್ರಸಾದ ಕಮಿಟಿಯ ಸದಸ್ಯರಾದ ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ವಿಶ್ವನಾಥ ರಟಕಲ್, ನಾಗರಾಜ ಹೆಬ್ಬಾಳ, ನಾಗಭೂಷಣ ಹಿಂದೊಡ್ಡಿ ಇವರ ನೇತ್ರತ್ವದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ ಸದಸ್ಯರಾದ ತರುಣಶೇಖರ ಬಿರಾದಾರ, ಕರಣಕುಮಾರ ಆಂದೋಲಾ, ಶಶಿಧರ ಪ್ಯಾಟಿ, ಗುರುರಾಜ ಮುಗಳಿ, ಶ್ರೀವತ್ಸ ಸಂಗೋಳಗಿ, ಅಮಿತ ಸಿಕೇದ್, ಸಂಗಮೇಶ ಹೆಬ್ಬಾಳ ಹಾಗು ಇತರರು ಕಾರ್ಯಕ್ರಮಕ್ಕೆ ಬಂದ ಸಾವಿರಾರು ಭಕ್ತರಿಗೆ ಅಚ್ಚುಕಟ್ಟಾಗಿ ಪ್ರಸಾದ ವಿತರಣೆ ಮಾಡಿದರು ಎಂದು ಕಾರ್ಯಕ್ರಮ ಸಂಚಾಲಕತ್ವ ವಹಿಸಿದ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.