ಜಿಎಸ್‌ಟಿ ಸುಧಾರಣೆಗಳು ವಿಕಸಿತ ಭಾರತ ಗುರಿ ಸಾಧನೆಗೆ ಇಟ್ಟ ದಿಟ್ಟ ಹೆಜ್ಜೆ

ಜಿಎಸ್‌ಟಿ ಸುಧಾರಣೆಗಳು ವಿಕಸಿತ ಭಾರತ ಗುರಿ ಸಾಧನೆಗೆ ಇಟ್ಟ ದಿಟ್ಟ ಹೆಜ್ಜೆ

ಜಿಎಸ್‌ಟಿ ಸುಧಾರಣೆಗಳು ವಿಕಸಿತ ಭಾರತ ಗುರಿ ಸಾಧನೆಗೆ ಇಟ್ಟ ದಿಟ್ಟ ಹೆಜ್ಜೆ

 ಜಿಎಸ್‌ಟಿ ದರಗಳ ಪರಿಸ್ಕರಣೆಯಿಂದ ಸಾಮಾನ್ಯವಾಗಿ ದಿನನಿತ್ಯೆ ಬಳಸುವ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಭಾರೀ ಕುಸಿತ ಕಂಡು, ಸಮಗ್ರ ಬೇಡಿಕೆ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಒಟ್ಟು ಸ್ವದೇಶಿ ಉತ್ಪಾದನೆ ಹೆಚ್ಚಾಗಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪೊ. ಆರ್. ಆರ್. ಬಿರಾದಾರ ಅವರು ಕಲಬುರಗಿಯ ರೋಟರಿ ಕ್ಲಬ್‌ದ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಅಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತ, ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ ಸ್ಥಾಪಿಸುವ ಉದ್ದೇಶವನಿಟ್ಟುಕೊಂಡು, ಜನಸಾಮಾನ್ಯರು, ರೈತರು ಹಾಗೂ ಉದ್ಯಮಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನವಾಗುವಂತೆ ಜಿಎಸ್‌ಟಿ ದರಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ ಎಂದು ಹೇಳಿದರು.

 ಈ ಹಿಂದಿನ ೪ ಶ್ರೇಣಿ ತೆರಿಗೆ ದರಗಳಬದಲಾಗಿ ಜನಸ್ನೇಹಿಯ ೨ ತೆರಿಗೆ ದರಗಳ (ಶೇ.೧೮ರ ಪ್ರಮಾಣಿತ ಮತ್ತು ಶೇ.೫ರ ಶ್ರೇಷ್ಠತಾ ದರ) ಒಂದು ಸರಳ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ತೆರಿಗೆ ಭಾರ ಮತ್ತು ಸಂಗ್ರಹಣೆ ವೆಚ್ಚ ಕಡಿತಗೊಂಡು ತೆರಿಗೆ ಅನುಸರಣೆ ಹೆಚ್ಚಾಗುತ್ತದೆ. ಕೆಲವು ಅಶ್ರೇಷ್ಠತಾ ಸರಕುಗಳಾದ ಸಿಗರೆಟ್, ತಂಬಾಕು ಮತ್ತು ಮಧ್ಯಪಾನಗಳ ಮೇಲೆ ಶೇ.೪೦ರಷ್ಟು ಡಿ-ಮೆರಿಟ್ ತೆರಿಗೆ ವಿಧಿಸಲು ಶಿಫಾರಸ್ಸು ಮಾಡಿರುವುರಿಂದ ಇವುಗಳ ಸೇವನೆ ಕಡಿಮೆಯಾಗಿ, ಜನರ ಆರೋಗ್ಯ ಉತ್ತಮಗೊಂಡು, ಅವರ ಉತ್ಪಾದನಾ ಶಕ್ತಿ ಹೆಚ್ಚಾಗಿ, ಬಡತನ ಕಡಿಮೆಯಾಗಲಿದೆ ಎಂದರು 

ಪ್ರಾಣರಕ್ಷಕ ಔಷಧಿ, ಮದ್ದು ಮತ್ತು ವಿಮೆಯ ಮೇಲೆ ವಿಧಿಸುವ ಜಿಎಸ್‌ಟಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದು ಆರೋಗ್ಯ ಕ್ಷೇತ್ರಕ್ಕೆ ಒಂದು ದೊಡ್ಡ ಬೂಸ್ಟ್ ಸಿಕ್ಕಂತಾಗಿದೆ. ಸಾಮಾನ್ಯ ಜನರು ಬಳಸುವ ದಿನನಿತ್ಯದ ವಸ್ತುಗಳಾದ ಅಲ್ಟ್ರಾ-ಹೈ ಟೆಂಪರೇಚರ್ ಹಾಲು, ಪನೀರ್, ಚಪಾತಿ, ರೊಟ್ಟಿ, ಪರೋಟಾ ಇತ್ಯಾದಿಗಳ ಮೇಲೆ ವಿಧಿಸುವ ಶೇ.೫ರಷ್ಟು ಜಿಎಸ್‌ಟ್‌ಯನ್ನು ಇವಾಗ ಶೂನ್ಯಕ್ಕೆ, ಹೇರ್ ಆಯಿಲ್, ಸೋಪ್, ಶಾಂಪೂ ಇತರೆ ಗೃಹೋಪಯೋಗಿ ಸರಕು, ಪ್ಯಾಕ್‌ಡ ಖಾರದ ತಿಂಡಿಗಳು, ಸಾಸ್, ಪಾಸ್ಟಾ, ನೂಡಲ್ಸ್, ಚಾಕಲೇಟ್, ಕಾಫಿ ಮುಂತಾದವುಗಳ ಸರಕುಗಳ ಮೇಲೆ ಜಿಎಸ್‌ಟಿ ಶೇ. ೫ಕ್ಕೆ ಕಡಿಮೆಯಾಗಿವುದರಿಂದ ಸಾಮಾನ್ಯ ಜನರ ಜೀವನಮಟ್ಟ ಸುದಾರಿಸಲಿದೆ. 

ಅದರಂತೆ ಅಟೋಮೊಬೈಲ್ ಇಂಡಸ್ಟಿç, ಕೃಷಿ, ತೋಟಗಾರಿಕೆ, ಮನೆ ನಿರ್ಮಾಣ ಮುಂತಾದ ವಲಯಗಳೂ ಕೂಡಾ ಜಿಎಸ್‌ಟಿ ಸುಧಾರಣೆಗಳಿಂದ ಸಾಕಷ್ಟು ಲಾಭ ಪಡೆಯಲಿವೆ ಎಂದು ಪೊ. ಬಿರಾದಾರ ಅವರು ಹೇಳಿದರು. ಇದು ೨೦೪೭ರೊಳಗೆ ವಿಕಸಿತ ಭಾರತ ಗುರಿ ಸಾಧಿಸಲು ಇಟ್ಟ ಒಂದು ದಿಟ್ಟ ಹೆಜ್ಜೆಯಾಗಿದೆ. ಆದರೆ ಉತ್ಪಾದಕರು ಮತ್ತು ವರ್ತಕರು ಈ ತೆರಿಗೆಯ ಪ್ರಯೋಜನೆಗಳನ್ನು ಅಂತಿಮ ಖರಿದಿದಾರರಿಗೆ ಸಂಪೂರ್ಣವಾಗಿ ವರ್ಗಾಯಿಸಬೇಕಿದೆ ಎಂದರು.

ಕಲಬುರಗಿಯ ಮೇನ್ ರೋಟರಿ ಕ್ಲಬ್‌ದ ಅಧ್ಯಕ್ಷರಾದ ಶ್ರೀ. ಉದಯ ಪಿ. ಹುನಗುಂಟಿಕರ್ ಅವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿ ಮಾತನಾಡುತ್ತಾ, ಜಿಎಸ್‌ಟಿ ಸುಧಾರಣೆಗಳು ದೇಶದ ಉತ್ಪಾದನೆ, ವ್ಯಾಪಾರ, ವಾಣಿಜ್ಯ-ವಹಿವಾಟು ಉತ್ತೇಜಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು. ರೋಟರಿ ಕ್ಲಬ್ ಗುಂಪಿನ ನಾಯಕರಾದ ಪೊ. ಶಿವರಾಜ ಪಾಟೀಲ ಅವರು ಜಿಎಸ್‌ಟ ತೆರಿಗೆ ದರಗಳ ಪರಿಸ್ಕರಣೆಯಿಂದ ನಮ್ಮ ದೇಶದ ಸರಕುಗಳ ಬೆಲೆಗಳು ಕಡಿಮೆಯಾಗಿ ಅನುಭೋಗ ಅಧಿಕವಾಗುವುದರ ಜತೆಗೆ ನಮ್ಮ ಉದ್ಯಮೆದಾರರ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಾಗುತ್ತದೆಂದು ಹೇಳಿದರು. ರೋಟರಿ ಕ್ಲಬ್‌ದ ಕಾರ್ಯದರ್ಶಿಯಾದ ಶ್ರೀ ಬಿ. ಎಸ್. ಪಾಟೀಲರು ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡಿದರು. ಶ್ರೀ ಅಪ್ಪರಾವ್ ಪಾಟೀಲ, ಪೊ. ಬಸವರಾಜ ಅಂಗಡಿ, ಡಾ. ಪ್ರದೀಪ ಮುರಡಕರ್, ಡಾ. ರಮೇಶ ಯಳಸಂಗಿಕರ್, ಶ್ರೀ ಚೇತನಕುಮಾರ ಗಾಂಗಜಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.