ದೊಡ್ಡಪ್ಪ ಅಪ್ಪ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ದೊಡ್ಡಪ್ಪ ಅಪ್ಪ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಕಲಬುರಗಿ : ನಗರದ ವಾರ್ಡ್ ನಂ. 55ರ ದೊಡ್ಡಪ್ಪ ಅಪ್ಪ ಕಾಲೋನಿಯಲ್ಲಿ ಕೆಕೆಆರ್‌ಡಿಬಿ ಅನುದಾನದ ಅಡಿಯಲ್ಲಿ ರೂ.10 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮಹಾನಗರ ಪಾಲಿಕೆಯ ಸದಸ್ಯೆ ಅರ್ಚನಾ ಬಸವರಾಜ್ ಪಾಟೀಲ್ ಅವರು ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಗರದ ಮೂಲಸೌಕರ್ಯ ಅಭಿವೃದ್ಧಿಗೆ ನಾಗರಿಕರ ಸಹಕಾರ ಅತ್ಯವಶ್ಯಕ. ಸಾರ್ವಜನಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ರಸ್ತೆ, ಒಳಚರಂಡಿ ಹಾಗೂ ಬೆಳಕಿನ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವರಾಜ್ ಪಾಟೀಲ್ ಬಿರಾಳ, ಚಂದಣ್ಣ, ಸೌಕಾರ್ ಸಗರ್, ಶಶಿಕಾಂತ ಮಹೇಂದ್ರಕರ್, ಮೋಹನ್ ರಾವ್ ಕುಲಕರ್ಣಿ, ಶಾಂತಗೌಡ ಪಾಟೀಲ್, ಮಲ್ಲಿನಾಥ ಗೌಡ ಪಾಟೀಲ್, ಕೋರೇಶ್ ಪಾಟೀಲ್, ಬಾಗೇಶಕುಮಾರ, ಸತ್ಯನಾರಾಯಣ ಇಂಜಿನಿಯರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.