ತಹಸೀಲ್ದಾರ, ಡಿವೈಎಸ್ಪಿ ಮನ ಒಲಿಕೆಗೆ ಜಗ್ಗದೆ ಮಳೆಯಲ್ಲಿಯೇ ಧರಣಿ ಮುಂದುವರಿಸಿದ ನಾಗರೀಕ ಹಿತರಕ್ಷಣೆ ವೇದಿಕೆ
ತಹಸೀಲ್ದಾರ, ಡಿವೈಎಸ್ಪಿ ಮನ ಒಲಿಕೆಗೆ ಜಗ್ಗದೆ ಮಳೆಯಲ್ಲಿಯೇ ಧರಣಿ ಮುಂದುವರಿಸಿದ ನಾಗರೀಕ ಹಿತರಕ್ಷಣೆ ವೇದಿಕೆ
ಕಳಪೆ ಕಾಮಗಾರಿ ನಡೆಸುತ್ತಿರುವ ಎಸ್.ಎಂ.ಕನಸ್ಟ್ರಕ್ಷನ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಚಿಂಚೋಳಿ :ಎಸ್ ಎಂ. ಕನಸ್ಟ್ರಕ್ಷನ್ ವತಿಯಿಂದ ಸರಕಾರದ ವಿವಿಧ ಯೋಜನೆಗಳಡಿ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ವಸತಿ ಮನೆಗಳ ಕಟ್ಟಡ ಕಾಮಗಾರಿಗಳು ಕಳಪಡೆ ಮಟ್ಟದಲ್ಲಿ ಕೂಡಿವೆ. ಇದನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ, ಚಿಂಚೋಳಿ ತಾಲೂಕ ನಾಗರೀಕ ಹಿತರಕ್ಷಣಾ ವೇದಿಕೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈ ಬಿಡಬೇಕೆಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ಎಸ್.ಹಿರೇಮಠ, ಸಿಪಿಐ ಕಪಿಲದೇವ ಅವರ ಮನವಿಗೆ ಜಗದೇ ಮಳೆಯಲ್ಲಿಯೇ ವೇದಿಕೆ ತಹಸೀಲ್ ಕಾರ್ಯಾಲಯದ ಎದುರುಗಡೆ ಸಾಂಕೇತಿಕ ಧರಣಿ ಮುಂದುವರೆಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 2006-07ನೇ ಸಾಲಿನಲ್ಲಿ ಸರ್ವೇ ನಂ. 311 ರಲ್ಲಿ ನರ್ಮ್ ಐಎಚ್ ಎಸ್ ಡಿಪಿ ಯೋಜನೆಯಡಿ 200 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಎಸ್.ಎಂ.ಕನಸ್ಟ್ರಕ್ಷನ್ ನಿರ್ಮಿಸುತ್ತಿರುವ ಮನೆಗಳು ಕಳಪೆ ಮಟ್ಟದಿಂದ ಕೂಡಿ ಕೊಂಡಿವೆ. 2018-19ನೇ ಸಾಲಿನ ನಿವೇಶನ ಹೊಂದಿರುವ ಪರಿಶಿಷ್ಟ ಜಾತಿಗೆ ಸೇರಿರುವ 250 ಮನೆಗಳು ನಿರ್ಮಾಣಗೊಳಿಸಿ ಪೂರ್ಣಗೊಳಿಸಲು ಮಾಲೀಕರಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು. ಇನ್ನೂ 2022 ನೇ ಸಾಲಿನಲ್ಲಿಪಿಎಂವೈ(ಯು), ಎಚ್.ಎಫ್.ಎ ಯೋಜನೆಯ 1393 ಮನೆಗಳು ನಿರ್ಮಾಣ ಮಾಡಲು ಮಂಡಳಿ ಉದ್ದೇಶಿಸಿದ್ದು, ಕಟ್ಟಡ ಪ್ರಾರಂಭಿಸದೆ ಕಾಲ ಹರಣ ಮಾಡಲಾಗುತ್ತಿದೆ. ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ, ಮನೆ ಕಾಮಗಾರಿಗಳು ತುರ್ತಾಗಿ ಪೂರ್ಣಗೊಳಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿ, ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಾಶಿನಾಥ ಸಿಂಧೆ, ಪಾಂಡುರಂಗ ಲೊಡ್ಡನೂರ, ವಿಶ್ವನಾಥ ಹೊಡಬೀರನಳ್ಳಿ, ಓಂಮನರಾವ ಕೊರವಿ, ಶಶಿಕುಮಾರ ಮೇತ್ರಿ, ಆನಂದ ರೆಡ್ಡಿ, ರಾಜಶೇಖರ ಹೊಸಮನಿ, ಲೋಕೇಶ ಐನೊಳ್ಳಿ, ಭಾಗ್ಯವಂತ ಶಾರದ ಕನಕಪೂರ ಅವರು ಅವರು ಉಪಸ್ಥಿತರಿದರು.
ಕಾಮಗಾರಿಗೆ ತಡೆ ಹಿಡಿಯಲು ಆರಕ್ಷಕ ಉಪನಿರೀಕ್ಷಕರಿಗೆ ಮುಖ್ಯ ಅಧಿಕಾರಿ ಮನವಿ ಸಲ್ಲಿಕೆ :
ಚಿಂಚೋಳಿ ತಾಲೂಕ ನಾಗರೀಕ ಹಿತರಕ್ಷಣಾ ವೇದಿಕೆಯ ಸಾಂಕೇತಿಕ ಧರಣಿಯನ್ನು ಉಲ್ಲೇಖಿಸಿ ಚಿಂಚೋಳಿ ಪುರಸಭೆ ಮುಖ್ಯ ಅಧಿಕಾರಿ ನಿಂಗಮ್ಮ ಬಿರಾದಾರ ಅವರು ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ ವತಿಯಿಂದ ನಿರ್ಮಿಸುತ್ತಿರುವ ಮನೆಗಳು ಸಂಪೂರ್ಣ ಕಳಪೆ ಮಟ್ಟದಿಂದ ನಡೆಯುತ್ತಿದೆ ಮತ್ತು ನಿಧಾನಗತಿಯಲ್ಲಿ ಸಾಗುತ್ತಿರುವುದು ಹಾಗೂ ಸ್ಥಲೀಯ ಸಂಸ್ಥೆಗಳ ಅನುಮತಿ ಪಡೆಯದೇ, ನಿಯಮಗಳು ಉಲ್ಲಂಘಿಸಿ ಮನೆಗಳು ನಿರ್ಮಿಸಲಾಗುತ್ತಿರುವ ಹಿನ್ನಲೆಯಲ್ಲಿ ಕೂಡಲೇ ಮನೆ ಕಟ್ಟಡ ಕಾಮಗಾರಿ ತಾತ್ಕಾಲಿಕವಾಗಿ ತಡೆ ಹಿಡಿದು ಎಸ್.ಎಂ.ಕನಸ್ಟ್ರಕ್ಷನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಖ್ಯಅಧಿಕಾರಿ ನಿಂಗಮ್ಮ ಬಿರಾದಾರ ಅವರು ಚಿಂಚೋಳಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ಸಲ್ಲಿಸಿದ ಪತ್ರದಲ್ಲಿ ಕೋರಿದ್ದಾರೆ.
ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ ಮತ್ತು ಎಸ್.ಎಂ. ಕನಸ್ಟ್ರಕ್ಷನ್ ಗುತ್ತಿಗೆದಾರರು ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಮನೆಗಳು ನಿರ್ಮಾಣ ಮಾಡಲಾಗುತ್ತಿದೆ ಮತ್ತು ಪುರಸಭೆ ಕಾರ್ಯಾಲಯ ಕೇಳಿದ ದಾಖಲೆಗಳು ಸಲ್ಲಿಸದೇ ಕಳಪೆ ಮಟ್ಟದ ಕಾಮಗಾರಿ ನಡೆಸಿ, ಫಲಾನುಭವಿಗಳಿಗೆ ವಂಚಿಸುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿ ತಡೆ ಹಿಡಿದು, ಕಾನೂನು ಕ್ರಮ ಜರುಗಿಸಲು ಚಿಂಚೋಳಿ ಪೊಲೀಸ್ ಠಾಣೆಗೆ ಅಧಿಕಾರಿಗಳು ಪತ್ರ ಸಲ್ಲಿಸಿದ್ದಾರೆ.
ಆನಂದಕುಮಾರ ಎನ್. ಟೈಗರ್ ಅಧ್ಯಕ್ಷರು, ಪುರಸಭೆ ಚಿಂಚೋಳಿ
