ನಿರಾಶ್ರಿತರು ವಸತಿ ರಹಿತರ ಆಶ್ರಯ ಕೇಂದ್ರದ ಸದ್ಬಳಕೆ ಮಾಡಿಕೊಳ್ಳಿ : ಪೌರಾಯುಕ್ತ ಜೀವನ್ ಕೆ.

ನಿರಾಶ್ರಿತರು ವಸತಿ ರಹಿತರ ಆಶ್ರಯ ಕೇಂದ್ರದ ಸದ್ಬಳಕೆ ಮಾಡಿಕೊಳ್ಳಿ : ಪೌರಾಯುಕ್ತ ಜೀವನ್ ಕೆ.
ವಿಶ್ವ ವಸತಿ ರಹಿತರ ದಿನಾಚರಣೆ
ಶಹಾಪುರ: ಅಕ್ಟೋಬರ್, 15 ಶಹಾಪುರ: ನಗರದಲ್ಲಿ ನಿರಾಶ್ರಿತ ಮತ್ತು ವಸತಿ ರಹಿತರಿಗೆ ಆಶ್ರಯ ಕೇಂದ್ರವು ಬಹಳ ಅನುಕೂಲವಾಗಿದೆ ಎಂದು ಪೌರಾಯುಕ್ತರಾದ ಜೀವನ ಕೆ. ಅವರು ಅಭಿಪ್ರಾಯಪಟ್ಟರು.
ನಗರಸಭೆ, ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ದೀನದಯಾಳ್ ಜನ ಅಜೀವಿಕ ಯೋಜನಾ ( ಶಹರಿ) ಅಭಿಯಾನದಡಿಯಲ್ಲಿ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಡೆದ *ವಿಶ್ವ ವಸತಿ ರಹಿತರ ದಿನಾಚರಣೆ* ಅಂಗವಾಗಿ ಸಸಿಗೆ ನೀರೆರೆದು, ನಿರಾಶ್ರಿತ ಕೇಂದ್ರದ ಮಾಹಿತಿಯುಳ್ಳ ಕರಪತ್ರ ಬಿಡುಗಡೆಗೊಳಿಸಿ, ವಸತಿ ರಹಿತರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮದ ಚಾಲನೆ ನೀಡಿ ಅವರು ಮಾತನಾಡಿದರು.
ಶಹಾಪುರ ನಗರದಲ್ಲಿ ವಸತಿ ರಹಿತ ನಿರಾಶ್ರಿತರಿಗೆ ಆಶ್ರಯ ನೀಡೋ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ಯೋಜನೆಗಳನ್ನ ಜಾರಿಗೆ ತಂದಿವೆ. ಇಂತಹ ನಿರಾಶ್ರಿತರ ರಕ್ಷಣೆ ನಮ್ಮ ಕರ್ತವ್ಯ ಆಗಿದೆ ಎಂದರು.
ಆಶ್ರಯ ಇಲ್ಲದವರು ಫುಟ್ಪಾತ್ ಮೇಲೆ ರಾತ್ರಿ ಕಳೆಯ ಬಾರದು ಅಂತವರನ್ನು ಈ ಕೇಂದ್ರಕ್ಕೆ ಕಳುಹಿಸಲು ಸಾರ್ವಜನಿಕರಿಗೆ ತಿಳಿಸಿದರು.
ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ಗುರುಪಾದ ತಳವಾರ ಮಾತನಾಡಿ, ವಸತಿ ಇಲ್ಲದವರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವ ಉದ್ದೇಶದಿಂದ ಈ ಆಶ್ರಯ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ವಾಸ್ತವ್ಯ ಇರುವವರಿಗೆ ಸ್ವಯಂ ಉದ್ಯೋಗಿಗಳಾಗಲು ಸರ್ಕಾರದ ಹಲವು ಯೋಜನೆಗಳಿದ್ದು ಅವುಗಳ ಸದುಪಯೋಗ ಪಡೆಯಲು ಅಗತ್ಯ ಸಹಕಾರವನ್ನು ಇಲಾಖೆಯಿಂದ ನೀಡುತ್ತೇವೆ ಎಂದರು.
ಭಾರತಾಂಬೆ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಬೆನಕನಹಳ್ಳಿ ಅವರು ಯೋಗ ಶಿಬಿರ ನಡೆಸಿಕೊಟ್ಟು ಮಾತನಾಡಿ, ಕೊರೊನಾದಂತಾಹ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸರ್ಕಾರದ ಮಹತ್ವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ ಮತ್ತು ಸುರಪುರ ನಗರದಲ್ಲಿ ಆಶ್ರಯ ಕೇಂದ್ರವಿದ್ದು 2019 ರಿಂದ ಇಲ್ಲಿಯವರೆಗೆ ಸುಮಾರು ಐದು ಸಾವಿರ ಜನರು ಇದರ ಉಪಯೋಗ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಿಚ್ ಸಂಸ್ಥೆಯ ಮುಖ್ಯಸ್ಥರಾದ ಮತಿವಂತ ನಗರ ಸಭೆಯ ಸಿಆರಪಿ ಆದ ಸುಧಾ ಬಿರಾದಾರ ವೈದ್ಯರಾದ ರಮೇಶ್ ಸಂಸ್ಥೆಯ ವ್ಯವಸ್ಥಾಪಕ ಭೀಮಾಶಂಕರ , ಕೇರ್ಟೇಕರ್ ಮಲ್ಲಪ್ಪ, ಮಲ್ಲಿಕಾರ್ಜುನ್ , ಮಂಜುಳಾ ಸೇರಿದಂತೆ ವಸತಿ ರಹಿತರು ಉಪಸ್ಥಿತರಿದ್ದರು.