ಶಹಾಬಾದ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸನ್ಮಾನ

ಶಹಾಬಾದ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸನ್ಮಾನ

ಶಹಾಬಾದ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸನ್ಮಾನ

ಶಹಾಬಾದ: ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿ ಆಯ್ಕೆ, ನೇಮಕ ಹಾಗೂ ಪ್ರಶಸ್ತಿಗಳನ್ನು ಪಡೆದ ಶಿವಪುತ್ರ ಕರಣಿಕ, ಬಾಬುರಾವ್ ಪಂಚಾಳ ಹಾಗೂ ಶರಣಗೌಡ ಪಾಟೀಲರನ್ನು *ಆರ್.ಜಿ ಗೆಳೆಯರ ಬಳಗ*ದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜೇಶ್ ಯನಗುಂಟಿಕರ ಅಧ್ಯಕ್ಷತೆ ವಹಿಸಿದ್ದರು. ಡಿ.ಡಿ.ಓಣಿ ಜಹೀರ ಅಹಮದ್ ಪಟವೇಗಾರ, ಶಿವರಾಜ್ ಕೋರೆ, ಬಸವರಾಜ್ ಮಯೂರ, ಮಮ್ಮದ್ ಮಸ್ತಾನ, ಮೋಹನ ಹಳ್ಳಿ, ರಮೇಶ್ ಮೆಂಗನ ಹಾಗೂ ಮನೋಹರ್ ಕೋಳೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸನ್ಮಾನಿತರು ತಮ್ಮ ಅನುಭವ ಹಂಚಿಕೊಂಡು, ಯುವ ಪೀಳಿಗೆಯು ಶ್ರಮ ಹಾಗೂ ನಿಷ್ಠೆಯಿಂದ ಸಾಮಾಜಿಕ ಹಾಗೂ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕೆಂದು ಸಂದೇಶ ನೀಡಿದರು.

ವರದಿ:ನಾಗರಾಜ್ ದಂಡಾವತಿ