ವರ್ಗಾವಣೆಗೊಂಡ ಚಿಂಚೋಳಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು : ಮೋತಕಪಳ್ಳಿ ಆಗ್ರಹ

ವರ್ಗಾವಣೆಗೊಂಡ ಚಿಂಚೋಳಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು : ಮೋತಕಪಳ್ಳಿ ಆಗ್ರಹ

ವರ್ಗಾವಣೆಗೊಂಡ ಚಿಂಚೋಳಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು : ಮೋತಕಪಳ್ಳಿ ಆಗ್ರಹ

 ಚಿಂಚೋಳಿ: ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ಎನ್ ನಾಯಕ ಅವರು ಬೇರೊಂದು ತಾಲೂಕಿಗೆ ವರ್ಗಾವಣೆ ಮಾಡಿಕೊಂಡ ಹಿನ್ನಲೆಯಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಶರಣು ಪಾಟೀಲ ಮೋತಕಪಳ್ಳಿ ಅವರು ಕಲಬುರಗಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

ಹೀಗೆಂದು ಪತ್ರಿಕಾ ಪ್ರಕಟಣೆ ಹೊರಡಿಸಿ ತಿಳಿಸಿದ ಅವರು ಅಕ್ಟೊಂಬರ್ 22 ರಂದು ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಅಧೀನ ಕಾರ್ಯದರ್ಶಿಗಳು ಶಂಕರ ರಾಠೋಡ ಅವರನ್ನು ಚಿಂಚೋಳಿಯಿಂದ ಬೀದರ್ ಜಿಲ್ಲೆಯ ಔರಾದ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಖಾಲಿ ಹುದ್ದೆಗೆ ವರ್ಗಾವಣೆ ಮಾಡಿ ಅಧಿಸೂಚನೆ ಹೊರಡಿಸಿರುತ್ತಾರೆ.

 ಅಧಿಕಾರಿ ವರ್ಗಾವಣೆಯಾಗಿ ಸುಮಾರು ಎರಡು ತಿಂಗಳು ಕಳೆದರು ಸಹ ಕಲಬುರಗಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದಿಲ್ಲ. 

 ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಆದೇಶಿಸಲಾದ ವರ್ಗಾವಣೆ ಆದೇಶವನ್ನು ಪಾಲನೆ ಮಾಡದೇ ವರ್ಗಾವಣೆಗೊಂಡ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸದೇ ತಡೆಹಿಡಿದಿರುವುದು ಜಿಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ನಡೆ ಅನುಮಾನ ಮೂಡುವಂತಾಗಿದೆ ಎಂದು ಆರೋಪಿಸಿದ್ದಾರೆ. 

 ಬಿಡುಗಡೆ ಮಾಡಲು ಕೇಳಿಕೊಂಡರು ಮೇಲಾಧಿಕಾರಿಗಳು ಸಕಾರಾತ್ಮಕ ಪ್ರತಿಕ್ರಿಯೆ ಮಾಡುತ್ತಿಲ್ಲವೆಂದು ಹೇಳಿ, ವರ್ಗಾವಣೆಗೊಂಡ ಅಧಿಕಾರಿ ಕೆವಲ ಕಾಟಾ ಚಾರಕ್ಕೆ ಸೇವೆಯನ್ನು ಸಲ್ಲಿಸುತ್ತಾ ದಿನ ದುಡುತ್ತಿದ್ದಾರೆ. ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆಯು ಗ್ರಾಮೀಣ ಹಿಂದುಳಿದ ತಾಲೂಕವಾದ ಚಿಂಚೋಳಿಯಲ್ಲಿ ಅತಿ ಪ್ರಮುಖ ಹಾಗೂ ನಿರಂತರ ಜನೋಪಯೋಗಿ ಹುದ್ದೆಯಾಗಿದ್ದು, ಕೂಡಲೇ ವರ್ಗಾವಣೆಗೊಂಡ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಬೇರೊಬ್ಬ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.