ಲೇಖಕ–ರಂಗಕರ್ಮಿ–ಸಿನಿಮಾ ನಿರ್ದೇಶಕ ಮಂಜು ಪಾಂಡವಪುರರೊಂದಿಗೆ ಆಕಾಶವಾಣಿ ಧಾರವಾಡ ಸಂದರ್ಶನ
ಲೇಖಕ–ರಂಗಕರ್ಮಿ–ಸಿನಿಮಾ ನಿರ್ದೇಶಕ ಮಂಜು ಪಾಂಡವಪುರರೊಂದಿಗೆ ಆಕಾಶವಾಣಿ ಧಾರವಾಡ ಸಂದರ್ಶನ
ಧಾರವಾಡ :ಬೆಂಗಳೂರು ಮೂಲದ ಲೇಖಕ, ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕರಾದ ಮಂಜು ಪಾಂಡವಪುರ ಅವರೊಂದಿಗೆ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ವಿಶೇಷ ಸಂದರ್ಶನ ನಡೆಯಿತು.
ಈ ಸಂದರ್ಶನವನ್ನು ಆಕಾಶವಾಣಿ ಧಾರವಾಡದ ನಿರ್ದೇಶಕರಾದ ಶರಣಬಸವ ಚೋಳಿನ ನಡೆಸಿಕೊಟ್ಟರು. ಸಂದರ್ಶನದ ವೇಳೆ ಮಂಜು ಪಾಂಡವಪುರರು ತಮ್ಮ ಸಾಹಿತ್ಯಯಾನ, ರಂಗಭೂಮಿ ಅನುಭವಗಳು, ಸಿನಿಮಾ ನಿರ್ದೇಶನದ ಸವಾಲುಗಳು ಹಾಗೂ ಸಾಮಾಜಿಕ ಬದ್ಧತೆಯ ಕಲೆಯ ಮಹತ್ವದ ಕುರಿತು ಮನಮುಟ್ಟುವಂತೆ ಮಾತನಾಡಿದರು.
ಗ್ರಾಮೀಣ ಬದುಕು, ಮಾನವೀಯ ಮೌಲ್ಯಗಳು ಮತ್ತು ಸಮಾಜಮುಖಿ ಚಿಂತನೆಗಳು ತಮ್ಮ ಸೃಜನಶೀಲತೆಯ ಮೂಲವಾಗಿವೆ ಎಂದು ಅವರು ತಿಳಿಸಿದರು. ರಂಗಭೂಮಿಯಿಂದ ಸಿನಿಮಾವರೆಗೆ ತಮ್ಮ ಕಲಾ ಪಯಣದಲ್ಲಿ ಎದುರಿಸಿದ ಅನುಭವಗಳು ಯುವ ಕಲಾವಿದರಿಗೆ ಪ್ರೇರಣೆಯಾಗುವಂತಿವೆ ಎಂದು ಸಂದರ್ಶಕರು ಅಭಿಪ್ರಾಯಪಟ್ಟರು.
ಈ ಸಂದರ್ಶನ ಆಕಾಶವಾಣಿ ಧಾರವಾಡ ಕೇಂದ್ರದ ಎಲ್ಲ ಬಾನುಲಿ ಮೂಲಕ ಪ್ರಸಾರಗೊಂಡಿತು.
