ಮನವಿ ಪತ್ರ ಸಲ್ಲಿಸಲು ಬಂದ ಕನ್ನಡಪರ ಹೋರಾಟಗಾರರು ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ನಡುವೆ ಮಾತಿನ ಚಕಮುಕಿ
ಮನವಿ ಪತ್ರ ಸಲ್ಲಿಸಲು ಬಂದ ಕನ್ನಡಪರ ಹೋರಾಟಗಾರರು ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ನಡುವೆ ಮಾತಿನ ಚಕಮುಕಿ
ಕಲಬುರಗಿ: ಮನವಿ ಪತ್ರ ಸಲ್ಲಿಸಲು ಬಂದ ಕನ್ನಡಪರ ಹೋರಾಟಗಾರರು ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ನಡುವೆ ಮಾತಿನ ಚಕಮುಕಿ ನಡೆದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಪ್ರವಾಸದಲ್ಲಿರುವ ಸಚಿವ ಬೈರತಿ ಸುರೇಶ್ ಅವರಿಗೆ ಶ್ರೀ ಗಣೇಶ್ ಶಂಕರ್ ಎಂವಾಮೆAðಟ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಸಪಾಯಿ ಕರ್ಮಚಾರಿಗಳಿಗೆ ಶೋಷಣೆ ಮಾಡಿ, ಸುಮಾರು 25 ಕೋಟಿ ವ್ಯವಹಾರ ಮಾಡಿರುವ ಕುರಿತು ಶೀಘ್ರವೇ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದತ್ತು ಭಾಸಗಿ ಅವರ ನೇತೃತ್ವದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸಚಿವರಿಗೆ ಭೇಟಿಯಾಗಿ ಅಕ್ರಮದ ಕುರಿತು ತನಿಖೆ ನಡೆಸುವಂತೆ ಮನವಿ ಸಲ್ಲಿಸುವ ವೇಳೆ ಬೈರತಿ ಸುರೇಶ್ ಹಾಗೂ ಕನ್ನಡಪರ ಹೋರಾಟಗಾರ ನಡುವೆ ವಾಕ್ ಸಮರ ನಡೆದಿದೆ.
ಮನವಿ ಸಲ್ಲಿಸಲು ಬಂದ ಹೋರಾಟಗಾರರ ಮೇಲೆ ಸಚಿವರು ದರ್ಪ ತೊರಿದ್ದಾರೆ. ಗಣೇಶ್ ಶಂಕರ್ ಏಜೆನ್ಸಿ ಅವರ ಸಂಭದೀಕರದ್ದು ಎನ್ನುವ ಕಾರಣಕ್ಕ ಮನವಿ ಸ್ವೀಕರಿಸದೆ ಆಗೆ ತೆರಳಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.