ಡಿಡಿಎಲ್‌ಆರ್ ಕಚೇರಿಯಲ್ಲಿ ದಾಖಲೆಗಳ ಪ‍ರಿಶೀಲನೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು

ಡಿಡಿಎಲ್‌ಆರ್ ಕಚೇರಿಯಲ್ಲಿ ದಾಖಲೆಗಳ ಪ‍ರಿಶೀಲನೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು

ಡಿಡಿಎಲ್‌ಆರ್ ಕಚೇರಿಯಲ್ಲಿ ದಾಖಲೆಗಳ ಪ‍ರಿಶೀಲನೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು

ಕಲಬುರಗಿ: ಇತ್ತೀಚೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಂದ ದಾಳಿಗೊಳಗಾಗಿ ಸದ್ಯ ಅಮಾನತುಗೊಂಡಿರುವ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರಾಗಿದ್ದ ಪ್ರವೀಣ್ ಜಾಧವ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಕಚೇರಿಯಲ್ಲಿನ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದರು. ಸಿಸಿ ಟಿವಿ ಕ್ಯಾಮೆರಾ, ಡಿವಿಆರ್ ಸೇರಿದಂತೆ ಹಲವಾರು ಕಡತಗಳನ್ನು ಪರಿಶೀಲನೆ ನಡೆಸಿದ್ದರು. ಕಂಪ್ಯೂಟರ್‌ನಲ್ಲಿರುವ ಕಡತಗಳು, ಚಲನ ವಲನ ರಿಜಿಸ್ಟರ್, ಹಾಜರಾತಿ ಪುಸ್ತಕ ಮತ್ತು ಕ್ಯಾಶ್ ರಿಜಿಸ್ಟರ್ ಮಾಹಿತಿ ಪರಿಶೀಲಿಸಿದರು. ಪಂಚನಾಮೆ ನಡೆಸಿ ಸಿಬ್ಬಂದಿಯ ವಿಚಾರಣೆ ನಡೆಸಿದ್ದರು.

ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ರಾಜಶೇಖರ್ ಹಳಗೋಧಿ, ಸಿಬ್ಬಂದಿಯಾದ ಸಿದ್ದರಾಮ, ಅನಿಲ್, ಬಸವರಾಜ, ಅಶೋಕ, ವಿಷ್ಣು, ಮಲ್ಲಿಕಾರ್ಜುನ ಸಂಗೋಳಗಿ ಸ್ಥಳದಲ್ಲಿದ್ದರು.