ಬೆಂಕಿ ಉಗುಳಿತ್ತು ಚಿಂಚೋಳಿ ಕೋಲಿ,ಕಬ್ಬಲಿಗ ಸಮಾಜ

ಶಹಾಬಾದ, ಮುತ್ತಗಾ ಗ್ರಾಮದ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ,ಭಗ್ನ: ಆಕ್ರೋಶ

ಬೆಂಕಿ ಉಗುಳಿತ್ತು ಚಿಂಚೋಳಿ ಕೋಲಿ,ಕಬ್ಬಲಿಗ ಸಮಾಜ

ಚಿಂಚೋಳಿ :ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿ, ವಿರೂಪಗೊಳಿಸಿದನ್ನು ಖಂಡಿಸಿ, ತಾಲೂಕ ಕೋಲಿ, ಕಬ್ಬಲಿಗ ಸಮಾಜ ಹಾಗೂ ಅಖಿಲ ಭಾರತೀಯ ಕೋಲಿ ಸಮಾಜ ಚಿಂಚೋಳಿ ತಾಲೂಕ ಘಟಕ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಿಂದ ಶ್ರೇಷ್ಠ ವಚನಕಾರ ಅಂಬಿಗರ ಚೌಡಯ್ಯ, ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ಕೈಗೊಂಡು, ಟೈರ್ ಗಳಿಗೆ ಬೆಂಕಿ ಹಂಚಿ ಬೆಂಕಿ ಉಗುಳಿತ್ತು ಕೋಲಿ ಸಮಾಜ.

ಬಳಿಕ ಜಿಲ್ಲಾಧ್ಯಕ್ಷ ರವಿರಾಜ ಕೊರವಿ, ಸುರೇಶ ಭಂಟ, ಅನೀಲಕುಮಾರ ಹುಡದಳ್ಳಿ, ಲಕ್ಷ್ಮಣ ಆವಂಟಿ, ಮಾರುತಿ ಗಂಜಗಿರಿ, ಗೌತಮ್ ಬೊಮ್ಮನಳ್ಳಿ, ಕೆ.ಎಂ.ಬಾರಿ, ಶರಣಪ್ಪ ತಳವಾರ, ಗೋಪಾಲ ಗಾರಂಪಳ್ಳಿ, ಹಣಮಂತ ಪೂಜಾರಿ ಅವರು ಮಾತನಾಡಿ, ಹನ್ನೇರಡನೇ ಶತಮಾನದ ವಚನಕಾರರಲ್ಲಿ ಶ್ರೇಷ್ಠ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರು ಆಗಿದ್ದಾರೆ. ಇಂಥಹ ಶ್ರೇಷ್ಠ ವಚನಕಾರನ ಮೂರ್ತಿಗೆ ಕಿಡಿಗೇಡಿಗಳು ಕೆಸರು ಎರಚಿ ವಿರೂಪಗೊಳಿಸಿ, ಕೈಗಳನ್ನು ಮುರಿದು ಭಗ್ನಗೊಳಿಸಿರುವುದು ಸಮಾಜಕ್ಕೆ ನೋವುಂಟು ಮಾಡಿದೆ. ಜಿಲ್ಲೆಯಲ್ಲಿ ಘಟನೆ ನಡೆದು 6 ದಿನಗಳು ಕಳೆದರೂ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಸರಕಾರ ವಿಫಲವಾಗಿದೆ. ಇದ್ದರಿಂದ ರಾಜ್ಯದಲ್ಲಿ ಸರಕಾರ ಇದೆಯೋ ಅಥವಾ ಸತೀದಿಯೋ ಎಂಬ ಭಾವನೆ ಸಮಾಜದಲ್ಲಿ ಮೂಡುತ್ತಿದೆ. ಕೋಲಿ, ಕಬ್ಬಲಿಗ ಸಮಾಜ ಹಿಂದುಳಿದ ಸಮಾಜವಾಗಿದೆ. ಮಾನವನ ಸಮ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶರಣ ಅಂಬಿಗರ ಚೌಡಯ್ಯನಿಗೆ ಆಗಿರು ಅವಮಾನ ಕೋಲಿ ಸಮಾಜಕ್ಕೆ ಅಷ್ಟೇ ಅಲ್ಲ. ಇಡೀ ಮಾನವ ಕುಲಕ್ಕೆ ಆಗಿರುವ ಅವಮಾನವಾಗಿದೆ. ಮುತ್ತಗಾ ಘಟನೆಗೆ ಕಾರಣರಾದ ಯಾರೆಗಿದ್ದರೂ ಸರಕಾರ ಕೂಡಲೇ ಅಂತಹ ಕಿಡಿಗೇಡಿಗಳಿಗೆ ಬಂಧಿಸಿ, ಯಾವುದೇ ಶರಣರಿಗೂ ಇಂತಹ ಅವಮಾನ, ಅಪಮಾನಗಳು ಮುಂದೆ ಜರುಗದಂತೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಚಿಂಚೋಳಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರತಿಭಟನೆಕಾರರು ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಕೋಟಪಲ್ಲಿ, ನಾರಾಯಣ ನಾಟಿಕಾರ, ಕೃಷ್ಣ, ಗುಂಡಪ್ಪ ಅವರಾದಿ, ರಾಜು ತಳವಾರ, ಕಾಶಿನಾಥ ನಾಟಿಕಾರ ಸೇರಿದಂತೆ ಸಮಾಜದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.