ನಾಳೆ ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ 101 ಸಾಧಕರಿಗೆ "ಕರ್ನಾಟಕ ಹೆಮ್ಮೆಯ ಕನ್ನಡಿಗ" ಪ್ರಶಸ್ತಿ ಪ್ರದಾನ : ಮೋಹನ್ ಎನ್. ಪಾಟೀಲ್
ನಾಳೆ ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ 101 ಸಾಧಕರಿಗೆ "ಕರ್ನಾಟಕ ಹೆಮ್ಮೆಯ ಕನ್ನಡಿಗ" ಪ್ರಶಸ್ತಿ ಪ್ರದಾನ : ಮೋಹನ್ ಎನ್. ಪಾಟೀಲ್
ಕಲಬುರಗಿ - ಹಾಯ್ ಪಾಯಿಂಟ್ ಕರ್ನಾಟಕ ಕನ್ನಡ ಮಾಸ ಪತ್ರಿಕೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಕಲಬುರ್ಗಿ ಜಿಲ್ಲಾ ರೈತ ಅನ್ನದಾತನಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ 101 ಗಣ್ಯರಿಗೆ ಕರ್ನಾಟಕ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ ರವಿವಾರ ದಿನಾಂಕ 29-09-2024ರಂದು ಮಧ್ಯಾಹ್ನ 12:30ಕ್ಕೆ ನಗರದ ಎಸ್.ಎಮ್. ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಾಯ್ ಪಾಯಿಂಟ್ ಕರ್ನಾಟಕ ಕನ್ನಡ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಮೋಹನ್ ಎನ್. ಪಾಟೀಲ್ ಅವರು ತಿಳಿಸಿದ್ದಾರೆ
ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಠ ಸಾವಳಗಿ ಬಿ. ಶ್ರೀ ಗುರುನಾಥ ಮಹಾಸ್ವಾಮಿಗಳು ಹಾಗೂ ದೇವಿ ಆಶ್ರಮ ಕೋಲಾರದ ಶ್ರೀ ಶಿವಶರಣೆ ಶ್ರೀ ವಿದ್ಯಾ ಜ್ಞಾನೇಶ್ವರಿ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮಠ ಚೌಡದಾನಪೂರ್ ಜಿಲ್ಲಾ ಹಾವೇರಿಯ ಶ್ರೀ ಸದ್ಗುರು ಪೂಜ್ಯಶ್ರೀ ಶಾಂತ ಭೀಷ್ಮ ಮಹಾಸ್ವಾಮಿಗಳು ಹಾಗೂ ಗಣೇಶ್ ಗುಡ್ಡ ರಟಗಲ್ ಶ್ರೀ ಸದ್ಗುರು ಪೂಜ್ಯಶ್ರೀ ರೇವಣಸಿದ್ದ ಮಹಾಸ್ವಾಮಿಗಳು ಶರಣರ ದಿವ್ಯ ಸಾನಿಧ್ಯ ವಹಿಸಲಿದ್ದು ಶಾಸಕರಾದ ಖನಿಜಾ ಫಾತಿಮಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಜ್ಯೋತಿ ಬೆಳಗಿಸುವರು.
ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ಶಾಸಕರಾದ ಎಂ.ವೈ.ಪಾಟೀಲ್ ನೆರವೇರಿಸುವರು . ಶಾಸಕ ಶಶಿಲ್ ಜಿ. ನಮೋಶಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಕೆಕೆಆರ್‌ಡಿಬಿ ಅಧ್ಯಕ್ಷ ಶ್ರೀ ಅಜಯ್ ಸಿಂಗ್ ಅವರು ಸಮಾರಂಭದ ಚಾಲನೆ ನೀಡುವರು
ನೂತನ ಸಂಘಟನೆ ಉದ್ಘಾಟನೆಯನ್ನು ಶಾಸಕ ಬಸವರಾಜ್ ಮತ್ತಿಮೂಡ ನೆರವೇರಿಸುವರು . ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರವರು ಭಾವುಟವನ್ನು ತೋರಿಸುವರು ಮಹಾನಗರ ಪಾಲಿಕೆ ಮಹಾ ಪೌರರಾದ ಯಲ್ಲಪ್ಪ ನಾಯ್ಕೊಡಿಯವರು ಗೌರವ ಅಧ್ಯಕ್ಷತೆ ವಹಿಸ ಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಪ ಮಹಾಪೌರ ಹೀನಾ ಬೇಗಂ. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಿತಿನ್ ವಿ.ಗುತ್ತೇದಾರ್ ಆರ್.ಕೆ ಪಾಟೀಲ್. ನೀಲಕಂಠ ಮೂಲಗೆ. ಸಂತೋಷ್ ಬಿಲಗುಂದಿ. ಕಸಾಪ ಅಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ. ರಾಜು ಜಿ.ತೆಗ್ಗಳ್ಳಿ. ಮಹಾಂತೇಶ್ ಪಾಟೀಲ್. ಜಿ.ಎಂ ಕೊರಬು. ಡಾ. ಎಸ್.ಕೆ ಮೆಲ್ಕಾರ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ್. ಪ್ರಕಾಶ್ ಜಮಾದಾರ್. ರಾಜೇಶ್ ಗುತ್ತೇದಾರ್. ಅವಣ್ಣ ಗೌಡ ಪೊಲೀಸ್ ಪಾಟೀಲ್. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ್ ಕೋಬಾಳ್. ರಮೇಶ್ ನಾಟಿಕರ್. ಅಂಬರೀಶ್ ಕಾಮನಕೇರಿ. ದಿಲೀಪ್ ಆರ್ ಪಾಟೀಲ್. ಭಾಷಾ ಪಟೇಲ್ ಹಸರುಗುಂಡಗಿ. ಭೀಮಶಂಕರ್ ಹೊನಕೇರಿ. ಬಸವರಾಜ್ ಜಮಾದಾರ್. ಮಂಜುನಾಥ್ ಬೆಂಗಳೂರು. ಅಶೋಕ್ ಮಂಡ್ಯ. ಶೆಳ್ಳಗಿ ದೇವೇಂದ್ರ ಶಿವಕುಮಾರ್ ತೋಟನಳ್ಳಿ, ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.