371ನೇ ಜೇ ಅಡಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಗುಲಬರ್ಗಾ ವಿ.ವಿ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆಯವರಿಗೆ ಹೋರಾಟ ಸಮಿತಿಯ ಆಗ್ರಹ

371ನೇ ಜೇ ಅಡಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಗುಲಬರ್ಗಾ ವಿ.ವಿ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆಯವರಿಗೆ ಹೋರಾಟ ಸಮಿತಿಯ ಆಗ್ರಹ

371ನೇ ಜೇ ಅಡಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಗುಲಬರ್ಗಾ ವಿ.ವಿ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆಯವರಿಗೆ ಹೋರಾಟ ಸಮಿತಿಯ ಆಗ್ರಹ.

ಕಲಬುರಗಿ:ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಐಟಿಬಿಟಿ,ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ 371ನೇ ಜೇ ಕಲಂ ಅನುಷ್ಠಾನ ಸಮಿತಿಯ ಅಧ್ಯಕ್ಷರು ಆದ ಪ್ರಿಯಾಂಕ್ ಖರ್ಗೆಯವರಿಗೆ ಭೇಟಿ ಮಾಡಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಅದರಲ್ಲೂ ಶಿಕ್ಷಕರ ನೇಮಕಾತಿ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿ ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿ ಮನವಿ ಪತ್ರ ಸಲ್ಲಿಸಲಾಯಿತು. 

 ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ವಿಶೇಷವಾಗಿ ಕಲ್ಯಾಣದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ತುರ್ತಾಗಿ ಶಿಕ್ಷಕರ ನೇಮಕಾತಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಯಂ ಕುಲಪತಿಗಳ ನೇಮಕಾತಿಗೆ ಪೂರಕವಾಗಿ ವಿಶ್ವವಿದ್ಯಾಲಯದಲ್ಲಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಗುಲಬರ್ಗಾ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲು, ಎಲ್ ಆ್ಯಂಡ್ ಟಿ ನಾಗರಿಕರ ಮೇಲೆ ನೀರು ಸರಬರಾಜಿಗೆ ಸಂಬಂಧಿಸಿ ಹಿಂದಿನ ಬಾಕಿ ಹೆಸರಿನಲ್ಲಿ ದುಬಾರಿ ಹಣ ವಸೂಲಿ ಮಾಡುತ್ತಿರು ಎಕ ಪಕ್ಷಿಯ ಧೋರಣೆಯ ಬಗ್ಗೆ ತಕ್ಷಣ ಗಮನ ಹರಿಸಲು, ಕಲಬುರಗಿ ನಗರದ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಗಮನ ಹರಿಸಲು , ಬರುವ ದಿನಗಳಲ್ಲಿ 371ನೇ ಜೇ ಕಲಂ ಅನುಷ್ಠಾನ ಸಂಪುಟ ಉಪ ಸಮಿತಿಯ ಸಮಿತಿಯ ಸಭೆ ಕಲಬುರಗಿಯಲ್ಲಿ ನಡೆಸಲು ಅದರಂತೆ ಕಲ್ಯಾಣ ಕರ್ನಾಟಕದ ಪ್ರವಾಸಿ ತಾಣಗಳ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ ಲಕ್ಷ್ಮಣ ದಸ್ತಿಯವರು ವಿವರಿಸಿದ ಪ್ರಮುಖ ಅಂಶಗಳ ಬಗ್ಗೆ ಗಂಭೀರವಾಗಿ ಆಲಿಸಿದ ಸಚಿವ ಪ್ರಿಯಾಂಕ್ ಖರ್ಗೆಯವರು ಈ ಮಹತ್ವದ ವಿಷಯಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ಹಿರಿಯ ಪರಿಣಿತ ತಜ್ಘರಾದ ಪ್ರೊ.ಆರ್.ಕೆ.ಹುಡಗಿ ,

ಡಾ.ಬಸವರಾಜ ಕುಮ್ನೋರ್,ಡಾ.ಮಾಜಿದ ದಾಗಿ ರೌಫ ಖಾದ್ರಿ, ಕುಮಾರ್ ಸ್ವಾಮಿ,ಅಸ್ಲಂ ಚೌಂಗೆ,ರಾಜು ಜೈನ,ಡಾ.ಮಂಜೂರ ಡೆಕ್ಕನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು

.