ಸಂವಿಧಾನಬದ್ಧ ಹಕ್ಕಿಗೆ ಧಕ್ಕೆ ಬೇಡ ತಳವಾರ ಮಹಾಸಭಾ ಸರಕಾರಕ್ಕೆ ಖಡಕ ಎಚ್ಚರಿಕೆ
ಸಂವಿಧಾನಬದ್ಧ ಹಕ್ಕಿಗೆ ಧಕ್ಕೆ ಬೇಡ ತಳವಾರ ಮಹಾಸಭಾ ಸರಕಾರಕ್ಕೆ ಖಡಕ ಎಚ್ಚರಿಕೆ
ಕಲಬುರಗಿ: ಸಂವಿಧಾನಬದ್ದ ಹಕ್ಕಿಗೆ ದಕ್ಕೆ ಬೇಡ ನ್ಯಾಯಾಲಯದ ನಿರ್ದೇಶನ ಪಾಲಿಸಲು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಖಡಕ ಎಚ್ಚರಿಕೆ ನೀಡಿದೆ. ತಳವಾರ ಜಾತಿಯನ್ನು ಕೇಂದ್ರ ಸರ್ಕಾರವು ಸಂವಿಧಾನಬದ್ದವಾಗಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿದೆ. ಉಚ್ಚ ನ್ಯಾಯಾಲಯವು ತಳವಾರ ಜಾತಿ ಜನರಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡಲು ನಿರ್ದೇಶನ ನೀಡಿದೆ. ಅದನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.
ತಳವಾರ ಮಹಾಸಭಾ ಜಿಲ್ಲಾ ಅಧ್ಯಕ್ಷ ಚಂದ್ರಕಾAತ ದಶರಥ ತಳವಾರ ಮಾತನಾಡಿ ತಳವಾರ ಜಾತಿಯ ಜನರಿಗೆ ಸಂವಿಧಾನಬದ್ದವಾಗಿ ದೊರೆತಿರುವ ಎಸ್.ಟಿ ಸೌಲಭ್ಯದಿಂದ ವಂಚಿಸಲು ವಾಲ್ಮಿಕಿ ಸಮಾಜದ ಕೆಲವರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹವರ ಮಾತು ಕೇಳಿ ತಳವಾರ ಜಾತಿ ಜನರಿಗೆ ರಾಜ್ಯ ಸರ್ಕಾರ ಅನ್ಯಾಯದ ಜೊತೆಗೆ ಮೋಸ ಮಾಡಲು ತೆರೆಮರೆಯಲ್ಲಿ ಸಂಚು ನಡೆಸುತ್ತಿದೆ ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.
ಬಿಜೆಪಿ ಹಿರಿಯ ಮುಖಂಡ ಅವಣ್ಣ ಮ್ಯಾಕೇರಿ ಮಾತನಾಡಿ ಬೇಡ ವಾಲ್ಮಿಕಿ ಸಮುದಾಯಕ್ಕೆ ಸೇರಿದ ಶಾಸಕರು, ಸಚಿವರು, ಸಂಸದರು ಇದ್ದಾರೆ. ಅವರೆಲ್ಲರೂ ಸರ್ಕಾರದ ಭಾಗವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾವುದೇ ಒತ್ತಡಕ್ಕೆ ಮಣ ಯಬಾರದು. ಅನಗತ್ಯ ಗೊಂದಲ ಸೃಷ್ಟಿಸಿಬತಳವಾರ ಜಾತಿಗೆ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದರು.
ತಳವಾರ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ರಾಜವಾಳ ಮಾತನಾಡಿ ತಳವಾರ ಜಾತಿಯ ಜನರಿಗೆ ಎಸ್.ಟಿ ಸೌಲಭ್ಯ ಸಿಗಬಾರದು ಎಂದು ಸುಳ್ಳು ದೂರು ನೀಡುತ್ತಿರುವುದು ಖಂಡನೀಯ. ತಳವಾರ ಜಾತಿಯವರಿಗೆ ಯಾವುದೇ ಜಾತಿಜನಾಂದವರಿAದ ಎಸ್.ಟಿ ಸೌಲಭ್ಯ ಸಿಕ್ಕಿಲ್ಲ. ಅದು ಸಂವಿಧಾನ ನೀಡಿದ ಹಕ್ಕು ಮತ್ತು ಸೌಲಭ್ಯ. ಎಸ್.ಟಿ ಸೌಲಭ್ಯಯಾವುದೇ ಒಂದು ಜಾತಿಯ ಸೊತ್ತು ಅಲ್ಲ. ಇನ್ನೊಬ್ಬರಿಗೆ ಸಿಗುವ ಸೌಲಭ್ಯ ಕೊಡಬೇಡಿ ಎಂದು ಹೇಳಲು ಯಾರಿಗೂ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಳವಾರ ಮಹಾಸಭಾ ಜೇವರ್ಗಿ ತಾಲೂಕಾಧ್ಯಕ್ಷ ಗಿರೀಶ ತುಂಬಗಿ ಮಾತನಾಡಿ ಅಕ್ಕಪಕ್ಕ, ಸುತ್ತಾಮುತ್ತಾ ಇರುವವರು ತಮ್ಮ ಅಧಿಕಾರ ಮತ್ತು ಹುದ್ದೆಯ ದುರುಪಯೋಗ ಮಾಡಿಕೊಂಡು ತಳವಾರ ಜಾತಿ ವಿರುದ್ಧ ಸಂಚು ನಡೆಸಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದನ್ನು ಖಂಡಿಸುತ್ತೇವೆ. ಒಂದು ವೇಳೆ ತಳವಾರ ಜಾತಿಯ ಜನರನ್ನು ಕೆರಳಿಸಿದರೆ ಅಂತಹವರ ವಿರುದ್ಧವೇ ನೇರ ಹೋರಾಟಕ್ಕಿಳಿಯುತ್ತೇವೆ ಎಂದು ಎಚ್ಚರಿಸಿದರು.
ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಬೊಸಲೆ ಹಾಗೂ ಜಿಲ್ಲಾ ಕಾರ್ಯದರ್ಶಿ ಮಾನೆ ಮಾತನಾಡಿ ತಳವಾರ ಜಾತಿಯ ಜನರು ಕಾನೂನುಬದ್ದವಾಗಿ ಎಸ್.ಟಿ ಸೌಲಭ್ಯ ಪಡೆತ್ತಿರುವುದು ಯಾವುದೇ ಒಂದು ಜಾತಿಯ ಸೌಲಭ್ಯ ಕಸಿದುಕೊಂಡಿದ್ದಲ್ಲ. ಸಂವಿಧಾನ ನೀಡಿದ ಹಕ್ಕಿನಿಂದ ಮಾತ್ರ ತಳವಾರ ಜನರು ಎಸ್.ಟಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅರಿತುಕೊಳ್ಳಬೇಕು. ಎಸ್.ಟಿ ಸೌಲಭ್ಯ ಎಂಬುದು ಯಾರಪ್ಪನ ಆಸ್ತಿಯಲ್ಲ ಹೀಗಾಗಿ ತಳವಾರ ಸಮುದಾಯಕ್ಕೆ ಯಾವುದೇ ರೀತಿ ಅನ್ಯಾವಾಗಬಾರದು ಈ ಶೋಷಿತ ಸಮುದಾಯ ಜೋತೆ ಬಹುಜನ ಸಮಾಜ ಪಾರ್ಟಿ ಯಾವುತ್ತು ಇರುತ್ತದೆ ಎಂದರು.
ಇದಕ್ಕೂ ಮುಂಚೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾದ ಪ್ರತಿಭಟನೆ ಮೆರವಣ ಗೆ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಯವರೆಗೆ ಮಾಡಲಾಯಿತು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಮೈಲಾರಿ ಶೆಳ್ಳಗಿ,ತಳವಾರ ಮಹಾಸಭಾದ ರಾಜ್ಯ ನಿರ್ದೇಶಕ ಪೃಥ್ವಿರಾಜ ನಾಮದಾರ, ನಗರ ಅಧ್ಯಕ್ಷ ರಾಜೇಂದ್ರ ಶಿರಸಗಿ, ಕಮಲಾಪೂರ ತಳವಾರ ಮಹಾಸಭಾ ತಾಲೂಕಾಧ್ಯಕ್ಷ ರವಿ ಡೊಂಗರಗಾಂವ್, ಮುಖಂಡರಾದ ಸುನೀತಾ ತಳವಾರ, ಗುರುನಾಥ ಹಾವನೂರ, ನಾಗಣ್ಣ ಕೆ.ತಳವಾರ, ಮಲ್ಲಿಕಾರ್ಜುನ ಸೇಡಂ, ಪ್ರಕಾಶ ದಂಡೋತಿ, ಮುನ್ನಪ್ಪ ತಳವಾರ, ಶಿವಲಿಂಗಪ್ಪ ಹಾಗರಗುಂಡಗಿ, ಶಿವರಾಜ ತಳವಾರ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.