ಮುಕ್ತ ವಿವಿ: 2025-26ಕ್ಕೆ ಕೋರ್ಸ್‌ಗಳ ಪ್ರವೇಶ ಆರಂಭ

ಮುಕ್ತ ವಿವಿ: 2025-26ಕ್ಕೆ ಕೋರ್ಸ್‌ಗಳ ಪ್ರವೇಶ ಆರಂಭ

ಮುಕ್ತ ವಿವಿ: 2025-26ಕ್ಕೆ ಕೋರ್ಸ್‌ಗಳ ಪ್ರವೇಶ ಆರಂಭ

ಕಲ್ಯಾಣ ಕಹಳೆ ವಾರ್ತೆ - ಕಲಬುರಗಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಮೈಸೂರಿನ ಮುಕ್ತ ಗಂಗೋತ್ರಿ ಕೇಂದ್ರದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ 37 ಪ್ರಾದೇಶಿಕ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ [www.ksoumysuru.ac.in](http://www.ksoumysuru.ac.in) ವೆಬ್‌ಸೈಟ್‌ ಮೂಲಕ ಅಥವಾ ಪ್ರಾದೇಶಿಕ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು:

ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಬಿಎಸ್‌ಡಬ್ಲ್ಯು, ಬಿಎಲ್‌ಐಬಿ, ಬಿಎಸ್ಪಿ ಕೋರ್ಸ್‌ಗಳಿಗೆ ಪದವಿ ಪ್ರವೇಶ ದೊರೆಯುತ್ತದೆ. ಎಂಎ, ಎಂ.ಕಾಂ, ಎಂಬಿಎ, ಎಂಎಸ್ಸಿ, ಎಂಎಲ್‌ಐಬಿ, ಎಂಸಿಎ, ಎಂಎಸ್‌ಡಬ್ಲ್ಯು ಸೇರಿದಂತೆ ಒಟ್ಟು 70 ಮುಕ್ತ ಮತ್ತು ದೂರ ವಿದ್ಯಾಭ್ಯಾಸ (IDEAL) ಕೋರ್ಸ್‌ಗಳು ಲಭ್ಯವಿವೆ ಎಂದು ತಿಳಿಸಿದರು.

ವೈಶಿಷ್ಟ್ಯಗಳು:

* 10 ಆನ್‌ಲೈನ್ ಕೋರ್ಸ್‌ಗಳಿಗೆ ಪ್ರವೇಶ ಲಭ್ಯವಿದೆ.

* ಸ್ವಯಂ ಬೋಧನಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.

* ಭವಿಷ್ಯದಲ್ಲಿ ಪ್ರವಾಸೋದ್ಯಮ ಮತ್ತು ಭೂವಿಜ್ಞಾನ ಕೋರ್ಸ್‌ಗಳು ಆರಂಭಿಸಲು ಯೋಜನೆ.

* 10 ಬಿಇಡ್ ಕಲಿಕಾರ್ಥಿ ಸಹಾಯ ಕೇಂದ್ರಗಳ ಸ್ಥಾಪನೆ.

* ದ್ವಿಪದವಿ ಪಡೆಯುವ ಅವಕಾಶ.

* ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ-ಸೆಟ್, ನೀಟ್, ಯುಪಿಎಸ್‌ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ ಹಾಗೂ ಬ್ಯಾಂಕಿಂಗ್ ತರಬೇತಿ.

ಫೀಸ್‌ ವಿನಾಯಿತಿ ಸೌಲಭ್ಯ:

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು, ಹಾಲಿ ಹಾಗೂ ನಿವೃತ್ತ ಸೈನಿಕ ವಿದ್ಯಾರ್ಥಿಗಳು, ಆಟೋ ಮತ್ತು ಕ್ಯಾಬ್ ಚಾಲಕರು ಹಾಗೂ ಅವರ ಕುಟುಂಬದವರಿಗೆ ಬೋಧನಾ ಶುಲ್ಕದಲ್ಲಿ ವಿನಾಯಿತಿ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಸಂಗಮೇಶ ಹಿರೇಮಠ ಹಾಗೂ ಹಣಮಂತ ಉಪಸ್ಥಿತರಿದ್ದರು.

-