ಸಂಗೀತಕ್ಕೆ ನೋವು ಮರೆಸುವ ಶಕ್ತಿ ಇದೆ - ಬಸವರಾಜ ಗೋರ್ಜಿ

ಸಂಗೀತಕ್ಕೆ ನೋವು ಮರೆಸುವ ಶಕ್ತಿ ಇದೆ - ಬಸವರಾಜ ಗೋರ್ಜಿ
ಶಹಾಪುರ : ಸಂಗೀತ ಆಲಿಸುವುದರಿಂದ ಮನಸ್ಸಿಗೆ ಮುದ ನೀಡುವುದರ ಜೊತೆಗೆ,ಮನುಷ್ಯನ ಕೆಲವೊಂದು ಗಂಭೀರ ಕಾಯಿಲೆಗಳನ್ನು ದೂರಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ನಿವೃತ್ತ ಶಿಕ್ಷಕ ಬಸವರಾಜ್ ಗೋರ್ಜಿ ಹೇಳಿದರು.
ನಗರದ ಮಾತೃ ಛಾಯಾ ಶಿಕ್ಷಣ ಸಂಸ್ಥೆಯಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಸಸಿಗೆ ನೀರು ಊಣಿಸುವುದುಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿರವಾಳ ವಲಯ ಕಸಾಪ ಅಧ್ಯಕ್ಷ ಮಲ್ಲಣ್ಣ ಹೊಸಮನಿ ಮಾತನಾಡಿ,ಎಲೆ ಮರೆಕಾಯಿಯಂತಿರುವ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆ ಒದಗಿಸಿ ಕೊಟ್ಟು ನಿರಂತರವಾಗಿ ಅವರನ್ನು ಗುರುತಿಸುವ ಕೆಲಸ ಕಲಾನಿಕೇತನ ಟ್ರಸ್ಟ್ ಮಾಡುತ್ತಿದೆ ಎಂದು ನುಡಿದರು.
ಭೀ.ಗುಡಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ದೀಪಿಕಾ ಮಾತನಾಡಿ ಮಕ್ಕಳ ಅಭಿರುಚಿಗೆ ತಕ್ಕಂತೆ ಅವರಲ್ಲಿರುವ ಕಲೆಯನ್ನು ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ ಎಂದು ಹೇಳಿದರು.
ಸಮಾರಂಭದ ವೇದಿಕೆ ಮೇಲೆ ದಲಿತ ಪರ ಸಂಘಟನೆಯ ಮುಖಂಡರಾದ ಅಶೋಕ್ ಹೊಸಮನಿ,ಶಿಕ್ಷಕರು ಹಾಗೂ ಜಾನಪದ ಕಲಾವಿದರಾದ ಶ್ರೀಶೈಲ್ ಹದಗಲ್,ಟ್ರಸ್ಟಿನ ಅಧ್ಯಕ್ಷ ಬಸವರಾಜ ಸಿನ್ನೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು ತಿಪ್ಪಣ್ಣ ಕ್ಯಾತನಾಳ ಅಧ್ಯಕ್ಷತೆ ವಹಿಸಿದ್ದರು,
ಕಲಾವಿದರಾದ ಪಂಡಿತ್ ಟೋಕಾಪುರ,ಅವರಿಂದ ಸುಗಮ ಸಂಗೀತ,ಈಶ್ವರಪ್ಪ ಜಿನಕೇರಿ ಜಾನಪದ ಸಂಗೀತ,ಭೀಮರಾಯ ಗುಳೇದ್ ತತ್ವಪದ,ಬಸವರಾಜ ವಿಶ್ವಕರ್ಮ ವಚನ ಗಾಯನ ಸೇರಿದಂತೆ ಹಲವಾರು ಸಂಗೀತ ಕಾರ್ಯಕ್ರಮಗಳು ಜರುಗಿದವು,