ಹೆಚ್ಚುವರಿ ಮತದಾರರನ್ನು ಬೇರೆ ಭೂತ ಸೇರ್ಪಡೆಗೆ ವಿರೋಧ | ಮತದಾನ ಕೇಂದ್ರ ಅದೇ ವಾರ್ಡ ನಲ್ಲಿ ಮುಂದುವರೆಸಲು ಮನವಿ
| ಹೆಚ್ಚುವರಿ ಮತದಾರರನ್ನು ಬೇರೆ ಭೂತ ಸೇರ್ಪಡೆಗೆ ವಿರೋಧ |
ಮತದಾನ ಕೇಂದ್ರ ಅದೇ ವಾರ್ಡ ನಲ್ಲಿ ಮುಂದುವರೆಸಲು ಮನವಿ
ನಾಗರಾಜ್ ದಂಡಾವತಿ ವರದಿ ಕಲ್ಯಾಣ ಕಹಳೆ ವಾರ್ತೆ
ಶಹಾಬಾದ : - ಭಾರತೀಯ ಜನತಾ ಪಕ್ಷ ಶಹಾಬಾದ ಮಂಡಲ ವತಿಯಿಂದ ನಗರ ವ್ಯಾಪ್ತಿಯ ಮತದಾರರ ಮತದಾನ ಕೇಂದ್ರ ಮತ್ತು ಮತದಾರರ ವಾಸಸ್ಥಳ ಬೇರೆ, ಮನದಾನ ಬೇರೆ ಕಡೆ ಹೆಸರು ಹೋಗುವದನ್ನು ತಡೆಯಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಶಹಾಬಾದ ನಗರದ ವ್ಯಾಪ್ತಿಯ ಪ್ರತಿ ಬೂತಿನಲ್ಲಿ ೧೨೦೦ ಮತದಾರರ ಕ್ಕಿಂತ ಹೆಚ್ಚಾಗಿರುವ ಮತದಾರರನ್ನು ಬೇರೆ, ಬೇರೆ ಬೂತಗಳಿಗೆ ಸೇರಿಸುತ್ತಿರುವದಕ್ಕೆ ವಿರೋಧ ವ್ಯಕ್ತಪಡಿಸಿ, ಅದೇ ವಾರ್ಡನಲ್ಲಿ ಹೊಸ ಭೂತ ನಿರ್ಮಿಸಿ ಅಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜೊತೆಗೆ ನಗರ ಸಭೆಯ ವಾರ್ಡ ಸಂಖ್ಯೆ 7, 16 ಮತ್ತು 20 ರ ಮತದಾನ ಕೇಂದ್ರಗಳನ್ನು ಅದೇ ವಾರ್ಡಿನಲ್ಲಿರುವ ಸರಕಾರಿ ಶಾಲೆ ಅಥವಾ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಲಾಯಿತು.
ಆಯಾ ವಾರ್ಡಿನ ಮತದಾರರು ಅದೇ ವಾರ್ಡ ಮತ್ತು ಅಲ್ಲೆ ಮತ ಚಲಾಯಿಸುವ ಹಾಗೆ ಮಾಡಬೇಕು ಎಂದು ತಾಲ್ಲೂಕ ತಹಶೀಲ್ದಾರ ರಾದ ನೀಲಪ್ರಭಾ ಬಬಲಾದ ಅವರಿಗೆ ಮನವಿ ಪತ್ರವನ್ನು ಬಿಜೆಪಿ ಮಂಡಲ ಅಧ್ಯಕ್ಷರಾದ ನಿಂಗಪ್ಪ ಹುಳಗೋಳಕರ ರವರ ನೇತ್ರತ್ವದಲ್ಲಿ ಓದಿ, ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಅಣವೀರಪ್ಪ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ನಾಗರಾಜ ಮೆಲಗಿರಿ ಪವಾರ, ಕನಕಪ್ಪ ದಂಡಗುಲಕರ, ದೇವದಾಸ ಜಾಧವ್, ಮಹಾದೇವ ಗೊಬ್ಬೂರಕರ, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ನಾರಾಯಣ ಕಂದಕೂರ, ಬಸವರಾಜ ಬಿರಾದಾರ, ಜಗದೇವ ಸುಬೆದಾರ, ಭೀಮಯ್ಯ ಗುತ್ತೆದಾರ ಉಪಸ್ಥಿತರಿದ್ದರು.
