ಬಿಳವಾರ: ರಸ್ತೆ ಸ್ವಚ್ಛತೆ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಮೆಹಬೂಬ್ ಕೆ. ಚೌದರಿ ಮನವಿ
ಬಿಳವಾರ: ರಸ್ತೆ ಸ್ವಚ್ಛತೆ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಮೆಹಬೂಬ್ ಕೆ. ಚೌದರಿ ಮನವಿ
ಯಡ್ರಾಮಿ : ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್–1 ರಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಹಾಗೂ ಬ್ಯಾಕ್ಟೀರಿಯಾ, ಕೀಟಕಗಳ ಪ್ರಾಬಲ್ಯ ಹೆಚ್ಚುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ತಕ್ಷಣ ರಸ್ತೆ ಸ್ವಚ್ಛಗೊಳಿಸಿ ಸಿಸಿ ರಸ್ತೆ ನಿರ್ಮಿಸಬೇಕೆಂದು ಮೆಹಬೂಬ್ ಕೆ. ಚೌದರಿ ಆಗ್ರಹಿಸಿದ್ದಾರೆ.
ವಾರ್ಡ್‌ನ 1, ರಸ್ತೆಯಲ್ಲಿ ನಿರಂತರವಾಗಿ ಚರಂಡಿನ ನೀರು ಹರಿಯುತ್ತಿರುವುದರಿಂದ ಮಕ್ಕಳು, ವಯೋವೃದ್ಧರು ಸಂಚಾರ ಮಾಡುವ ಸಂದರ್ಭ ಕಾಲು ಜಾರಿ ಬಿದ್ದು ಅನಾಹುತ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯಕ್ಕೆ ಅಪಾಯಕಾರಿಯಾದ ಕ್ರಿಮಿಕೀಟಗಳ ಹೆಚ್ಚಳದಿಂದ ರೋಗಬಾಧೆಯ ಭೀತಿ ಉಂಟಾಗಿದೆ ಎಂದು ಸ್ಥಳೀಯರು ಕೂಡ ತಿಳಿಸಿದ್ದಾರೆ.
ಈ ಕುರಿತು ಗ್ರಾಮಸ್ಥರ ಪರವಾಗಿ ಮೆಹಬೂಬ್ ಕೆ. ಚೌದರಿ ಗ್ರಾಮ ಪಂಚಾಯತ್ ಕಚೇರಿಗೆ ಮನವಿ ಸಲ್ಲಿಸಿದ್ದು, ಗ್ರಾಮಾಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾಗುವ ಕೋಟ್ಯಂತರ ರೂಪಾಯಿ ಅನುದಾನವನ್ನು ಗ್ರಾಮಗಳ ಸಬಲೀಕರಣಕ್ಕೆ ಸರಿಯಾದ ರೀತಿಯಲ್ಲಿ ಬಳಸಬೇಕೆಂದು ಅವರು ಒತ್ತಾಯಿಸಿದರು.
ಕೊಟ್ಟ ಮನವಿಯನ್ನು ಪರಿಗಣಿಸಿ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು, ಅಧಿಕಾರಿಗಳು ನಿರ್ಲಕ್ಷಿಸಿದರೆ ಗ್ರಾಮ ಪಂಚಾಯಿತಿ ಎದುರು ಸತ್ಯಾಗ್ರಹ ,ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
— ವರದಿ: ಜೇಟ್ಟೆಪ್ಪ ಎಸ್. ಪೂಜಾರಿ
