ಶಾರದಹಳ್ಳಿ ಸಿಡಿಲಿಗೆ 14 ಕುರಿಗಳ ಬಲಿ

ಶಾರದಹಳ್ಳಿ ಸಿಡಿಲಿಗೆ 14 ಕುರಿಗಳ ಬಲಿ
ಶಹಪುರ : ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ,ಗುಡುಗು,ಸಿಡಿಲಿಗೆ 14 ಕುರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಶಾರದಳ್ಳಿ ಗ್ರಾಮದ ಹೊರವಲಯದಲ್ಲಿ
ಸಂಭವಿಸಿದೆ.ಸಂಚಾರಿ ಕುರಿಗಾಯಿಗಳಾದ ಸುರಪುರ ತಾಲೂಕಿನ ದೇವಿಕೆರಿ ಗ್ರಾಮದ ಹಣಮಂತ ತಂದೆ ನಿಂಗಪ್ಪ ಗೆ ಸೇರಿದ 7 ಕುರಿಗಳು, ಲಕ್ಷ್ಮಿ ಗಂಡ ಯಂಕಪ್ಪ ಅವರಿಗೆ ಸೇರಿದ 7 ಕುರಿಗಳು, ಒಟ್ಟು 14 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ರಣ ಬಿಸಿಲಿನ ತಾಪಕ್ಕೆ ಬಸವಳಿದ ಶಹಾಪುರ ತಾಲೂಕಿನ ಜನ ಜಾನುವಾರುಗಳಿಗೆ ಸ್ವಲ್ಪ ಮಟ್ಟಿಗೆ ತಾಲೂಕಿನ ಸುತ್ತಮುತ್ತಲ ವ್ಯಾಪ್ತಿಯಲ್ಲಿ ತಂಪೆರಗಿದೆ,ಇದೇ ಸಂದರ್ಭದಲ್ಲಿ ಭಾರಿ ಪ್ರಮಾಣದ ಗುಡುಗಿನೊಂದಿಗೆ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಕುರಿಗಳಿಗೆ ಸಿಡಿಲು ಬಡೆದು ಸಾವನ್ನಪ್ಪಿವೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಮಹಾಮಂಡಳದ ನಿರ್ದೇಶಕರಾದ ಶಾಂತಗೌಡ ಪಾಟೀಲ್ ನಾಗನಟಿಗಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪರಿಹಾರ ಒದಗಿಸಲು ಭರವಸೆ ನೀಡಿದರು.
ನಿನ್ನೆ ತಡರಾತ್ರಿ ಎರಡು ಗಂಟೆಗಳ ಕಾಲ ಸುರಿದ ಜೋರಾಕಾರವಾದ ಮಳೆ ಹಾಗೂ ಬಿರುಗಾಳಿಗೆ ಗಿಡ ಮರಗಳು,ರೆಂಬೆ ಕೊಂಬೆಗಳು ನೆಲಕ್ಕುರುಳಿವೆ,ಘಟನೆಯಂದ ಕೆಲಕಾಲ ವಿದ್ಯುತ್ ಕಡಿತಗೊಂಡಿತ್ತು.
ಕುರಿ ಕಾಯುತ್ತಿದ್ದ ರೈತರು ಸನಿಹದಲ್ಲೇ ಇದ್ದರೂ ಸಹ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ,ಕುರಿಗಳಿಗೆ ಸಿಡಿಲು ಬಡೆದು ಸಾವನ್ನಪ್ಪಿರುವ ಘಟನೆ ತಿಳಿಯುತ್ತಿದ್ದಂತೆ ಪಶು ಸಂಗೋಪನ ಇಲಾಖೆಯ ಅಧಿಕಾರಿಗಳಾದ ಡಾ. ಅಂಬರೀಶ್,ಗ್ರಾಮ ಆಡಳಿತ ಅಧಿಕಾರಿ ಸಂತೋಷ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶರಬಣ್ಣ ರಸ್ತಾಪುರ,ಶರಣಬಸವ ಯಾದವ್ ನಾಗನಟಗಿ,ಎಲ್ಲಪ್ಪ ಕುರಿ ನಾಗನಟಗಿ, ತಿರ್ಲಪ್ಪ ಕುರಿ,ಎಲ್ಲಪ್ಪ ದೊಡ್ಡಮನಿ ಸೇರಿದಂತೆ ಇನ್ನಿತರರು ಹಾಜರಿದ್ದರು.