ಎಸ್‌.ಜಿ.ಸಿದ್ಧರಾಮಯ್ಯ ಅವರಿಗೆ ‘ಪುವೆಂಪು ಪ್ರಶಸ್ತಿ’

ಎಸ್‌.ಜಿ.ಸಿದ್ಧರಾಮಯ್ಯ ಅವರಿಗೆ ‘ಪುವೆಂಪು ಪ್ರಶಸ್ತಿ’

ಎಸ್‌.ಜಿ.ಸಿದ್ಧರಾಮಯ್ಯ ಅವರಿಗೆ ‘ಪುವೆಂಪು ಪ್ರಶಸ್ತಿ’

ಬೆಂಗಳೂರು: ಮಂಗಳೂರು ಕಾಸರಗೋಡು ಬದಿಯಡ್ಕದ ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ವಾರ್ಷಿಕ ‘ಪುವೆಂಪು ಪ್ರಶಸ್ತಿ’ಗೆ ಪ್ರಸಿದ್ಧ ಸಾಹಿತಿ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹25 ಸಾವಿರ ನಗದು, ಫಲಕ ಹಾಗೂ ಗೌರವ ಪತ್ರವನ್ನು ಒಳಗೊಂಡಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಕ್ಟೋಬರ್ 15 ರಂದು ಮಂಜೇಶ್ವರ ಸಮೀಪದ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಪುವೆಂಪು ನೆನಪು ಕಾರ್ಯಕ್ರಮವೂ ಆಯೋಜಿಸಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತ್ಯ ವಲಯದ ಗಣ್ಯರು, ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಎಸ್ ಜಿ ಸಿದ್ಧರಾಮಯ್ಯ ಅವರಿಗೆ ಡಾ ಆನಂದ ಸಿದ್ದಾಮಣಿ, ಡಾ ವೀರಶೆಟ್ಟಿ ಗಾರಂಪಳ್ಳಿ, ಶರಣಗೌಡ ಪಾಟೀಲ ಪಾಳಾ,  ಸೇರಿದಂತೆ  ಅನೇಕರು ಅಭಿನಂದಿಸಿದ್ದಾರೆ.

ಕಾಸರಗೋಡಿನಲ್ಲಿ ತುಳು,ಕನ್ನಡ ಭಾಷೆ ಸಾಹಿತ್ಯ ಬರೆದ . ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಎಂಬ ಕವಿ ಇದ್ದರು.