ನಿನ್ನ ಜೊತೆ ಜೊತೆಯಲಿ.." ಗಜಲ್ ಸಂಕಲನಕ್ಕೆ ಗಜಲ್ ಮಾಣಿಕ್ಯ ಪ್ರಶಸ್ತಿಯ ಗರಿ

ನಿನ್ನ ಜೊತೆ ಜೊತೆಯಲಿ.." ಗಜಲ್ ಸಂಕಲನಕ್ಕೆ ಗಜಲ್  ಮಾಣಿಕ್ಯ ಪ್ರಶಸ್ತಿಯ ಗರಿ

ನಿನ್ನ ಜೊತೆ ಜೊತೆಯಲಿ.." ಗಜಲ್ ಸಂಕಲನಕ್ಕೆ ಗಜಲ್ ಮಾಣಿಕ್ಯ ಪ್ರಶಸ್ತಿಯ ಗರಿ

ಶಹಾಪುರ:- "ನಿನ್ನ ಜೊತೆ ಜೊತೆಯಲಿ..ಸಮಗ್ರ ಗಜಲ್ ಸಂಕಲನಕ್ಕೆ ಗಜಲ್ ದ ಮಾಣಿಕ್ಯವೆಂಬ ಪ್ರಶಸ್ತಿ ಲಭಿಸಿದೆ. ಹಾಸನದ ಮಾಣಿಕ್ಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಬರುವ ನವೆಂಬರ್ ಎರಡರಂದು ಹಾಸನದಲ್ಲಿ ನಡೆವ ಪ್ರಶಸ್ತಿ ಪ್ರದಾನ ಸಮಾರಂಭ, ಪುಸ್ತಕ ಲೋಕಾರ್ಪಣೆ, ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಗೌರವಧನದ ಜೊತೆ ಈ ಸಮಗ್ರ ಗಜಲ್ ಸಂಕಲನದ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರಿಗೆ ಗಜಲ್ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಗಜಲ್ ಕಾವ್ಯ ಪರಂಪರೆಯಲ್ಲಿ ಎಚ್.ಎಸ್.ಮುಕ್ತಾಯಕ್ಕರ ನಂತರ ಪ್ರಕಟವಾದ ಎರಡನೇ ಸಮಗ್ರ ಗಜಲ್ ಸಂಕಲನ ಇದಾಗಿದೆ. ಈಗಾಗಲೇ ಆಕಾಶಕ್ಕೆ ಹಲವು ಬಣ್ಣಗಳು,ಹೊನ್ನ ಮಹಲ್,ನಿನ್ನ ಪ್ರೇಮವಿಲ್ಲದೇ ಸಾಕಿ,ಆತ್ಮಸಖಿಯ ಧ್ಯಾನದಲ್ಲಿ ,ಇದು ಪ್ರೇಮ ಮಹಲ್, ಶಾಯಿರಿ ಲೋಕ ಎಂಬ ಆರು ಶ್ರೇಷ್ಠ ಗಜಲ್ ಸಂಕಲನಗಳನ್ನು ರಚಿಸಿದ ಈ ಲೇಖಕರ ಈ ಎಲ್ಲಾ ಕೃತಿಗಳಿಗೆ ಅನೇಕ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಗಳ ಮೂಲಕ, ವಿಶ್ವ ವಿದ್ಯಾಲಯದ ಮೂಲಕ ಪುರಸ್ಕಾರಗಳು ಸಂದಿವೆ.ಇವರ ಸಂಪಾದನೆಯ "ಗಜಲ್ ಧಾರೆ" ಐವತ್ತು ಲೇಖಕ ಲೇಖಕಿಯರ ಗಜಲ್ ಕೃತಿಯೂ ಇತ್ತೀಚೆಗೆ ಮಹಾರಾಷ್ಟ್ರದ ಸೋಲಾಪುರ ಹಾಗೂ ಶಿವಾಜಿ ವಿಶ್ವ ವಿದ್ಯಾಲಯಕ್ಕೆ ಪಠ್ಯ ಆಗಿ ಆಯ್ಕೆ ಆಗುವ ಮೂಲಕ ಗಜಲ್ ಸಾಹಿತ್ಯದ ಬಗ್ಗೆ ನಾಡಿನಾದ್ಯಂತ ಗಮನ ಸೆಳೆದಿದ್ದಾರೆ.

ಈಗ ಈ "ನಿನ್ನ ಜೊತೆ ಜೊತೆಯಲಿ.." ಸಮಗ್ರ ಗಜಲ್ ಸಂಕಲನಕ್ಕೆ ಪುರಸ್ಕಾರ ದೊರೆತಿರುವುದು ಗಜಲ್ ಸಾಹಿತ್ಯ ಕ್ಷೇತ್ರಕ್ಕೆ ಸಂದ ಒಂದು ಅಪೂರ್ವ ಗೌರವವಾಗಿದೆ ಎಂದು ಲೇಖಕ ಸಿದ್ಧರಾಮ ಹೊನ್ಕಲ್ ಅವರು ತಿಳಿಸಿದ್ದಾರೆ. ಅವರಿಗೆ ಗಜಲ್ ಕ್ಷೇತ್ರದ ಅನೇಕ ಲೇಖಕ ಲೇಖಕಿಯರು ಅಭಿನಂದನೆಗಳು ವ್ಯಕ್ತಪಡಿಸಿದ್ದಾರೆ