ಅಳ್ಳಳ್ಳಿಯಲ್ಲಿ 28 ರಂದು ಗುರು ವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ
ಅಳ್ಳಳ್ಳಿಯಲ್ಲಿ 28 ರಂದು ಗುರು ವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ
ಚಿತ್ತಾಪುರ ತಾಲೂಕಿನ ಅಳ್ಳಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 1993 94ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳು ಹಳೆಯ ವಿದ್ಯಾಥಿಗಳು ಸಂಯುಕ್ತಾಕ್ಷರದಲ್ಲಿ ಸಪ್ಟೆಂಬರ್ 28 ರಂದು ಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಮಧ್ಯಾಹ್ನ 12:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಗುರು ಸಿದ್ದಯ್ಯ ಹಾಗೂ ಶ್ರೀಪಾದ ದೇಶಪಾಂಡೆ ಅವರು ತಿಳಿಸಿದ್ದಾರೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾವಿರ ದೇವರ ಸಂಸ್ಥಾನ ಮಠದ ಶ್ರೀ ಸಂಗಮನಾಥ ಸ್ವಾಮಿಗಳು ವಹಿ ಸಲಿದ್ದಾರೆ. ಅಯ್ಯಪಯ್ಯ ಮಹಾತ್ಮ ಪೀಠ ಗದ್ದಿಗಿಮಠ ಅಳ್ಳಳ್ಳಿಯ ನಾಗಪ್ಪಯ್ಯ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ್. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಂಜನೇಯ ಗುತ್ತೇದಾರ್. ಸಿ ಆರ್ ಪಿ ಶಿವಾನಂದ್. ಭಾಗವಹಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಚಂದ್ರಾಮ ಅಮನ ಗಡ್ಡಿ. ಅಳ್ಳಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರಾದ ವೀರಯ್ಯಸ್ವಾಮಿ ತೊಟ್ನಳ್ಳಿ. ಬಸಪ್ಪ ರಾಮೋಡಗಿ.ಎ ಜಿ ಪಾಟೀಲ್.ನಿಂಗಪ್ಪ ಮಲ್ಕನ್. ಪಾರ್ವತಿ ರಸ್ತಾಪುರ. ಸುಮಿತ್ರಾ ಬಾಯಿ ತುಪ್ಪದ್ ಮಠ. ಇವರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ 1993 94ನೇ ಸಾಲಿನ ವಿದ್ಯಾರ್ಥಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.