"ವಿದ್ಯಾರ್ಥಿಗಳು ಕವನ,ಕಥೆ, ಪ್ರಬಂಧ,ಬರೆಯುವ ಸರಳ ವಿಧಾನ"

"ವಿದ್ಯಾರ್ಥಿಗಳು ಕವನ,ಕಥೆ, ಪ್ರಬಂಧ,ಬರೆಯುವ ಸರಳ ವಿಧಾನ"
ಪಿ.ಎಂ ಶ್ರೀ ಶಾಲೆ ಜವಾಹರ್ ನವೋದಯ ವಿದ್ಯಾಲಯ ತಾಡತೆಗನೂರ ಕಲಬುರ್ಗಿಯಲ್ಲಿ ದಿನಾಂಕ 27/02/25ರಂದು ವಿದ್ಯಾರ್ಥಿಗಳಲ್ಲಿ ಬರವಣಿಗೆ ಮತ್ತು ಸಂಪಾದನೆ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು "ಯುವ ಬರಹಗಾರರ ಸಂಪಾದಕೀಯ ಕ್ಲಬ್"ಈ ಕಾರ್ಯಕ್ರಮದಲ್ಲಿ ಜವಾಹರ್ ನವೋದಯ ವಿದ್ಯಾಲಯ ತಾಡತೆಗನೂರ ಕಲಬುರ್ಗಿಯ ಪ್ರಾಂಶುಪಾಲರಾದ ಶ್ರೀ ವಿ, ನಾಗರಾಜನ ಅವರ ಅಧ್ಯಕ್ಷತೆಯಲ್ಲಿ,ಶ್ರೀ ಮಾಹಾಂತೇಶ ಎನ್ ಪಾಟೀಲ್ ಕಲಬುರ್ಗಿ ಜಿಲ್ಲೆಯ ಬರಹಗಾರರ ಬಳಗದ ಜಿಲ್ಲಾ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ, ಶ್ರೀಮತಿ ಚಂದ್ರಕಲಾ ಎಮ್ ಪಾಟೀಲ್ ಸಾಹಿತಿಗಳು ಶಿಕ್ಷಕರು ಕಲಬುರ್ಗಿ ಜಿಲ್ಲೆಯ ಬರಹಗಾರರ ಬಳಗದ ಉಪಾಧ್ಯಕ್ಷರು,ಹಾಗೂ ಶ್ರೀಮತಿ ಗುಂಡಮ್ಮಾ ಎಸ್, ಮಡಿವಾಳ ಅವರು ಅತಿಥಿಗಳಾಗಿ ಭಾಗವಹಿಸಿ.
ಜವಾಹರ್ ನವೋದಯ ವಿದ್ಯಾಲಯ ತಾಡತೆಗನೂರ ವಿಧ್ಯಾರ್ಥಿಗಳು 6ರಿಂದ ಪಿ,ಯು,ಸಿ, ವರೆಗಿನ ಮಕ್ಕಳಿಗೆ,"ಮಕ್ಕಳು ಕವನ"ಹೇಗೆ ರಚನೆ ಮಾಡಬೇಕು,ಎಂಬುವುದನ್ನು ಚಂದ್ರಕಲಾ ಎಮ್ ಪಾಟೀಲ್ ಸಾಹಿತಿಗಳು ಮತ್ತು ಶಿಕ್ಷಕರು ಕಲಬುರ್ಗಿ ಇವರು ಹೇಳಿದರೆ."ಮಕ್ಕಳು ಕಥೆ"ಹೇಗೆ ರಚಿಸಬೇಕು ಎಂಬುವುದನ್ನು ಮಾಹಾಂತೇಶ ಪಾಟೀಲ್ ಹೇಳಿದರು.ಅದೇ ರೀತಿ ಗುಂಡಮ್ಮಾ, ಎಸ್, ಮಡಿವಾಳ ಅವರು ಹಿಂದಿಯಲ್ಲಿ ಪ್ರಬಂಧ ಹೇಗೆ ಬರೆಯಬೇಕು ಎಂದು ಹೇಳಿದರು.
ಇದಕ್ಕೆ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿ, ನಾಗರಾಜನ ಅವರು ಎಲ್ಲರನ್ನೂ ಸನ್ಮಾನಿಸಿ ಗೌರವಿಸಿದರು.ಶ್ರೀ ಶ್ರೀಧರ್ ಜಿ,ವಿ, ಕಾರ್ಯಕ್ರಮ ನಿರೂಪಿಸಿದರು.ಶ್ರೀ,ಮಾನಪ್ಪ ಹವಾಲ್ದಾರ್,ಈ ಕಾರ್ಯಕ್ರಮಕ್ಕೆ ವಂದನಾರ್ಪಣೆ ಮಾಡಿದರು.ಇಬ್ಬರು ಕನ್ನಡ ಶಿಕ್ಷಕರು ಅಲ್ಲದೆ ಅನೇಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀಮತಿ ಚಂದ್ರಕಲಾ ಎಮ್ ಪಾಟೀಲ್ ಸಾಹಿತಿಗಳು ಮತ್ತು ಶಿಕ್ಷಕರು ಅವರು ಬರೆದ ನಲಿ ಕಲಿ ಕವನ ಸಂಕಲನ ಅಲ್ಲಿಯೆ ಸ್ಥಳದಲ್ಲಿ ಕವನ ರಚನೆ ಮಾಡಿದ 6ನೇ ತರಗತಿ ಸುಮಿತ್,ಮತ್ತು 7ನೇ ತರಗತಿ ರಾಜೀವ್ ಅವರಿಗೆ ಪುಸ್ತಕ ಕಾಣಿಕೆ ಕೊಟ್ಟು ಗೌರವಿಸಿದರು.ಮಕ್ಕಳು ತುಂಬಾ ಸಂತೋಷ ಪಟ್ಟರು.
ಲೇಖನ: ಚಂದ್ರಕಲಾ ಎಮ್ ಪಾಟೀಲ್ ಸಾಹಿತಿಗಳು ಶಿಕ್ಷಕರು ಕಲಬುರ್ಗಿ.ಮೊಬೈಲ್ ನಂಬರ್:9480647696