ರೈತರ ಹೋರಾಟಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಬೆಂಬಲ

ರೈತರ ಹೋರಾಟಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಬೆಂಬಲ

ರೈತರ ಹೋರಾಟಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಬೆಂಬಲ

ಕಲಬುರಗಿ : ೧೨ , ಕಲ್ಯಾಣ ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆಯಿಂದ ಅತಿವೃಷ್ಟಿ ಉಂಟಾಗಿ ರೈತರು ಅತಿ ಸಂಕಷ್ಟದಲ್ಲಿದ್ದಾರೆ.ಆದ್ದರಿಂದ ರಾಜ್ಯ ಸರಕಾರ ತಕ್ಷಣವೇ ಈ ಪ್ರದೇಶವನ್ನು ಹಸಿ ಬರಗಾಲ ಪ್ರದೇಶ ಎಂದು ಘೋಷಿಸಬೇಕು ಹಾಗೂ ಪ್ರತಿ ಎಕರೆಗೆ 25000 ಸಾವಿರ ರೂಪಾಯಿಗಳ ಪರಿಹಾರ ಈ ಕೂಡಲೇ ನೀಡಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹಾಗೂ ವಿವಿಧ ರೈತ ಪರ ಸಂಘಟನೆಗಳ ವತಿಯಿಂದ ಕಲಬುರಗಿಯ ಜಗತ್ ವೃತ್ತದಲ್ಲಿ ಅಕ್ಟೋಬರ್ 2 ರಿಂದ ರೈತ ಮುಖಂಡರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಇಂದು ರೈತ ಹೋರಾಟದಲ್ಲಿ ಡಾ ಅಂಬಾರಾಯ ಅಷ್ಠಗಿ ಭಾಗವಹಿಸಿ ಅವರಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.

ಈ ವೇಳೆ ರೈತ ಮುಖಂಡರಾದ ದಯಾನಂದ ಪಾಟೀಲ್, ಆದಿನಾಥ ಹೀರಾ, ಮೌಲಾಮುಲ್ಲಾ, ಶರಣಬಸವಪ್ಪ ಮಮಶೆಟ್ಟಿ, ಜಗದೇವಿ, ಹಾಗೂ ಬಿಜೆಪಿಯ ಮಹೇಂದ್ರ ಪೂಜಾರಿ, ರಾಜು ಜೈನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.