ಕುಬ್ರಾ ಲೇಔಟ್ ಕಾಲೋನಿಗೆ ಸಿಸಿ ರಸ್ತೆ ಒಳಚರಂಡಿ ವ್ಯವಸ್ಥೆ ಮಾಡಿಸಿಕೊಡಲು ಶಾಸಕ ಅಲ್ಲಮಪ್ರಭು ಪಾಟೀಲ್ ಗೆ ಮನವಿ

ಕುಬ್ರಾ ಲೇಔಟ್ ಕಾಲೋನಿಗೆ ಸಿಸಿ ರಸ್ತೆ ಒಳಚರಂಡಿ ವ್ಯವಸ್ಥೆ ಮಾಡಿಸಿಕೊಡಲು ಶಾಸಕ ಅಲ್ಲಮಪ್ರಭು ಪಾಟೀಲ್ ಗೆ ಮನವಿ
ಕಲಬುರಗಿ ೧೨ನೇ ಅಕ್ಟೋಬರ್. ನಗರಕ್ಕೆ ಹೊಂದಿಕೊಂಡಿರುವ ಕುಬ್ರಾ ಲೇ ಔಟ್ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಚರಂಡಿ, ಒಳಚರಂಡಿ ಹಾಗೂ ಸಿ ಸಿ ರಸ್ತೆಗಳನ್ನು ತ್ವರಿತವಾಗಿ ನಿರ್ಮಿಸಿ ಕಾಲೋನಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿ ಶ್ರೀಮಂತ ಕೋಟ್ರೆ ಹಾಗೂ ಶರಣಯ್ಯ ಸ್ವಾಮಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ, ಆದಷ್ಟು ಬೇಗ ಕಾಮಗಾರಿ ಮಂಜೂರು ಮಾಡುವುದಾಗಿ ತಿಳಿಸಿದರು.
ಈ ವೇಳೆ ಕುಬ್ರಾ ಲೇಔಟ್ ಕಾಲೋನಿಯ ಪ್ರಮುಖರು ಮತ್ತು ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀಮಂತ ಕೋಟ್ರೆ, ನಿವೃತ್ತ ಮುಖ್ಯಗುರು ಶರಣಯ್ಯ ಸ್ವಾಮಿ, ಪ್ರಮುಖರಾದ ಚಾಂದ್ ಪಟೇಲ್ , ಸಾತಲಿಂಗಪ್ಪ ಸೇರಿದಂತೆ ಕಾಲೋನಿ ಅನೇಕರು ಉಪಸ್ಥಿತರಿದ್ದರು.