ಮಹಿಳೆಯರ ಪಾಲಿಗೆ ವರವಾದ ಧರ್ಮಸ್ಥಳದ ಯೋಜನೆಗಳು: ಶಿವಕುಮಾರ ಅಭಿಮತ

ಮಹಿಳೆಯರ ಪಾಲಿಗೆ ವರವಾದ ಧರ್ಮಸ್ಥಳದ ಯೋಜನೆಗಳು: ಶಿವಕುಮಾರ ಅಭಿಮತ
ನಾಗರಾಜ್ ದಂಡಾವತಿ ವರದಿ ಶಹಾಬಾದ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಪಾಲಿಗೆ ವರವಾಗಿದೆ ಎಂದು ಉದ್ಯಮಿ ಶಿವಕುಮಾರ ಇಂಗಿನಶೆಟ್ಟಿ ಹೇಳಿದರು.
ಅವರು ನಗರದ ಲಕ್ಷ್ಮಿಗಂಜ ಬಡಾವಣೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯ ಸಭಾಗೃಹದಲ್ಲಿ ನಡೆದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾಯಕ್ರಮದಲ್ಲಿ ಮಾತನಾಡಿದರು.
ಜ್ಞಾನ ವಿಕಾಸ ಕೇಂದ್ರವು ಮಹಿಳೆಯರಿಗೆ ತುಂಬಾ ಉಪಯೋಗಿಯಾಗಿದ್ದು, ಎಲ್ಲರ ಉತ್ತಮ ರೀತಿಯಲ್ಲಿ ಸಮಾಜದಲ್ಲಿ ಸ್ವಾವಲಂಬಿಯಾಗಿ ಬೆಳೆಯಬೇಕು ಎಂದು ಹೇಳಿದರು.
ಧರ್ಮಸ್ಥಳ ಜನಜಾಗೃತಿ ವೇದಿಕೆಯ ಸದಸ್ಯರಾದ ವಾಸುದೇವ ಚವ್ಹಾಣ್ ಅವರು ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಸಾಲ ಸೌಲಭ್ಯ ನೀಡುವುದರ ಜತೆಗೆ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿ ಪರಿಸರ ಸ್ವಚ್ಛತೆ, ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯಪಾನ ವರ್ಜನ ಶಿಬಿರ, ಪರಿಸರ ಕಾಳಜಿ, ಅಂಗವಿಲಕರಿಗೆ
ತ್ರಿಚಕ್ರ ವಾಹನಕಗಳ ವಿತರಣೆ, ಬಡವರಿಗೆ ಆರ್ಥಿಕ ಸಹಾಯ, ವೃದ್ದರಿಗೆ ವಾತ್ಸಲ್ಯ ಮನೆ, ವೃದ್ಧರಿಗೆ ಪಿಂಚಣಿ, ಹೀಗೇ ಹತ್ತು ಹಲವು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಗ್ರಾಮೀಣಾ ಪ್ರದೇಶ, ಹಾಗೂ ನಗರ ಪ್ರದೇಶದ ಜನರಿಗೆ ಗ್ರಾಮಾಭಿವೃದ್ಧಿ ಯೋಜನೆ ಸಂಜೀವಿನಿಯಾಗಿದೆ ಎಂದು ಹೇಳಿದರು.
ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಅರ್ಚನಾ ಅವರು ಮಾತನಾಡಿದರು.
ಜ್ಞಾನ ವಿಕಾಸ ಸಮನ್ವಯಧಿಕಾರಿ ಅರ್ಚನಾ, ವಲಯ ಮೇಲ್ವಿಚಾರಕ ವಿಕಾಸ, ಸುಧಾರಾಣಿ ಚವ್ಹಾಣ, ಎನ್. ಸಿ.ಇಂಗಿನಶೆಟ್ಟಿ ಶಾಲೆಯ ಮುಖ್ಯಗುರು ಸವಿತಾ ಬೆಳಗುಂಪಿ, ಪಾರ್ವತಿ ಚಟ್ಟಿ, ಕೇಂದ್ರದ ಅಧ್ಯಕ್ಷೆ ಸುಮಂಗಲಾ ಹಳ್ಳಿ, ಸೇವಾಪ್ರತಿನಿಧಿ ಶಶಿಕಲಾ, ವೇದಿಕೆ ಮೇಲೆ ಇದ್ದರು.
ಇದೇ ಸಂದರ್ಭದಲ್ಲಿ ಮಹಿಳೆಯವರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅನಿತಾ ನಿರೂಪಿಸಿದರು, ಬಿಂದು ಕೋಬಾಳ ಸ್ವಾಗತಿಸಿದರು, ಪ್ರಭಾವತಿ ವಂದಿಸಿದರು.