ರೈತ ಪರ ಹೋರಾಟಕ್ಕೆ ನೇಕಾರ ಸಮುದಾಯದ ಬೆಂಬಲ

ರೈತ ಪರ ಹೋರಾಟಕ್ಕೆ ನೇಕಾರ ಸಮುದಾಯದ ಬೆಂಬಲ

ರೈತ ಪರ ಹೋರಾಟಕ್ಕೆ ನೇಕಾರ ಸಮುದಾಯದ ಬೆಂಬಲ

ಕಲಬುರಗಿ, ಅ.11:ಕಲ್ಯಾಣ ಕರ್ನಾಟಕ ವಿವಿಧ ಸಂಘಟನೆಗಳ ಮಹಾ ಒಕ್ಕೂಟಗಳ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ರೈತ ಪರ ಧರಣಿ ಸತ್ಯಾಗ್ರಹಕ್ಕೆ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು.

ಶನಿವಾರ ರಾತ್ರಿ 8.30ಕ್ಕೆ ನಡೆದ ಈ ಧರಣಿ ಸ್ಥಳಕ್ಕೆ ರಾಜ್ಯ ನೇಕಾರ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಅವರ ನೇತೃತ್ವದಲ್ಲಿ ಆಗಮಿಸಿ, ರೈತರ ಬೇಡಿಕೆಗಳನ್ನು ತ್ವರಿತವಾಗಿ ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒಕ್ಕುಲಿರಿಯಿಂದ ಆಗ್ರಹಿಸಿದರು.

ನೇಕಾರ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಶ್ರೀಮತಿ ಉಮಾ ಜಗದೀಶ್ ಅವರ ನೇತೃತ್ವದಲ್ಲಿ ಬೀದರ ಜಿಲ್ಲೆಯಲ್ಲಿ ನಡೆದ ಮಹಿಳಾ ಶಕ್ತಿ ಪ್ರದರ್ಶನದ ಬಳಿಕ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನಲ್ಲಿ ನೇಕಾರರ ಸಭೆ ಮುಗಿಸಿ, ರೈತರ ಧರಣಿ ಸ್ಥಳಕ್ಕೆ ಆಗಮಿಸಲಾಯಿತು.

ಈ ವೇಳೆ ರೈತ ಮುಖಂಡ ದಯಾನಂದ ಪಾಟೀಲ ಸ್ವಾಗತ ಭಾಷಣ ಮಾಡಿದರು. ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ಮಾತನಾಡಿ, “ರೈತ ಮತ್ತು ನೇಕಾರರು ಈ ದೇಶದ ಎರಡು ಕಣ್ಣುಗಳು. ಅತಿವೃಷ್ಟಿಯಿಂದ ಹತ್ತಿ ಬೆಳೆ 98% ನಾಶವಾಗಿದೆ, ರಾಜ್ಯ ಸರಕಾರ ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು” ಎಂದು ಹೇಳಿದರು.

ರಾಜ್ಯ ನೇಕಾರ ಒಕ್ಕೂಟದ ಖಜಾಂಚಿ ನವೀನ್ ಚಿಲ್ಲಾಳ ಅವರು ಮುಖ್ಯಮಂತ್ರಿಗಳು ರೈತರ ಸಮಸ್ಯೆ ಪರಿಹಾರಕ್ಕಾಗಿ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು.

ಕಲಬುರಗಿಯ ದಿವ್ಯಾ ಹಾಗರಗಿ ಅವರು ನೇಕಾರ ಮಹಿಳಾ ನಾಯಕಿ ಉಮಾ ಜಗದೀಶ್ ಅವರನ್ನು ಗೌರವಿಸಿ ಮಾತನಾಡಿ, “ರೈತರ ಹೋರಾಟಕ್ಕೆ ನೇಕಾರ ಮಹಿಳೆಯರ ಬೆಂಬಲ ಪ್ರೇರಕವಾಗಿದೆ” ಎಂದು ಹೇಳಿದರು.

ರಾಜ್ಯ ನೇಕಾರ ಮಹಿಳಾ ಪ್ರಧಾನ ಕಾರ್ಯದರ್ಶಿ ಹೇಮಲತಾ ಇಂದ್ರೇಶ್ ಮಾತನಾಡಿ, “ರೈತರು ಮತ್ತು ನೇಕಾರರು ಇಬ್ಬರೂ ಶ್ರಮದ ಬೆನ್ನೆಲುಬು. ಸರಕಾರ ಅವರ ಸಮಸ್ಯೆಗಳನ್ನು ತಕ್ಷಣ ಮನಗಾಣಬೇಕು” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಶಿವಪ್ಪ ಶೆಟ್ಟಿ, ಕಾರ್ಯದರ್ಶಿ ವಿ.ಟಿ. ಪಿಚಾಡ್ಡಿ, ಉಮಾದೇವಿ, ಶೋಭಾ ಮುರಳಿಕೃಷ್ಣ, ಜ್ಯೋತಿ ಸರೂದೇ, ಶಿಲ್ಪಾ, ಶಿವಲಿಂಗಪ್ಪ ಅಷ್ಟಗಿ, ಚಂದ್ರಶೇಖರ ಮ್ಯಾಳಗಿ, ವಿನೋದಕುಮಾರ ಜೆನವೇರಿ, ಲಕ್ಷ್ಮೀಕಾಂತ ಜೋಳದ, ವಿಶ್ವನಾಥ್, ಸಜ್ಜನ, ಶರಣಬಸಪ್ಪಾ ಮಮಶೆಟ್ಟಿ, ಅದೇಪ್ಪಾ ಸೀಕೆದ, ಮೌಲಾ ಮುಲ್ಲಾ, ಭೀಮಾಶಂಕರ್ ಮಾಡ್ಯಾಳ, ಮಠಪತಿ ಮತ್ತು ಇತರರು ಉಪಸ್ಥಿತರಿದ್ದರು.