ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಿ : ರವಿಕುಮಾರ ಸರಸಂಬಿ

ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಿ : ರವಿಕುಮಾರ ಸರಸಂಬಿ

ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಿ : ರವಿಕುಮಾರ ಸರಸಂಬಿ

ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಅರಳಗುಂಡಗಿಯ ಶ್ರೀ ಶರಣಬಸವೇಶ್ವರರ ಹೆಸರಿಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ರವಿಕುಮಾರ ಸರಸಂಬಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಶರಣ ಶ್ರೇಷ್ಠ, ದಾಸೋಹ ಮತ್ತು ಕಾಯಕದ ಮೂಲಕ ಪವಾಡ ಮಾಡಿದ ಮಹಾಪುರುಷ ಶರಣಬಸವೇಶ್ವರರ ಸರ್ವರು ಆರಾಧಿಸುವ ದೈವಿ ಮತ್ತು ಪುಣ್ಯ ಪುರುಷರಾಗಿದ್ದಾರೆ. 

18ನೇ ಶತಮಾನದದಿಂದ ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದವರು. ಕಲಬುರಗಿಯ ಹೃದಯಭಾಗನದಲ್ಲಿ ಕೋಮು ಸೌಹಾರ್ದತೆ ಪ್ರತೀಕವಾಗಿ ಶರಣಬಸವೇಶ್ವರ ದೇವಸ್ಥಾನವಿದೆ. ಜಾತಿ ಮತ ಪಂಥ ಎನ್ನದೆ ಎಲ್ಲರೂ ಆರಾಧಿಸುವ ಮಹಾನ್ ದೈವಿ ಪುರುಷ. ಪ್ರತಿ ವರ್ಷ ದೇವಸ್ಥಾನದ ಜಾತ್ರೆ ಮತ್ತು ರಥೋತ್ಸವ ಅತಿ ವಿಜೃಂಭಣೆಯಿAದ ಜರುಗುತ್ತದೆ. ಮಹಾರಾಷ್ಟç, ತೆಲಂಗಾಣ, ಆಂಧ್ರ ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಬಂದು ಆಶೀರ್ವಾದ ಪಡೆಯುತ್ತಾರೆ. ಶರಣದ ದೇಗುಲ ಅತಿ ಪ್ರಾಚೀನವಾಗಿದ್ದು, ಶಿಲ್ಪಕಲೆಯು ಅಮೋಘವಾಗಿದೆ. ಈ ನಿಟ್ಟಿನಲ್ಲಿ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.