ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉತ್ಸವ ಸಮಿತಿಗೆ- ಮಾಲಾ ಕಣ್ಣಿ ಅಧ್ಯಕ್ಷೆ

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉತ್ಸವ ಸಮಿತಿಗೆ- ಮಾಲಾ ಕಣ್ಣಿ ಅಧ್ಯಕ್ಷೆ

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉತ್ಸವ ಸಮಿತಿಗೆ- ಮಾಲಾ ಕಣ್ಣಿ ಅಧ್ಯಕ್ಷೆ 

ಕಲಬುರಗಿ:ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉತ್ಸವ ಸಮಿತಿಯ ಜಿಲ್ಲಾಧ್ಯಕ್ಷರಾಗಿ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ ಅವರನ್ನು ನೇಮಕ ಮಾಡಲಾಗಿದೆ.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾಜದ ಮುಖಂಡರು, ಚೆನ್ನಮ್ಮ ಅಭಿಮಾನಿಗಳು, ಗಣ್ಯರು, ಕಳೆದ ವರ್ಷದ ಪದಾಧಿಕಾರಿಗಳ ಸಭೆಯಲ್ಲಿ ಒಕ್ಕೊರಲಿನಿಂದ ನೇಮಕ ಮಾಡಲಾಯಿತು.

ಪ್ರಮುಖರು ಮಾತನಾಡಿ, ಜಯಂತ್ಯುತ್ಸವವನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಪರಸ್ಪರ ಸಹಕಾರ, ಸಲಹೆಗಳನ್ನು ಪಡೆದು, ಮಾದರಿ ಜಯಂತಿ ಆಚರಿಸಲು ಸಲಹೆ ನೀಡಿದರು. ನೂತನ ಪದಾಧಿಕಾರಿಗಳನ್ನು ಶೀಘ್ರದಲ್ಲಿ ನೇಮಕ ಮಾಡಿ, ತಯಾರಿ ಮಾಡಿಕೊಳ್ಳಬೇಕು ಎಂದು ನಿರ್ಣಯಿಸಲಾಯಿತು. 

ಅಧ್ಯಕ್ಷೆ ಮಾಲಾ ಕಣ್ಣಿ ಮಾತನಾಡಿ, ಮಹಿಳೆಯಾಗಿ ಜನಮೆಚ್ಚುವ, ಸರ್ವರೊಪ್ಪುವ ಆಡಳಿತ ನಡೆಸಿದ ರಾಣಿ ಚೆನ್ನಮ್ಮ ಅವರ ಆದರ್ಶ ಎಲ್ಲರಿಗೂ ತಲುಪಿಸುವ ಕಾರ್ಯ ಜಯಂತಿ ಮೂಲಕ ಮಾಡಲಾಗುವುದು ಎಂದು ತಿಳಿಸಿದರು. ನೂತನ ಅಧ್ಯಕ್ಷೆಯನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. 

ಪ್ರಮುಖರಾದ ಜ್ಯೋತಿ ಮರಗೋಳ, ಸಾವಿತ್ರಿ ಕುಳಗೇರಿ, ಶರಣಮ್ಮ ಹಿರೇಮಠ, ಅನ್ನಪೂರ್ಣ ಹಿರೇಮಠ, ವಿಜಯಲಕ್ಷ್ಮೀ ಹಿರೇಮಠ, ಜಯಶ್ರೀ ಜೈನ್, ಶಿಲಾ ಕಲಬುರಗಿ, ಪೂರ್ಣಿಮಾ, ವೈಶಾಲಿ ನಾಟಿಕಾರ್, ಅಂಬುಜಾ ಎಂ ಡಿ, ಜಗದೇವಿ ಕೊಳಕುಂದಾ, ಭೀಮಾಶಂಕರ ಮೀಟೆಕರ್, ಚನ್ನಪ್ಪ ಡಿಗ್ಗಿ, ರಾಜುಗೌಡ ನಾಗನಹಳ್ಳಿ, ಉದಯಕುಮಾರ್ ಜೇವರ್ಗಿ, ವೀರಣ್ಣ ಬೇಲೂರೆ, ಅಣವೀರ್ ಪಾಟೀಲ್, ಅಶೋಕ್ ಇಂಡಿ, ರವಿ ಮಹಾಗಾಂವ್, ಆನಂದ ಲೇಂಗಟಿ, ರುದ್ರಮುನಿ ಹಿರೇಮಠ, ವಿನೋದ್ ಜನೆವರಿ, ಸಿದ್ದಲಿಂಗ ಮಲಶೆಟ್ಟಿ ಸೇರಿ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.

ಶ್ರೇಷ್ಠ ಆಡಳಿತಗಾರ್ತಿ, ದಿಟ್ಟ ಮಹಿಳೆ, ಎಲ್ಲ ಸಮಾಜದವರ ಏಳಿಗೆಗೆ ಶ್ರಮಿಸಿದ ರಾಣಿ ಚನ್ನಮ್ಮ ಅವರ ಜಯಂತ್ಯುತ್ಸವ ಸಮಿತಿಗೆ ಅಧ್ಯಕ್ಷೆಯಾಗಿ ನೇಮಕ ಮಾಡಿದ ಎಲ್ಲ ಹಿರಿಯರು, ಪ್ರಮುಖರಿಗೆ ಹೃದಯಪೂರ್ವಕ ಧನ್ಯವಾದಗಳು‌. ಇದೊಂದು ಸೌಭಾಗ್ಯವಾಗಿದ್ದು, ಎಲ್ಲರ ಸಹಕಾರ, ಸಲಹೆ ಪಡೆದು ಅರ್ಥಪೂರ್ಣವಾಗಿ ಆಚರಿಸಲಾಗುವುದು.

! ಮಾಲಾ ಕಣ್ಣಿ, ಅಧ್ಯಕ್ಷೆ, ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಿತಿ