ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆ ಬಗೆಹರಿಸಲು ಐ ಕೆ ಪಾಟೀಲ್ ಆಗ್ರಹ

ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆ ಬಗೆಹರಿಸಲು ಐ ಕೆ ಪಾಟೀಲ್ ಆಗ್ರಹ
ಕಲಬುರ್ಗಿ: ಕರ್ನಾಟಕ ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಿಬ್ಬಂದಿಗಳು ಅನೇಕ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ ಪದವಿಪೂರ್ವ ಕಾಲೇಜುಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಐ ಕೆ ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ
ಈಗಾಗಲೇ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪನವರಿಗೆ ಸಂಘಟನೆಯಿಂದ ಮನವಿ ಸಲ್ಲಿಸಲಾಗಿದೆ
ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2015 ರಿಂದ ಖಾಲಿಯಾಗಿರುವ ಯಾವ ಹುದ್ದೆಗಳಿಗೂ ಅನುದಾನ ನೀಡುತ್ತಿಲ್ಲ ಹೀಗಾಗಿ ಖಾಲಿಯಾಗಿರುವ ಹುದ್ದೆಗಳು ಖಾಲಿಯಾಗೆ ಉಳಿದಿವೆ ಹೀಗಾಗಿ ಉಪನ್ಯಾಸಕರಿಲ್ಲದ ಒಂದು ಎರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಫೇಲಾಗಿ ಇಡಿ ಕಾಲೇಜಿನ ಫಲಿತಾಂಶ ಹಾಗೂ ಜಿಲ್ಲೆಯ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರಿಗೂ ಹಿನ್ನಡೆಯಾಗುತ್ತಿದೆ. ಮೇಲಾಗಿ
ಅಧಿಕಾರಿಗಳು ದಿನಕ್ಕೊಂದು ಆದೇಶ ಹೊರಡಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿಗಳಿಗೆ ಆತಂಕದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತಿದ್ದಾರೆ ಇದು ಅವರ ಪಾಠ ಪ್ರವಚನಗಳ ಮೇಲೆ ಹಾಗೂ ಪರೀಕ್ಷಾ ಫಲಿತಾಂಶದ ಮೇಲೂ ಕೆಟ್ಟ ಪ್ರಭಾವ ಬೀರುತ್ತಿದೆ.
ಆದ್ದರಿಂದ ದಯವಿಟ್ಟು ಸರ್ಕಾರ ಅನುದಾನಿತ ಪದವಿಪೂರ್ವ ಕಾಲೇಜುಗಳ ಸಮಸ್ಯೆಗಳನ್ನು ಬಗೆಹರಿಸಿ ಅವರ ಆತಂಕ ದೂರ ಮಾಡಿ ಫಲಿತಾಂಶ ಹೆಚ್ಚಾಗುವಂತೆ ಕ್ರಮ ವಹಿಸಬೇಕಾಗಿರುವದು ಸರ್ಕಾರದ ಜವಾಬ್ದಾರಿಯಾಗಿದೆ
ಈಗಾಗಲೇ ಪ್ರೌಢ ಶಾಲೆಗಳಲ್ಲಿ ಅನುದಾನಿತ ಒಂದು ವಿಭಾಗಕ್ಕೆ ಸಂಖ್ಯೆ ಇರುವ ಹಾಗೆ ಅನುದಾನಿತ ಪದವಿ ಪೂರ್ವ ಕಾಲೇಜುಗಳಿಗೆ ೨೦೨೫-೨೬ನೇ ಸಾಲಿನಿಂದ ಜಾರಿಗೆ ಬರುವಂತೆ ಪ್ರತಿ ಅನುದಾನಿತ ವಿಭಾಗಕ್ಕೆ ಕನಿಷ್ಠ ದಾಖಾಲಾತಿಯನ್ನು ೨೦ಕ್ಕೆ ನಿಗದಿಪಡಿಸಬೇಕೆಂದು ಆಗ್ರಹಿಸುತ್ತೇನೆ
ಅನುದಾನಿತ ಪದವಿ ಪೂರ್ವ
ಕಾಲೇಜುಗಳ ಉಪನ್ಯಾಸಕರನ್ನು ಕಾರ್ಯಭಾರ ಕಡಿಮೆ ಇರುವ ಕಾಲೇಜುಗಳಿಂದ ಸಮೀಪದ ಕಾರ್ಯಭಾರ ಲಭ್ಯವಿರುವ ಕಾಲೇಜುಗಳಿಗೆ ನಿಯೋಜನೆ ಮಾಡುವದು.
ಕಾರ್ಯಭಾರ ಕಡಿಮೆಯಿರುವ ಕರ್ನಾಟಕ ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶು ಪಾಲರು, ಉಪನ್ಯಾಸಕರನ್ನು ಮತ್ತು ಭೋದಕೇತರ ಸಿಬ್ಬಂದಿಗಳಿಗೆ ಕಡ್ಡಾಯ ಸ್ವಯಂ ನಿವೃತ್ತಿ ಆದೇಶವನ್ನು ಮಾಡಲಾಗಿದೆ ಕೂಡಲೇ ಸರ್ಕಾರ ಆ ಆದೇಶ ಹಿಂಪ ಡೆದು ಕಾರ್ಯಭಾರ ಅಧಿಕವಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ, ಮೋರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಆದರ್ಶ ವಿದ್ಯಾಲಯಗಳಿಗೆ ನಿಯೋಜನೆ ಮಾಡಬೇಕು ಇದರಿಂದ ಸರ್ಕಾರಕ್ಕೆ ಹಣಕಾಸಿನ ತೊಂದರೆಯೂ ಆಗುವುದಿಲ್ಲ ಇದರಿಂದ ಸರ್ಕಾರಕ್ಕೆ ಉಳಿತಾಯವಾಗುತ್ತದೆ. ಸರ್ಕಾರಿ ಸಿಬ್ಬಂದಿಗಳಿಗೆ ಜಾರಿ ಮಾಡುತ್ತಿರುವ ಹಳೆ ಪಿಂಚಣಿ ಯೋಜನೆ, ಆರೋಗ್ಯ ಯೋಜನೆ ಜ್ಯೋತಿ ಸಂಜೀವಿನಿಯನ್ನು, ಹಾಗೂ ಇನ್ನುಳಿದ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳನ್ನು ಅನುದಾನಿತ
ಸಿಬ್ಬಂದಿಗಳಿಗೆ ಜಾರಿಗೆ ತರುವ ಮೂಲಕ ಸೇವಾ ಭದ್ರತೆ ನೀಡಬೇಕು
ಪ್ರತಿ ತಿಂಗಳು ೫ನೇ ತಾರೀಕಿನ ಒಳಗೆ ಕರ್ನಾಟಕ ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಲು ಕಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ