ತಾಲೂಕ ಹಡಪದ (ಕ್ಷೌರಿಕ) ಸಮಾಜ ಕಲಬುರಗಿ ವತಿಯಿಂದ ಪ್ರತಿಭಟನೆ

ತಾಲೂಕ ಹಡಪದ (ಕ್ಷೌರಿಕ) ಸಮಾಜ ಕಲಬುರಗಿ ವತಿಯಿಂದ ಪ್ರತಿಭಟನೆ

ತಾಲೂಕ ಹಡಪದ (ಕ್ಷೌರಿಕ) ಸಮಾಜ ಕಲಬುರಗಿ ವತಿಯಿಂದ ಪ್ರತಿಭಟನೆ

ಕಲಬುರಗಿ: ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಮಂಡಳಿ ಸಮರ್ಪಕವಾಗಿ ಜಾರಿಗೆ ತರುವಬೇಕೆಂದು ತಾಲೂಕ ಹಡಪದ (ಕ್ಷೌರಿಕ) ಸಮಾಜ ಕಲಬುರಗಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಕಲಬುರಗಿ ತಾಲೂಕ ವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆAದರೆ ಕೆಳದ ಸರ್ಕಾರದಲ್ಲಿ ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಲು ಆದೇಶವಾಗಿರುತ್ತೆದೆ. ಆದರೆ ಆದೇಶವಾದರೂ ಕೂಡ ಇಲ್ಲಿಯವರೆಗೆ ಅಭಿವೃದ್ಧಿ ನಿಗಮ ಮಂಡಳಿಯನ್ನು ಜಾರಿಗೆ ತಂದಿರುವುದಿಲ್ಲ.

ಕರ್ನಾಟಕ ರಾಜ್ಯದಲ್ಲಿ ಹಡಪದ ಸಮಾಜವು ಸುಮಾರು 15 ಲಕ್ಷ ಜನಸಂಖ್ಯೆ ಇದ್ದು ಬುದ್ಧ ಬಸವ ಅಂಬೇಡ್ಕರ ರವರ ಪಕ್ಕ ಪರಿಪಾಲಕವಾಗಿದ್ದು ಜಾತಿ ಬೇದ ಅನ್ನದೇ ಎಲ್ಲಾ ಜನಾಂಗದವರನ್ನು ಕ್ಷೌರ ಸೇವೆ ಮಾಡುವ ಮೂಲಕ ಜೀವನ ನಡೆಸುತ್ತಿದ್ದೇವೆ ಹಾಗೂ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ತಮ್ಮ ಸರ್ಕಾರದಲ್ಲಿ ನಮ್ಮ ಸಮಾಜದ ಬೇಡಿಕೆ ಇಡರಿಸುವ ಮೂಲಕ ನಮ್ಮನ್ನ ಮುಖ್ಯವಾಹಿನಿಗೆ ತರಬೆಕೇಂದು ಮನವಿ ಮಆಡಿದ್ದಾರೆ.

ನೆನೆಗುದಿಗೆ ಬಿದ್ದಿರುವ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಮಂಡಳಿ ಜಾರಿಗೆ ತಂದು 100 ಕೋಟಿ ರೂಪಾಯಿ ಅನುದಾನ ನೀಡಬೇಕು, ಹಜಾಮ ಎಂಬ ಜಾತಿ ನೀಂದನೆ ಪದಕ್ಕೆ ಆಟ್ರಾಸಿಟಿ ಕಾನೂನು ರಚಿಸಬೇಕು, ಕ್ಷೌರಿಕರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಸರ್ಕಾರದ ವತಿಯಿಂದ ನೀಡಬೇಕು, ಬಸವಕಲ್ಯಾಣದಲ್ಲಿರುವ ಬಸವಣ್ಣ ರವರ ಅರೀವಿನ ಗವಿಯ ಪಕ್ಕದಲ್ಲಿ ಇರುವ ( ಎಡಭಾಗ) ಗವಿ ಹಡಪದ ಅಪ್ಪಣ್ಣನವರ ಗವಿಯಾಗಿದ್ದು ಬಸವಕಲ್ಯಾಣ ಪ್ರಾಧಿಕಾರಕೆ ತೆಗೆದುಕೊಂಡು ಅಭಿವೃದ್ಧಿ ಪಡೆಸಬೇಕು, ಕಾಂಗ್ರೆಸ್ ಪಕ್ಷದಲ್ಲಿ ದುಡಿದಿರುವ ನಮ್ಮ ಸಮಾಜದ ಯಾರಿಗಾದರೂ ಒಬ್ಬರಿಗೆ ನಿಗಮ ಮಂಡಳಿ ಅಥವಾ ವಿವಿಧ ಇಲಾಖೆಗಳಲ್ಲಿ ನಾಮ ನಿರ್ದೇಶನ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಚಂದ್ರಶೇಖರ ಹಡಪದ ತೊನಸಹಳ್ಳಿ (ಟಿ), ಹಡಪದ ಸಮಾಜ ಜಿಲ್ಲಾಧ್ಯಕ್ಷ ಈರಣ್ಣ ಸಿ ಹಡಪದ ಸಣ್ಣೂರ, ತಾಲೂಕ ಕಾರ್ಯಾಧ್ಯಕ್ಷ ರಮೇಶ ಕವಲಗಾ, ತಾಲೂಕ ಪ್ರಧಾನ ಕಾರ್ಯಾದರ್ಶಿ ವಿನೋದ ಅಂಬಲಗಾ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಸುಗೂರ ಎನ್, ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ ಸೇರಿದಂತೆ ಎಲ್ಲಾ ಕ್ಷೌರಿಕ ಅಂಗಡಿಯ ಮಾಲಿಕರು ಹಿರಿಯರು ಯುವಕರು ಹೆಚ್ಚಿನ ಜನ ಸಂಖ್ಯೆಯಲ್ಲಿ ಭಾಗವಹಿಸಿದರು.