ಮಾವು ಹೂ ಕಾಯಿ ಉದುರುವಿಕೆ ಹತೋಟಿಗೆ ಸಲಹೆ

ಮಾವು ಹೂ ಕಾಯಿ ಉದುರುವಿಕೆ ಹತೋಟಿಗೆ ಸಲಹೆ

ಮಾವು ಹೂ ಕಾಯಿ ಉದುರುವಿಕೆ ಹತೋಟಿಗೆ ಸಲಹೆ 

ಹಣ್ಣುಗಳ ರಾಜ ಮಾವು ರೈತರಿಗೆ ಆದಾಯ ತರಬಲ್ಲ ಹಣ್ಣಿನ ಬೆಳೆ ಆಗಿದ್ದು ಪ್ರಸ್ತುತ ದಿನವಿಡೀ ಒಣ ಹವೆ, ರಾತ್ರಿ ಏರು ಪೇರಗುತ್ತಿರುವ ಚಳಿ ವಾತಾವರಣ ಮಾವಿನ ಹೂ ಹಂತದಲ್ಲಿ ಹೂ ಕಾಯಿ ರಚನೆಗೆ ಬೂದಿ ರೋಗ ಹಾಗೂ ಜಿಗಿ ಹುಳ ಬಾದೆ ಅಡ್ಡಿಯಾಗುತ್ತಿದೆ. ಈ ವರ್ಷ ಕಲಬುರ್ಗಿ ಜೆಲ್ಲೆಯಲ್ಲಿ ಮುಂಗಾರು ಉತ್ತಮ ಮಳೆ ಆಗಿದ್ದು ಸದ್ಯ ತೋಟಗಾರಿಕೆ ಬೆಳೆ ಮಾವು ಡಿಸೆಂಬರ್ ಕೊನೆಗೆ ಹೂ ಹಂತ ತಲುಪಿದೆ, ಸಂಕ್ರಾಂತಿ ವೇಳೆ ಬಹಳಷ್ಟು ಭಾಗದಲ್ಲಿ 90% ಹೂ ಮಿನಿ ಕಾಯಿ ಹಂತ ತಲುಪಲಿದ್ದು, ಹವಾಮಾನ ಬದಲಾವಣೆ ಇದ್ದ ಮಾವು ಬೆಳೆ ಉಳಿಸಿಕೊಳ್ಳಲು ರೈತರು ಸಸ್ಯ ಸಂರಕ್ಷಣೆ ವಿಧಾನ ಅನುಸರಿಸಬೇಕು. ಬೂದಿ ರೋಗ ಹಾಗೂ ಜಿಗಿ ಹುಳ ದಿಂದ ಹೆಚ್ಚಿನ ಎಲೆ, ಹೂ, ದೇಟು ಬಿಳಿ ಬೂದಿನ ಕಣ ಅವರಿಸುತ್ತದೆ, ಜಿಗಿ ಅಂಟು ದ್ರವ ಶ್ರವಿಸುವದರಿಂದ ಶಿಲಿಂದ್ರ ರೋಗ ಉಲ್ಬಾಣ ವಾಗುತ್ತದೆ, ಇದರ ನಿರ್ವಹಣೆಗೆ ನೀರಿನಲ್ಲಿ ಕರಗುವ ಗಂದಕ 3 ಗ್ರಾಂ ಅಥವಾ ಕಾರ್ಬೇಡಜಿಮ್ 1 ಗ್ರಾo ಜೊತೆಗೆ ತಿಯೋಮೆಥಕ್ಸಾಮ್ 0.3 ಗ್ರಾಂ (point three gram) ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಸ್ಯ ರೋಗ ವಿಜ್ಜಾನಿ ಡಾ. ಜಹೀರ್ ಅಹಮದ್ ತಿಳಿಸಿದರು. ಮಾವು ಉತ್ತಮ ಕಾಯಿ ರಚನೆ, ಬೆಳವಣಿಗೆಗೆ ಭಾರತೀಯ ತೋಟಗಾರಿಕೆ ಸಂಸ್ಥೆ ಬೆಂಗಳೂರು ಅಭಿರುದ್ದಿ ಪಡಿಸಿದ ಮಾವು ಸ್ಪೆಷಲ್ 5 ಗ್ರಾಂ ಅಥವಾ ಸಮಗ್ರ ಪೋಷಕ ಟಾನಿಕ್ 5 ಮೀ ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತೋಟಗಾರಿಕೆ ವಿಜ್ಜಾನಿ ಡಾ. ಸನ್ಮತಿ ನಾಯಕ್ ಎ ಟಿ ಎಸ್ ತಿಳಿಸಿದರು.ಚಳಿಗಾಲದಲ್ಲಿ ಗಿಡಗಳಿಗೆ ನೀರು ಏರು ಪೇರು ಆಗದಂತೆ ಎಚ್ಚರಿಕೆ ವಹಿಸಬೇಕು. ರೈತರು ಪ್ರತಿ ಮೂರು ವರ್ಷಕ್ಕೆ ಮಣ್ಣು ಪರೀಕ್ಷೆ ಮಾಡಿಸಿ ಸೂಕ್ತ ಪೋಷಣೆ, ಬೇಸಾಯ ಕ್ರಮ, ಕಡಿಮೆ ಕಳೆ ನಾಶಕ ಬಳಸಬೇಕು ಎಂದು ಬೇಸಾಯ ವಿಜ್ಜಾನಿ ಡಾ. ಯೂಸುಫ್ ಅಲಿ ನಿಂಬರಗಿ ಹಾಗೂ ಮಣ್ಣು ವಿಜ್ಜಾನಿ ಡಾ. ಶ್ರೀನಿವಾಸ ಬಿ ವಿ ಸಲಹೆ ನೀಡಿದರು. ಮಾವು ತೋಟಗಳಲ್ಲಿ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು ಎಂದು ಕ್ಷೇತ್ರ ವ್ಯವಸ್ತಾಪಕ ಶ್ರೀ ಮಲ್ಕಣ್ಣ ಪಾಟೀಲ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ ರೈತರು ಸಮೀಪದ ತೋಟಗಾರಿಕೆ ಇಲಾಖೆ ಅಥವಾ ಕೃಷಿ ವಿಜ್ಜಾನ ಕೇಂದ್ರ ಭೇಟಿ ನೀಡಬಹುದು ಎಂದು ಕಲ್ಬುರ್ಗಿ ಹಾಗೂ ರದ್ದೇವಡಿಗೆ ಕೆ ವಿ ಕೆ ಮುಖ್ಯಸ್ಥರಾದ ಡಾ. ರಾಜು ತೆಗ್ಗಲ್ಲಿ ಹಾಗೂ ಡಾ. ವಾಸುದೇವಾ ನಾಯಕ್ ತಿಳಿಸಿದರು