ಎಇಇ ಅಮಾನತ್ತು ಗೊಳಿಸುವಂತೆ ಆಗ್ರಹಿಸಿದ್ದಾರೆ
ಎಇಇ ಅಮಾನತ್ತು ಗೊಳಿಸುವಂತೆ ಆಗ್ರಹಿಸಿದ್ದಾರೆ
ಕಲಬುರಗಿ: ಕಳೆದ 2022-23ನೇ ಸಾಲಿನ ಘೂಳನೂರ-ಮೋಗನಿಟಗಾ ಬಾಕಿ 9.72 ಕೋಟಿ ರೂ.ಗಳ ಕಾಮಗಾರಿಯನ್ನು ಕೈಗೊಳ್ಳದೆ 2-3 ವರ್ಷಗಳ ವಿಳಂಬ ಮಾಡಿ ಸರ್ಕಾರಕ್ಕೆ ತಪ್ಪಾಗಿ ಮಾಹಿತಿ ನೀಡಿ ಅವ್ಯವಹಾರ ಮಾಡುವ ಹುನ್ನಾರ ಮಾಡಿರುವ ಇಲಾಖೆಯ ಎಇಇ ರಾಜಶೇಖರ ಸಜ್ಜನ ಶೇಟ್ಟಿ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸುವಂತೆ ಆಗ್ರಹಿಸಿ ಬೇಡಿಕೆಯ ಮನವಿ ಪತ್ರವನ್ನು ಸಣ್ಣ ನೀರಾವರಿ ಸಚಿವರಾದ ಎನ್. ಎಸ್. ಬೋಸರಾಜು, ಸಚಿವರಾದ ಪ್ರೀಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿಗಳು ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಸರಕಾರದ ಕಾರ್ಯದರ್ಶಿಗಳು ಇವರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ ಕ್ರಾಂತಿ) ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಸಂಸ್ಥಾಪಕ ಸಂಗಮನಾಥ ಬಟಗೇರಿ, ಸಂಚಾಲಕ ಕುಪೇಂದ್ರ ಬಿಲ್ವಾಡ, ಶಾಮರಾವ ಹೇರೂರ, ಸಂತೋಷ ಸಂಘನ ಇದ್ದರು.
