ಜೇವರ್ಗಿ ತಾಲ್ಲೂಕು ಜೀಪ ಚಾಲಕರ ಒಕ್ಕೂಟದ ಹೊಸ ಪದಾಧಿಕಾರಿಗಳ ಆಯ್ಕೆ

ಜೇವರ್ಗಿ ತಾಲ್ಲೂಕು ಜೀಪ ಚಾಲಕರ ಒಕ್ಕೂಟದ ಹೊಸ ಪದಾಧಿಕಾರಿಗಳ ಆಯ್ಕೆ
ಕಲಬುರಗಿ:ಜೀಪ ಚಾಲಕರ ಒಕ್ಕೂಟದ ಸಂಘದ ಜೇವರ್ಗಿ ತಾಲ್ಲೂಕು ಘಟಕದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಘಟಕದ ಅಧ್ಯಕ್ಷರಾಗಿ ಬಸು ಸುಬೇದಾರ್, ಉಪಾಧ್ಯಕ್ಷರಾಗಿ ವಿಶ್ವರಾಧ್ಯ ಹಳ್ಳಿ ಮತ್ತು ಗುರುನಾಥ ನೆಲೋಗಿ, ಕಾರ್ಯದರ್ಶಿಗಳಾಗಿ ಸಲೀಮ್ ಸವದಿ ಹಾಗೂ ಶಂಕರ್ ಹಾಲಗಡ್ಲಾ ಅವರನ್ನು ನೇಮಿಸಲಾಯಿತು.
ಹೊಸ ಅಧಿಕಾರಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಶಿವಕುಮಾರ ಕುಂಬಾರ್, ಮಲ್ಲಯ್ಯ ಸ್ವಾಮಿ ನ್ಯಾಮನೂರ, ರಾಜಕುಮಾರ ಪ್ಯಾಟಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಸಂಘದ ಬಲವರ್ಧನೆ, ಚಾಲಕರ ಹಕ್ಕು ಹಿತಾಸಕ್ತಿಗಳ ಕಾಪಾಡುವ ನಿಟ್ಟಿನಲ್ಲಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲಾಯಿತು.