ಆನೆಕಾಲು ರೋಗ ಮುಕ್ತ ಸಮಾಜಕ್ಕಾಗಿ ಇಲಾಖೆಯೊಂದಿಗೆ ಕೈ ಜೋಡಿಸಲು ಚಾಮರಾಜ ದೊಡಮನಿ ಕರೆ

ಆನೆಕಾಲು ರೋಗ ಮುಕ್ತ ಸಮಾಜಕ್ಕಾಗಿ ಇಲಾಖೆಯೊಂದಿಗೆ ಕೈ ಜೋಡಿಸಲು ಚಾಮರಾಜ ದೊಡಮನಿ ಕರೆ
ಕಲಬುರಗಿ:28
ಇಂದು ನಗರದಲ್ಲಿ ಎಂಎಸ್.ಐ ಪದವಿ ಮಹಾವಿದ್ಯಾಲಯವು ಎನ್.ಎಸ್.ಎಸ್.ಘಟಕ ಆಯೋಜಿಸಿರುವ ಆನೆಕಾಲು ರೋಗ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಉಒನ್ಯಾಸಕರಾಗಿ ಆಗಮಿಸಿದ್ದ ಕಲಬುರಗಿ ಜಿಲ್ಲೆಯ ಆರೋಗ್ಯ ಇಲಾಖೆಯ ಕೀಟಶಾಸ್ತ್ರಜ್ಞರಾದ ಚಾಮರಾಜ ದೊಡಮನಿ ಮಾತನಾಡುತ್ತಾ,ಆನೆಕಾಲು ರೋಗ ಮುಕ್ರ ಸಮಾಜ ನಿರ್ಮಾಣ ಮಾಡಲು ಇಲಾಖೆಯೊಂದಿಗೆ ಕೂ ಜೋಡಿಸಲು ಸಾರ್ವಜನಕರಿಗೆ ಕರೆ ನೀಡಿದರು.
ಆನೆಕಾಲು ರೋಗವು ರೋಗವು ಒಂದು ಭಯಾನಕ ರೋಗವಾಗಿದ್ದು ಮನುಷ್ಯನಿಗೆ ಇಳಿಮುಖ ಅಂಗಾಂಗಗಳಲ್ಲಿ ಊತ ಕಾಣಿಸಿಕೊಂಡ ಅದನ್ನು ಕಡೆಇಮೆ ಮಾಡಿಕೊಳ್ಳಲು ಸಾದ್ಯವಾಗುವುದಿಲ್ಲ ಹಾಗೂ ಅದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ ಮುಂದಿನ ಪೀಳಿಗೆಗೂ ಹರಡಿಸಿದಂತಾಗುತ್ತದೆ ಹಾಗೂ ಕುಟುಂಬ ನಿರ್ವಹಣೆ ಹಾಗೂ ಸಮಾಜದಲ್ಲಿ ಎಲ್ಲರೊಂದಿಗೆ
ಸುಗಮವಾಗಿ ಬದುಕು ಸಾಘಿಸುವುದು ದುಸ್ತರವಾಗುತ್ತದೆ ಹೀಗಾಗಿ ಇಲಾಖೆ ವರ್ಷಕ್ಕೆ ಒಂದು ಬಾರಿ ನೀಡುವ ಡಿಇಸಿ,ಐವರ್ ಮೆಕ್ಟಿನ್ ಮತ್ತು ಅಲ್ಬೆಂಡೆಜೋಲ್ ಮಾತ್ರೆಯನ್ನು ತೆಗೆದುಕೊಳ್ಳುವುದರ ಮೂಲಕ ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಆನೆಕಾಲು ರೋಗವನ್ನು ನಿರ್ಮೂಲನೆ ಮಾಡಲು ಮನೆಯ ಸುತ್ತ ಮುತ್ತ ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳುವುದು,ಮನೆಯಲ್ಲಿ ಮತ್ತು ಮನೆಯ ಹೊರಗಡೆ ಮಲಗುವಾಗಿ ಸೊಳ್ಳೆ ಪರದೆಯನ್ನು ಕಟ್ಟಿಕೊಂಡು ಮಲಗಿಕೊಳ್ಳುವುದು,ಸೊಳ್ಳೆ ನಿರೋಧಕಗಳನ್ನು ಬಳಕೆ ಮಾಡಿ ವೈಯಕ್ತಿಕವಾಗಿ ಆರೋಗ್ಯ ದ ಬಗ್ಗೆ ಕಾಳಜಿ ವಹಿಸಿಕೊಳ್ಳುವುದು ಅನಿವಾರ್ಯ ಎಂದು ಅಭಿಪ್ರಾಯ ಪಟ್ಟ ಅವರು ಹೊಸ ಪ್ರಕರಣ ತಮ್ಮ ಸಮುದಾಯದಲ್ಲಿ ಕಾಣಿಸಿಕೊಂಡರೆ,ಹತ್ತಿರದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಲು ಕೇಳಿಕೊಂಡರು.
ಇಲಾಖೆ,ಶಾಲೆ ಕಾಲೇಜು ಸಂಘ ಸಂಸ್ಥೆಗಳು,ಗಣನೀಯವಾದಂತಹ ಭಾಗವಹಿಸುವಿಕೆ ಹಾಗೂ ಸಹಕಾರ ನೀಡುವುವಿಕೆಯಿಂದ ಕಲಬುರಗಿ ಜಿಲ್ಲೆಯ ನ್ನು ಆನೆಕಾಲು ರೋಗ ಮುಕ್ತವಾಗಿಸಲು ಸಾದ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನೀಲಕಂಠ ವಾಲಿ ಮಾತನಾಡಿ ಪಾರಂಪಾರಿಕ ವಾಗಿ ದೇಶದ ಸಂಪ್ರದಾಯದ ಪ್ರಕಾರ ಮನೆಯ ಒಳಗೆ ಹಾಗೂ ಸ್ವಚ್ಛತೆಯನ್ನು ಕಾಪಾಡಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿರ್ಮೂಲನೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟು ಇಲಾಖೆಯ ಕಾರ್ಯಕ್ರಮಗಳಿಗೆ ನಿರಂತರ ವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮವನ್ನು ಡಾ.ಪ್ರಾಣೇಶ್ ನಡೆಸಿಕೊಟ್ಟರು
ಡಾ. ಮೈತ್ರಾದೇವಿ ಹಳೆಮನಿ ಮೇಡಂ ಅವರು ಅತಿಥಿಗಳನ್ನು ಪರಿಚಯಿಸಿದರು.ಡಾ.ಶಂಕರೆಪ್ಪ ವಂದಿಸಿದರು. ಇಲಾಖೆಯ ಶರಣ ಬಸಪ್ಪ ಬಿರಾದಾರ,ಕಾಲೇಕಿನ ಎಲ್ಲ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು