ಧಾರ್ಮಿಕ ಪೂಜೆ, ಹರಕೆ — ಮಾನವ ಜೀವನದ ಪ್ರೇರಕ ಶಕ್ತಿ : ಡಾ. ಶಾಂತ ಸೋಮನಾಥ ಶ್ರೀಗಳು
ಧಾರ್ಮಿಕ ಪೂಜೆ, ಹರಕೆ — ಮಾನವ ಜೀವನದ ಪ್ರೇರಕ ಶಕ್ತಿ : ಡಾ. ಶಾಂತ ಸೋಮನಾಥ ಶ್ರೀಗಳು
ಕಾಳಗಿ ಅ. ೮ : ಟೆಂಗಳಿಯಲ್ಲಿ “ಸೇವಾಶ್ರೀ ಪ್ರಶಸ್ತಿ” ಪ್ರದಾನ — ಅಂಡಗಿ ಪ್ರತಿಷ್ಠಾನದ ಸೇವೆ ಶ್ಲಾಘನೀಯ
ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಸೀಗಿ ಹುಣ್ಣಿಮೆ ಪ್ರಯುಕ್ತ ನಡೆದ ಧಾರ್ಮಿಕ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಮಾತನಾಡಿ, ಪ್ರಾಚೀನ ಸಂಸ್ಕೃತಿಯ ಬೇರುಗಳಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಪ್ರಕೃತಿಪೂಜೆಯು ಮಾನವ ಜೀವನದ ಪ್ರೇರಕ ಶಕ್ತಿಯಾಗಿದ್ದು, ಆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೆಂದು ಹೇಳಿದರು.
ಅಂಬಾ ಭವಾನಿ ದೇವಾಲಯದಲ್ಲಿ ಅಂಡಗಿ ಮನೆತನದ ವತಿಯಿಂದ ಆಯೋಜಿಸಲಾದ ೪೮ನೇ ವಾರ್ಷಿಕೋತ್ಸವ ಹಾಗೂ ನವರಾತ್ರಿ ಅಂಗವಾಗಿ ನಡೆದ ಭಜನಾ ಕಾರ್ಯಕ್ರಮದ ನಿಮಿತ್ತ, ಒಂಬತ್ತು ದಿನಗಳ ಕಾಲ ಭಜನೆ ಮಾಡಿದ ವಿವಿಧ ಭಜನಾ ಮಂಡಳಿಯ ಭಕ್ತರಿಗೆ “ಸೇವಾಶ್ರೀ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಭದ್ರಯ್ಯ ಸಾಲಿಮಠ ಅವರು ಮಾತನಾಡಿ, “ಅಂಡಗಿ ಪ್ರತಿಷ್ಠಾನ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿದ್ದು, ಜನಸಾಮಾನ್ಯರ ಜೀವನದೊಂದಿಗೆ ಸಂಸ್ಕೃತಿಯನ್ನು ಬೆರೆಸಿದೆ,” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನಂಜಯ ಕುಲಕರ್ಣಿ ವಹಿಸಿದರು. ವೇದಿಕೆಯಲ್ಲಿ ವಿಜಯಕುಮಾರ ತುಪ್ಪದ್, ಸಿದ್ರಾಮಪ್ಪ ಅಂಡಗಿ, ಶಿವರಾಜ ಅಂಡಗಿ ಉಪಸ್ಥಿತರಿದ್ದರು.
ರೇಖಾ ಅಂಡಗಿ ಪ್ರಾರ್ಥನೆ ಸಲ್ಲಿಸಿದರು, ವೀರಭದ್ರಪ್ಪ ಭಾಳದೇ ಸ್ವಾಗತಿಸಿದರು, ಚಂದ್ರಶೇಖರ ಎಲೇರಿ ವಂದಿಸಿದರು.
“ಸೇವಾಶ್ರೀ ಪ್ರಶಸ್ತಿ”ಗೆ ಭಾಜನರಾದವರು ಟೆಂಗಳಿ, ಜಂಬಗಿ ಮತ್ತು ತೊನಸಳ್ಳಿ ಗ್ರಾಮದ ಭಜನಾ ಮಂಡಳಿಯ ಪ್ರಮುಖರಾದ ನಾಗಣ್ಣ ಗರ್, ಚಂದ್ರಶೇಖರ ಬಸ್ತೆ, ಶ್ರೀಶೈಲ ತಮ್ಮನಗೌಡ, ಅನೀತಾ ಮಠಪತಿ, ಕಾಶಮ್ಮ ಜೋಗದ, ಸಿದ್ದಲಿಂಗ ಜಂಬಗಿ, ಸುಲಗಮ್ಮ ಕುಡಗುಂಟಿ, ಈರಣ್ಣ ಸಾಹುಕಾರ, ಕೇಶ್ವಾರ ಮಹಾದೇವಸ್ವಾಮಿ ಮಠಪತಿ.
ಕಾರ್ಯಕ್ರಮದ ನಂತರ ಭಜನೆ ಹಾಗೂ ಜಾಗರಣೆ ಕಾರ್ಯಕ್ರಮ ನಡೆಯಿತು.
ಮಡಿವಾಳಯ್ಯ ಸಾಲಿಮಠ, ವಿಶ್ವನಾಥ ಬಾಳದೇ, ಬೀರಣ್ಣ ಪೂಜಾರಿ, ವಿನೋದಕುಮಾರ ಜನೇವರಿ, ನಾಗರಾಜ ಹೂಗಾರ, ಸಿದ್ದು ಪಾಟೀಲ, ಶರಣು ನೀಲಹಳ್ಳಿ, ಬಸವರಾಜ ಕಡ್ಲಿ, ಅರುಣಕುಮಾರ ಕುದರಿಕಾರ, ಮಲ್ಲಣ್ಣ ಬೇರನ, ಚಂದ್ರಶೇಖರ ಮಂಗದ್, ನಾಗರಾಜ ಹಡಬಲಿ, ಶಿವು ಮಠಪತಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದರು.