ಜನತಾ ಬಜಾರ್‌ನಲ್ಲಿ ಭಾವಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ

ಜನತಾ ಬಜಾರ್‌ನಲ್ಲಿ ಭಾವಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ
ಕಲಬುರಗಿ, ಅ. 7:ಇಂದು ನಗರದ ಸುಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಜನತಾ ಬಜಾರ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಭಾವಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜನತಾ ಬಜಾರ್‌ನ ಅಧ್ಯಕ್ಷ ದತ್ತಾತ್ರಿ ಫಂಡನಿಸ್, ಉಪಾಧ್ಯಕ್ಷ ವಂದನಾ ಮಂಗಳೂರೆ, ನಿರ್ದೇಶಕರಾದರಾಜಕುಮಾರ್ ಕೋಟಿ , ಶಿವಾಜಿ ಸೂರ್ಯವಂಶ, ರಮೇಶ್ ಕಮಲಾಪುರ್, ಅಣವೀರ ಕಾಳಗಿ, ಸಿದ್ದರಾಮಪ್ಪ ಅಫಜಲಪುರಕರ್, ಬಸಲಿಂಗ ಸುಭೆದಾರ, ಅನ್ನಪೂರ್ಣ ಸಂಗಶೆಟ್ಟಿ, ತಾನಾಜಿ ಬಿರಾದಾರ್, ಮಲ್ಲಿಕಾರ್ಜುನ್ ಸಂಗಶೆಟ್ಟಿ
ಹಾಗೂ ಸಿಬ್ಬಂದಿ ವರ್ಗದವರು ಒಟ್ಟಾಗಿ ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ತತ್ವ, ಆದರ್ಶಗಳನ್ನು ಸ್ಮರಿಸಿದರು.
ರಾಜಕುಮಾರ್ ಕೋಟಿ ಅವರು ಮಾತನಾಡಿ, “ಮಹರ್ಷಿ ವಾಲ್ಮೀಕಿ ಅವರು ಮಾನವ ಸಮಾಜಕ್ಕೆ ನೈತಿಕತೆ, ಸತ್ಯ, ಧರ್ಮ ಮತ್ತು ಮಾನವೀಯ ಮೌಲ್ಯಗಳ ದಾರಿ ತೋರಿಸಿದವರು. ಅವರ ಉಪದೇಶಗಳು ಇಂದಿಗೂ ಪ್ರಸ್ತುತವಾಗಿವೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜನತಾ ಬಜಾರ್ ಸಿಬ್ಬಂದಿ ಮತ್ತು ಸ್ಥಳೀಯರು ಭಾಗವಹಿಸಿ, ನಾಡಿನ ಸಮಸ್ತ ಜನತೆಗೆ ವಾಲ್ಮೀಕಿ ಜಯಂತಿ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.