ಸೋಮಶೇಖರಪ್ಪ ನೇತೃತ್ವದಲ್ಲಿ ವಿಕಸಿತ ಭಾರತದ ದೃಷ್ಟಿಕೋನ ಪ್ರಕಟ"

ವಿಕಸಿತ ಭಾರತ : ಎರಡು ದಿನದ ರಾಷ್ಟ್ರೀಯ ಸಮ್ಮೇಳನ ಯಶಸ್ವೀಯಾಗಿ ಪೂರ್ಣಗೊಂಡಿತು.
ಅಂತರ ರಾಜ್ಯಗಳಿಂದ 100ಕೂ ಹೆಚ್ಚಿನ ಜನ ಭಾಗವಹಸಿ ವಿಷಯ ಮಂಡನೆ
2047 ಕ್ಕೆ ದೇಶ ಸ್ವಾವಲಂಬಿ ಮತ್ತು ಸಮೃದ್ಧ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಗುರಿ ವಿಕಸಿತ ಭಾರತದ ಉದ್ದೇಶ : ಪ್ರೊ. ಸಿ.ಎ. ಸೋಮಶೇಖರಪ್ಪ
ಚಿಂಚೋಳಿ : ಭಾರತ ಸರ್ಕಾರವು 1951 ರಲ್ಲಿ ಆರ್ಥಿಕ ಯೋಜನೆಗಳನ್ನು ಅನುಸರಿಸಿದ್ದ ಪರಿಷ್ಕೃತ, ವ್ಯಾಖ್ಯಾನಿಸಲಾದ, ನಿರ್ದೇಶಿತ, ನವೀಕರಿಸಿದ ನೀತಿ ಕಾರ್ಯಕ್ರಮವೇ 2047ರ ವಿಕಸಿತ ಭಾರತದ ಗುರಿ ಆಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರೊ. ಸಿ.ಎ. ಸೋಮಶೇಖರಪ್ಪ ಪರವಾಗಿ ಕಲಬುರಗಿ ವಿಶ್ವವಿದ್ಯಾಲಯದ ಪ್ರೊ. ಜಗನ್ನಾಥ ಸಿಂಧೆ ಅವರು ಹೇಳಿದರು.
ಇಲ್ಲಿನ ಹೈದ್ರಾಬಾದ ಶಿಕ್ಷಣ ಸಂಸ್ಥೆಯ ಚಂದಾಪೂರದ ಸಿ.ಬಿ ಪಾಟೀಲ ಮಹಾವಿದ್ಯಾಲಯದಲ್ಲಿ ಭಾರತ ಜ್ಞಾನ ವ್ಯವಸ್ಥೆ ಮತ್ತು ಆಯುಷ್ ವಿಕಸಿತ ಭಾರತ ಎಂಬ ವಿಷಯದ ಮೇಲೆ ಎರಡು ದಿನದ ರಾಷ್ಟೀಯ ಸಮ್ಮೇಳನ (ನ್ಯಾಷನಲ್ ಕಾನ್ಫರೇನ್ಸ್) ಉದ್ಘಾಟಿಸಿ ಮಾತನಾಡಿದರು.
2047 ರ ವೇಳೆಗೆ ದೇಶವನ್ನು ಸ್ವಾವಲಂಬಿ ಮತ್ತು ಸಮೃದ್ಧ ಆರ್ಥಿಕತೆಯನ್ನಾಗಿ ಪರಿವರ್ತಿಸುವ ನಿಗದಿತ ಗುರಿಯನ್ನು ಸಾಧಿಸುವ ಉದ್ದೇಶದಿಂದ ವಿಕಸಿತ ಭಾರತದಡ್ಡಿ ಹೊಸ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ.
ಮುಂದಿನ ಕಾಲು ಶತಮಾನದವರೆಗೆ ವಿಸ್ತಾರವಾದ ನೀತಿ ವಿಕಸಿತ ಭಾರತ ಹೊಂದಿದೆ.
ಶೂನ್ಯ ಬಡತನ , ಗುಣಮಟ್ಟದ ಶಿಕ್ಷಣ, ಸಮಗ್ರ ಆರೋಗ್ಯ ಸೇವೆ, ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಗಳು ಹಾಗೂ ಮಹಿಳೆಯರು , ರೈತರು ದೇಶವನ್ನು ವಿಶ್ವದ ಆಹಾರದ ಬುಟ್ಟಿಯನ್ನಾಗಿ ಮಾಡುವ ಉದ್ದೇಶ ವಿಕಸಿತ ಭಾರತ ದಗುರಿಯಾಗಿದೆ ಎಂದರು.
ಚಿತ್ತಾಪೂರ ನಿವೃತ್ತ ಪ್ರಾಚಾರ್ಯ ಪ್ರೊ. ಎ.ಜಿ. ಖಾನ ಅವರು ಮಾತನಾಡಿ, ವೈಜ್ಞಾನಿಕ ಬುನಾದಿಯ ಮೇಲೆ ಭಾರತ ಸ್ವಂತ ಶಕ್ತಿಯ ಮೇಲೆ ಮುಂದುವರೆಯುತ್ತಿದೆ. ಜ್ಞಾನ ಪರಂಪರೆವುಳ್ಳ ದೇಶ ಭಾರತ. ವೈಜ್ಞಾನಿಕವಾಗಿ ಎಲ್ಲಾ ಕ್ಷೇತ್ರದಲ್ಲಿ ಮುನ್ನುಗುತ್ತಿರುವ ದೇಶವಾಗಿದೆ. ಮಹಾಮಾರಿ ಕರೋನಾ ಕಷ್ಟದ ಸಂದರ್ಭದಲ್ಲಿ ಭಾರತದ ಪರಂಪರೆಯ ಆಯುರ್ವೇದಿಕ ಮನೆ ಔಷಧಿಗಳು ರೋಗಕ್ಕೆ ಮದ್ದಾಗಿ ಉಪಯೋಗಿಸಿಕೊಂಡು ಮನೆಯ ಔಷಧಿಗಳ ಪ್ರಾಮುಖತೆ ಶಕ್ತಿ ಭಾರತ ತೊರಿಸಿದೆ ಎಂದರು.
ಕಾಲೇಜಿನ ಪ್ರಾಚಾರ್ಯೆ ಎಂ.ಎನ್. ಸುಲ್ತಾನಪೂರ, ಗೋಪಾಲರಾವ ಕಟ್ಟಿಮನಿ, ಜೈಕಿಶನ ಠಾಕೂರ, ಅಶೋಕ ಪಾಟೀಲ ಅವರು ಮಾತನಾಡಿದರು. ಈ ಎರಡು ದಿನದ ರಾಷ್ಟೀಯ ಸಮ್ಮೇಳನದಲ್ಲಿ ಅಂತರ ರಾಜ್ಯಗಳಿಂದ 100ಕ್ಕೂ ಹೆಚ್ಚಿನ ಜನರು ಸಮ್ಮೇಳನದಲ್ಲಿ ಭಾಗವಹಿಸಿ ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದರು.