ಡಾ ಮಹೇಶ್ ಗಂವ್ಹಾರ,ವಿಜಿ ಮ.ಪ.ಪ್ರಾಚಾರ್ಯರಾಗಿ ಪದಗ್ರಹಣ

ಡಾ ಮಹೇಶ್ ಗಂವ್ಹಾರ,ವಿಜಿ ಮ.ಪ.ಪ್ರಾಚಾರ್ಯರಾಗಿ ಪದಗ್ರಹಣ
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಪದವಿ ಮಹಾವಿದ್ಯಾಲಯ ಸಮಾಜಶಾಸ್ತ್ರ ಮುಖ್ಯಸ್ಥರಾದ ಡಾ ಮಹೇಶ್ ಗಂವ್ಹಾರ ಅವರು ಸಂಸ್ಥೆಯ ಎಚ್ ಕೆ ಇ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಪದಗ್ರಹಣ ಮಾಡಿದರು.
ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿರುವ ಡಾ ಮಹೇಶ್ ಗಂವ್ಹಾರ ಅವರನ್ನು ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ ಮೋಹನರಾಜ ಪತ್ತಾರ, ಪದವಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ ಸುಭಾಷ್ ದೊಡಮನಿ, ಕ್ರೀಡಾ ನಿರ್ದೇಶಕ ಡಾ ವಿಶ್ವನಾಥ್ ದೇವರಮನಿ ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಅಭಿನಂದಿಸಿದರು