ಸಾಹಿತ್ಯ ಪರಿಚಾರಿಕೆಗೆ ಹಂಶಕವಿ ಕೊಡುಗೆ ಅಪಾರ: ಡಾ.ಗವಿಸಿದ್ಧಪ್ಪ ಪಾಟೀಲ

ಸಾಹಿತ್ಯ ಪರಿಚಾರಿಕೆಗೆ ಹಂಶಕವಿ ಕೊಡುಗೆ ಅಪಾರ: ಡಾ.ಗವಿಸಿದ್ಧಪ್ಪ ಪಾಟೀಲ

ಸಾಹಿತ್ಯ ಪರಿಚಾರಿಕೆಗೆ ಹಂಶಕವಿ ಕೊಡುಗೆ ಅಪಾರ: ಡಾ.ಗವಿಸಿದ್ಧಪ್ಪ ಪಾಟೀಲ

ಕಲಬುರಗಿ:ಬೀದರ ಜಿಲ್ಲೆಯಲ್ಲಿ ದೇಶಾಂಶ ಹುಡುಗಿಯವರ ಜೊತೆಗೆ ಧರಿನಾಡು ಕನ್ನಡ ಸಂಘ ಕಟ್ಟಿ ನೂರಾರು ಕೃತಿ ಪ್ರಕಟಿಸಿ, ಹಲವಿಗೆ ವೇದಿಕೆ‌ ನೀಡಿ,ಯುವ ಲೇಖಕರ ಸೃಷ್ಟಿಸಿದವರು

ಸ್ವತಃ ಕವಿ,ಲೇಖಕ,ಬರಹಗಾರರಾಗಿ,೭೫ ಕ್ಕೂ ಹೆಚ್ಚು ಆಧುನಿಕ ವಚನ ಸಂಪುಟಗಳನ್ನು ಪ್ರಕಟಿಸಿದ ಕೀರ್ತಿ ಜೊತೆಗೆ ಸಾಹಿತ್ಯ ಪರಿಚಾರಿಕೆ ಕೆಲಸ ಮಾಡಿದ ಹಂಶಕವಿ ಗಳ ಕೊಡುಗೆ ಅಪಾರ ಎಂದು ಸಾಹಿತಿ- ಜಿಲ್ಲಾ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ಪಟ್ಟರು.

ಪೋಲಿಸ್ ಇಲಾಖೆಯಿಂದ ನಿವೃತ್ತರಾದ ಕವಿ,ಸಾಹಿತಿ,ಶ್ರೀ ಹಂಶಕವಿ, ಅವರಿಗೆ ಸನ್ಮಾನಿಸಿ ಪೋಲಿಸ್ ಇಲಾಖೆಗೂ ಅವರ ಸೇವೆ ಸಂದಿದೆ ಎಂದರು. ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ದಿಂದ ಸನ್ಮಾನಿಸಿ ಮಾತನಾಡಿದರು.

                ಬೀದರ ಕರ್ನಾಟಕ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾಗಿ ನಿವೃತ್ತರಾದ ಪ್ರೊ.ವೈಜನಾಥ ಚಿಕ್ಕಬಸೆ ಅವರು ಇತಿಹಾಸ ಬೋಧನೆಯ ಜೊತೆಗೆ ಅಪಾರ ಶಿಷ್ಯರನ್ನು ಬೆಳೆಸಿದವರು ಅವರ ಕಾರ್ಯ ಶ್ಲಾಘನೀಯ ಹಾಗೆ ಅಂತಾರಾಷ್ಟ್ರೀಯ ಗಾಯಕ ಕಲಾವಿದರಾಗಿ ಜಾನಪದ ಹಾಡು,ಭಾವಗೀತೆ ಮೂಲಕ ವಿಶ್ವ ಅಕ್ಕ ಸಮ್ಮೇಳನದಲ್ಲಿ ಮಿಂವಿದವರು.ಸ್ವತಃ ಹಾಯಿಕು ಕವಿಗಳಾಗಿ ಐದು ಸಂಕಲನ ಪ್ರಕಟಿಸಿದವರು,ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶಂಭುಲಿಂಗ ವಾಲ್ದೊಡ್ಡಿ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ,ಶ್ರೀಮತಿ ಬಸಮ್ಮ ಮಲ್ಲಪ್ಪ ಗಾಯಕವಾಡ,ದಿಶಾ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ವಿದ್ಯಾ ಸಾಗರ,ಪಾಲಿ ಅಧ್ಯಯನ ಸಂಸ್ಥೆಯ ಅತಿಥಿ ಪ್ರಾಧ್ಯಾಪಕ ಡಾ.ಪೀರಪ್ಪ ಸಜ್ಜನ,ಸಾಕ್ಷಿ, ಸೃಷ್ಟಿ ಇದ್ದರು.