ಅನ್ನದಾತನ ಕಣ್ಣೀರಿಗೆ ಸಿಎಂ ಸಿದ್ದರಾಮಯ್ಯನವರು ಸ್ಪಂದಿಸಿದ್ದಾರೆ : ರಾಜು ಮಾಳಗಿ

ಅನ್ನದಾತನ ಕಣ್ಣೀರಿಗೆ ಸಿಎಂ ಸಿದ್ದರಾಮಯ್ಯನವರು ಸ್ಪಂದಿಸಿದ್ದಾರೆ : ರಾಜು ಮಾಳಗಿ
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಲಬುರಗಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ನವರು 2.500/ ಕೋಟಿ ರೂ. ಘೋಷಣೆ ಮಾಡಿದ್ದಕ್ಕಾಗಿ ದಕ್ಷಿಣ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ರಾಜು ಮಾಳಗಿ ಅವರು ಸಂತಸ ವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದ ಹಾಗೂ ಮಹಾರಾಷ್ಟ್ರದ ಉಜ್ಜನಿ ಜಲಾಶಯದ ನೀರು ಭೀಮಾ ನದಿಗೆ ಬಿಟ್ಟಿದ್ದ ಪರಿಣಾಮ ಅಫಜಲಪುರ. ಜೇವರ್ಗಿ. ಆಳಂದ. ಚಿತ್ತಾಪುರ. ಸೇಡಂ. ಚಿಂಚೋಳಿ. ಸೇರಿದಂತೆ ಅನೇಕ ಹಳ್ಳಿಗಳು ಜಲಾವೃತವಾಗಿ ಹಳ್ಳಿಯ ಜನರು ಕಂಗಾಲಾಗಿದ್ದಾರೆ. ಇದ್ದನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಮನಿಸಿ ಸಿಎಂ ಸಿದ್ದರಾಮಯ್ಯ ನವರಿಗೆ ಮಾಹಿತಿ ನೀಡಿದರು.
ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆಹಾನಿಯಾಗಿ ಕಂಗಾಲಾಗಿರುವ ಅನ್ನದಾತನ ಕಣ್ಣೀರಿಗೆ ಸಿಎಂ ಸಿದ್ದರಾಮಯ್ಯ ನವರು ಸ್ಪಂದಿಸಿದ್ದಾರೆ ಎಂದು ದಕ್ಷಿಣ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ರಾಜು ಮಾಳಗಿ ತಿಳಿಸಿದರು.
ಕಲಬುರಗಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳ ಬೆಳೆಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕಲಬುರ್ಗಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ರಾಜು ಮಾಳಗಿ ಅವರು ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ತಿಳಿಸಿದರು.
ಅತಿವೃಷ್ಟಿಯಿಂದ ಬೆಳೆ ಹಾಗೂ ಹಳ್ಳಿಗಳಲ್ಲಿ ಮನೆಗೆ ನುಗ್ಗಿದ ನೀರು ಇದ್ದನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಗಮನಿಸಿ ಸುಮಾರು 3500/ ಸಾವಿರ ರೇಶನ್ ಕಿಟ್ ಬಡ ಕುಟುಂಬದವರಿಗೆ ವಿತರಣೆ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಕೆಕೆ ಆರ್ ಡಿ ಬಿ ಅಧ್ಯಕ್ಷ ಡಾ ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ಶಾಸಕ ಎಮ್ ವೈ ಪಾಟೀಲ್, ಶಾಸಕ ಬಿ ಆರ್ ಪಾಟೀಲ್, ಶಾಸಕಿ ಖನಿಜ್ ಫಾತಿಮಾ ಸೇರಿದಂತೆ ಅನೇಕ ಸಚಿವರು ಶಾಸಕರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೆ ವೇಳೆ ಮಾತನಾಡಿದ ದಕ್ಷಿಣ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ರಾಜು ಮಾಳಗಿ ಅವರು ಒಂದು ತಂಡ ರಚನೆ ಮಾಡಿ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಇದೆ ಮಾತನಾಡಿದ ಯುವ ಘಟಕದ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ ಅವರು ಅತಿವೃಷ್ಟಿ ಮಳೆಯಿಂದ ಬೆಳೆ ಹಾನಿ ಹಾಗೂ ಹಲವು ಮನೆಗಳು ಹಾನಿಯಾಗಿವೆ ಇದ್ದಕ್ಕೆ ಒಂದು ತಂಡ ರಚನೆ ಮಾಡಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ವರದ ಸಲ್ಲಿಸಿದ ಬಳಿಕ ಪರಿಹಾರದ ಹಣವನ್ನು ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ದಕ್ಷಿಣ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ರಾಜು ಮಾಳಗಿ ಅವರ ನೇತೃತ್ವ ಹಾಗೂ ಯುವ ಘಟಕದ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ, ಯುವ ಘಟಕದ ಮಾಜಿ ಅಧ್ಯಕ್ಷ ಶಿವಾನಂದ ಹೊನಗುಂಟಿ, ಈರಣ್ಣಾ ಪಾಟೀಲ್ ಝಳಕಿ, ಟೈಗರ್ ವಿಘ್ನೇಶ್ವರ, ಮಹೇಂದ್ರ ನಾಯ್ಡು, ಶರಣಗೌಡ ಮಾಲಿ ಪಾಟೀ¯, ಆಸೀಮ್ ಪಟೇಲ್, ಮಯೂರ ವಾಘಮಾರೆ ಅವರು ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ನವರಿಗೆ ಧನ್ಯವಾದಗಳು ತಿಳಿಸಿದರು.