ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಹೇಳಿಕೆಗೆ ಅಖಿಲ ಕರ್ನಾಟಕ ದಲಿತ ಸೇನೆ ಖಂಡನೆ

ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಹೇಳಿಕೆಗೆ ಅಖಿಲ ಕರ್ನಾಟಕ ದಲಿತ ಸೇನೆ ಖಂಡನೆ

ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಹೇಳಿಕೆಗೆ ಅಖಿಲ ಕರ್ನಾಟಕ ದಲಿತ ಸೇನೆ ಖಂಡನೆ

ಕಲಬುರಗಿ: ಲೋಕೋಪಯೋಗಿ ಇಲಾಖೆಯ ಸುಪರಿಂಟೆAಡೆAಟ್ ಇಂಜಿನಿಯರ್ ಅಮೀನ ಮುಕ್ತಾರ ಅಹ್ಮದ ಅವರ ವಿರುದ್ಧ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಅವರು ಮಾಡುತ್ತಿರುವ ಆರೋಪಗಳು ಮತ್ತು ಅವರಿಗೆ ಸರ್ಕಾರಿ ಕೆಲಸದ ಸಮಯದಲ್ಲಿ ಮಾನಸಿಕ ಕಿರಕುಳ ನೀಡುತ್ತಿರುವುದು ಅಖಿಲ ಕರ್ನಾಟಕ ದಲಿತ ಸೇನೆ ಖಂಡಿಸಿದೆ.

ಅಮೀನ ಮುಕ್ತಾರ ಅವರು 2018 ರಿಂದ 2020ರ ವರೆಗೆ ಕಾರ್ಯನಿರ್ವಾಹಕ ಅಭಿಯಂತರರಾಗಿ, ಕಲಬುರಗಿಯಲ್ಲಿ 2021 ಯಾದಗಿರಿ ಜಿಲ್ಲೆಯಲ್ಲಿ, ಪ್ರಸ್ತುತ ಕಲಬುರಗಿ ಜಿಲ್ಲೆಯ ಲೋಕೋಪಯೋಗಿ ಇಲಾಖೆಯಲ್ಲಿ ಎಸ್.ಇ. ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯದ ಅವಧಿಯಲ್ಲಿ ಹಿಂದುಳಿದ ವರ್ಗ, ದಲಿತರು ಉನ್ನತ ವರ್ಗದ ಗುತ್ತಿಗೆದಾರರಿಗೆ ಮತ್ತು ರಾಜಕೀಯ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಕೆಲಸವನ್ನು ನೀಡುವುದರ ಮೂಲಕ ಆರ್ಥಿಕವಾಗಿ, ಸಬಲೀಕರಣ ಗೊಳಿಸತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಮನುವಾದಿಗಳ ಅಣತಿಯಂತೆ ಕಲಬುರಗಿ ಜಿಲ್ಲೆಯಲ್ಲಿ ದಲಿತರು ಮುಸ್ಲಿಮರು ಕೆಳವರ್ಗದ ನೌಕರಸ್ತರು ಉನ್ನತ ಹುದ್ದೆಯಲ್ಲಿ ಮುಂದುವರೆಯದ ಹಾಗೆ ಇಲ್ಲ ಸಲ್ಲದ ಆರೋಪ ಹೊರಸಿ ಮಾನಸಿಕವಾಗಿ ಕುಗ್ಗಿಸಲಿಕ್ಕೆ ಪ್ರಯತ್ನ ಪಡುತ್ತಿರುವುದು ಖಂಡನೀಯ.

ಅಮೀನ ಮುಕ್ತಾರ ಇವರ ಮೇಲೆ ಲೋಕಾಯುಕ್ತ ತನಿಖೆ ನಡೆದಿರುವುದು ಇಡೀ ಜಿಲ್ಲೆಗೆ ಗೊತ್ತಿರು ವಿಷಯ, ಆದರೆ ಜೆ.ಡಿ.ಎಸ್. ಮುಖಂಡ ಕೃಷ್ಣಾರೆಡ್ಡಿಯವರು ಲೋಕಾಯುಕ್ತ ಹೆಸರಿನ ಮೇಲೆ ಮತ್ತು ಅಮೀನ ಮುಕ್ತಾರವರು ಅಕ್ರಮ ಆಸ್ತಿ ಮಾಡಿದ್ದಾರೆಂದು ಆರೋಪ ಮಾಡಿ ಅವರನ್ನು ಬ್ಲ್ಯಾಕ್‌ಮೆಲ್ ಮಾಡುತ್ತಿರುವುದು, ಕೃಷ್ಣಾರೆಡ್ಡಿಯವರಿಗೆ ಶೋಭೆ ತರುವ ವಿಷಯವಲ್ಲ. ಹಾಗೂ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿಯವರು ಕಲಬುರಗಿ ಜಿಲ್ಲೆಯಲ್ಲಿ ಲಿಂಗಾಯತ, ಬ್ರಾಹ್ಮಣ, ಮತ್ತು ಇನ್ನಿತರ ಮೇಲ್ವರ್ಗದ ಸಕಾರಿ ಅಧಿಕಾರಿಗಳು, ಎಷ್ಟೇ ಭ್ರಷ್ಟಾಚಾರ ಮಾಡಿದರು ಆರೋಪ ಮಾಡದ ಇವರು ಕೆಳವರ್ಗದ ಅಧಿಕಾರಿಗಳಿಗೆ ಆರೋಪ ಹೊರೆಸಿ ಬ್ಲಾಕ್‌ಮೆಲ್ ಮಾಡುತ್ತಿರುವುದು ಎಂದು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ, ಸಾಮಾಜಿಕ ಜಾಲ ತಾಣದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾಂಬಳೆ ಹಾಗೂ ಅಖಿಲ ಕರ್ನಾಟಕ ದಲಿತ ಸೇನೆ ಮುಖಂಡರಾದ ನಾಗರಾಜ ಭಾವಿಮನಿ ಇವರು ಉಗ್ರವಾಗಿ ಪ್ರಕಟನೆಯ ಮೂಲಕ ಖಂಡಿಸಿದ್ದಾರೆ