ವೀರಶೈವ ಲಿಂಗಾಯಿತರನ್ನು ತಪ್ಪು ದಾರಿಗೆಳೆಯುತ್ತಿರುವ ರಂಭಾಪುರಿ ಶ್ರೀ.

ವೀರಶೈವ ಲಿಂಗಾಯಿತರನ್ನು ತಪ್ಪು ದಾರಿಗೆಳೆಯುತ್ತಿರುವ ರಂಭಾಪುರಿ ಶ್ರೀ.
ಈಗ ನಡೆದಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಬರೆಯಿಸಿ ಎಂದು ಹೇಳಿಕೆ ನೀಡಿರುವ ಪಂಚ ಪೀಠಗಳಲ್ಲೊಬ್ಬರಾದ ರಂಭಾಪುರಿ ಜಗದ್ಗುರುಗಳು ವೀರಶೈವ ಲಿಂಗಾಯತ ಸಮುದಾಯವನ್ನು ತಪ್ಪು ದಾರಿಗಳಿಯುತ್ತಿದ್ದಾರೆ ಮೂಲತಃ ಹಿಂದೂ ಧರ್ಮವೇ ಅಲ್ಲ ಭಾರತದ ತತ್ವಜ್ಞಾನಿಗಳೆಲ್ಲ ಇದನ್ನು ಹೇಳುತ್ತಾ ಬಂದಿದ್ದಾರೆ ಇದನ್ನು ಗಮನಿಸದೆ ಹಿಂದೂ ಧರ್ಮವೆಂದು ಹೇಳಿದ್ದು ವಿಷಾದನೀಯ ಸಂಗತಿಯಾಗಿದೆ ಅಷ್ಟೇ ಅಲ್ಲ ವೀರಶೈವ ಮತ್ತು ಲಿಂಗಾಯತ ಧರ್ಮಗಳು ಅವುಗಳನ್ನು ಜಾತಿ ಕಾಲಂನಲ್ಲಿ ಸೇರಿಸಲು ಹೇಳಿದ್ದು ಹಾಸ್ಯಸ್ಪದ ಸಂಗತಿಯಾಗಿದೆ ಈ ರೀತಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದರೆ ಮುಂದೇನು ಗತಿ ಎಂಬ ಭಯಾನಕ ವಾತಾವರಣ ನಿರ್ಮಾಣವಾಗಿದೆ ವೀರಶೈವ ಧರ್ಮದಂತೆ ಲಿಂಗಾಯತ ಧರ್ಮವು ಒಂದು ಧರ್ಮ ಇವು ಸ್ವತಂತ್ರವಾದ ಧರ್ಮದ ಮಾನ್ಯತೆ ಪಡೆದುಕೊಳ್ಳುವಂಥ ಅರ್ಹತೆ ಪಡೆದವುಗಳು ಇಂಥದರಲ್ಲಿ ಸ್ವತಹ ವೀರಶೈವ ಲಿಂಗಾಯತ ಧರ್ಮವನ್ನು ರಕ್ಷಿಸಬೇಕಾದ ಜಗದ್ಗುರುಗಳೇ ಈ ರೀತಿ ಹೇಳಿಕೆ ನೀಡಿ ವೀರಶೈವ ಲಿಂಗಾಯತ ಹೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಬೇಕಾಗುತ್ತದೆ ಹಾಗಾದರೆ ವೀರಶೈವ ಮತ್ತು ಲಿಂಗಾಯತ ಜಾತಿಗಳಾದರೆ ಇವರು ಜಾತಿ ಧರ್ಮದ ಗುರುಗಳಾಗದೆ ಕೇವಲ ಜಾತಿ ಜಗದ್ಗುರುಗಳಾಗುತ್ತಾರೆ ಎಂಬುದು ನೆನಪಿಡಬೇಕು
ಲಿಂಗಾಯಿತ ವೀರಶೈವ ಜಾತಿಗಳಲ್ಲ ವಿಶಾಲವಾದ ವಿಶ್ವ ಧರ್ಮಗಳು ಮಾನವ ಧರ್ಮದ ಮೂಲಭೂತ ವಿಷಯಗಳನ್ನು ಒಳಗೊಂಡಿವೆ ಇವುಗಳನ್ನು ಜಾತಿ ಎಂದು ಬರೆಯಿಸಲು ಹೇಳಿದ್ದು ಸರಿಯಾದ ಕ್ರಮವಲ್ಲ ರಂಭಾಪುರಿ ಜಗದ್ಗುರುಗಳ ಹೇಳಿಕೆ ಹಿಂದೆ ಬಿಜೆಪಿ ಕೈವಾಡವಿದೆ ಮತ್ತು ಆರ್ ಎಸ್ ಎಸ್ ಬೆಂಬಲವಿದೆ ಎಂದು ಕಂಡುಬರುತ್ತದೆ. ಬಸವಕಲ್ಯಾಣದಲ್ಲಿ ನಡೆದ ದಸರಾ ದರ್ಬಾರ್ ಕಾರ್ಯಕ್ರಮ ಅದೊಂದು ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮವೆಂದು ಬಣ್ಣಿಸಬಹುದು ಇಂಥ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರೆ ಬಹುಪಾಲು ಭಾಗವಹಿಸಿರುವುದರಿಂದ ಮತ್ತು ಜಗದ್ಗುರುಗಳು ಹೇಳಿದೆ ಹೇಳಿಕೆಯನ್ನು ಬಸವಕಲ್ಯಾಣದ ಶಾಸಕರು ಸಂಪೂರ್ಣವಾಗಿ ಸ್ವೀಕರಿಸಿರುವುದರಿಂದ ವೀರಶೈವ ಲಿಂಗಾಯತ ಸಮುದಾಯ ಗೊಂದಲಕ್ಕೀಡಾಗಿದೆ ಇಂಥ ಹೇಳಿಕೆಗಳು ನೀಡುವ ಮುನ್ನ ಧರ್ಮಗುರುಗಳು ಮತ್ತು ಜನನಾಯಕರು ಗಂಭೀರವಾದ ಚಿಂತನೆ ನಡೆಸಬೇಕು ತಮ್ಮ ಮನಸ್ಸಿಗೆ ಬಂದಂತೆ ತೋಚಿದಂತೆ ಹೇಳಿದರೆ ಸಮಾಜ ಒಡೆದು ಹೋಗುವುದರಲ್ಲಿ ಸಂದೇಹವಿಲ್ಲ ಇಂಥ ಹೇಳಿಕೆ ನೀಡುವುದರ ಹಿಂದೆ ಯಾವುದೋ ಒಂದು ಷಡ್ಯಂತ್ರ ಬಹುದೊಡ್ಡ ಪ್ರಮಾಣದ ಲಾಬಿ ನಡೆದಿದೆ ಎಂಬುದು ಓದುಗರಿಗೆ ಅರ್ಥವಾಗುತ್ತೆ ದಯವಿಟ್ಟು ಇಂಥ ಹೇಳಿಕೆಯನ್ನು ನೀಡಬಾರದೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಚಿಂತಕರಾದ ಪ್ರೊ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.