ನಿಧನ ವಾರ್ತೆ :ಭಾರತದ ಅನರ್ಘ್ಯ ರತ್ನ ಹೆಮ್ಮೆಯ ಉದ್ಯಮಿ ರತನ್ ಟಾಟಾ ಇನ್ನಿಲ್ಲ

ನಿಧನ ವಾರ್ತೆ :ಭಾರತದ ಅನರ್ಘ್ಯ ರತ್ನ  ಹೆಮ್ಮೆಯ ಉದ್ಯಮಿ ರತನ್ ಟಾಟಾ ಇನ್ನಿಲ್ಲ

                               : ನಿಧನ ವಾರ್ತೆ :

ಭಾರತದ ಅನರ್ಘ್ಯ ರತ್ನ ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಇನ್ನಿಲ್ಲ

ದೇಶದ ಹೆಮ್ಮೆಯ ಉದ್ಯಮಿ,ದೂರದೃಷ್ಟಿಯ ಉದ್ಯಮ ಸಾಮ್ರಾಟ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನ

ಉಪ್ಪಿನಿಂದ ಉಕ್ಕಿನವರೆಗೆ, ಪಿನ್ ನಿಂದ ಪ್ಲೇನ್ ವರೆಗೆ ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ.ಅವರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದರು. ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಲೇ ಲಕ್ಷಾಂತರ ಜನರಿಗೆ ಉದ್ಯೋಗ ದಾತರಾಗಿದ್ದರು.

ಪದ್ಮವಿಭೂಷಣ: ರತನ್ ಟಾಟಾ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 2008 ರಲ್ಲಿ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸಿ ನೀಡಿ ಗೌರವಿಸಿತ್ತು.ಯಶಸ್ವಿ ಉದ್ಯಮಿ: ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ವೆನ್ಸಿ ಸವೀಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಟಾಟಾ ಟೆಲಿ ಸರ್ವೀಸಸ್, ಟಾಟಾ ಫೈನಾನ್ಸ್ ಸೇರಿ ರತನ್ ಟಾಟಾ ಹಲವು ಉದ್ಯಮಗಳನ್ನು ಕಟ್ಟಿ ಬೆಳೆಸಿದ ಅವರು ಕೊನೆಯವರೆಗೂ ಬ್ರಹ್ಮಚಾರಿಯಾಗಿಯೋ ಉಳಿದಿದ್ದರು.

 ರತನ್ ಟಾಟಾ ಅವರು ಬುಧವಾರ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ರಕ್ತದೊತ್ತಡದಲ್ಲಿ ಹಠಾತ್ ಕುಸಿತವನ್ನು ಅನುಭವಿಸಿದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಟಾಟಾ ರಾತ್ರಿ ಮೃತಪಟ್ಟಿದ್ದಾರೆ.

ಬದುಕು ಮತ್ತು ಸಾಧನೆಗಳ ಮೂಲಕ ಟಾಟಾ ಅಜರಾಮರರಾಗಿ ಉಳಿಯಲಿದ್ದಾರೆ.ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕಲ್ಯಾಣ ಕಹಳೆ ಪತ್ರಿಕೆ ಪ್ರಾರ್ಥಿಸುತ್ತೇನೆ.

 .