ಕಲಬುರಗಿ ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣಕ್ಕೆ ವೀ.ಲಿಂ.ವೇ.ಪತ್ರ ಅಭಿಯಾನ
ಕಲಬುರಗಿ ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣಕ್ಕೆ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಪತ್ರ ಚಳುವಳಿ
ಶ್ರೀ ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ ಜಿಲ್ಲಾ ಸಮಿತಿಯು ವತಿಯಿಂದ ದಿನಾಂಕ 19-08-2024 ರಂದು ಪತ್ರ ಚಳುವಳಿ ಅಭಿಯಾನ -ಹಮ್ಮಿಕೊಳ್ಳಲಾಗಿದೆ ಎಂದು ದಯಾನಂದ್ ಎಂ. ಪಾಟೀಲ್, ಯುವ ಮುಖಂಡರಾದ ಶ್ರೀಧರ್ ಎಮ್ ನಾಗನಹಳ್ಳಿ ಅವರು ಜಂಟಿಯಾಗಿ ತಿಳಿಸಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕದ ಆರಾಧ್ಯ ದೈವ “ಶ್ರೀ ಶರಣಬಸವೇಶ್ವರ ”ಹೆಸರನ್ನು ನಾಮಕರಣ ಮಾಡಬೇಕೆಂದು ಕಳೆದ 5 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದು ಕಲ್ಯಾಣ ಕರ್ನಾಟಕದ ಆರಾಧ್ಯ ದೈವ, ಸರ್ವ ಸಮುದಾಯ ಪೂಜಿಸಲ್ಪಡುವ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಅಕ್ಷರ ಕ್ರಾಂತಿ ಮೂಡಿಸಿದ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಹೆಸರನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಸಮಸ್ತ ಈ ಭಾಗದ ಜನತೆಯ ಬಯಕೆಯಾಗಿದ್ದು ಆ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆಯ ವತಿಯಿಂದ ದಿನಾಂಕ 19-08-2024 ರಂದು ಮಾನ್ಯ ಪ್ರಧಾನ್ ಮಂತ್ರಿ ಅವರಿಗೆ ಪತ್ರ ಚಳುವಳಿ ಅಭಿಯಾನ ಮುಖಾಂತರ ಮನವಿ ಸಲ್ಲಿಸಲಾಗುತ್ತಿದ್ದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಹಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಕಲ್ಯಾಣರಾವ ಪಾಟೀಲ್ ಕಣ್ಣಿ, ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವ್ಕಾರ, ಕಾರ್ಯದರ್ಶಿ ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಆನಂದ್ ಕಣಸೂರ್ ಮತ್ತು ಸಹ ಕಾರ್ಯದರ್ಶಿ ಪರಮೇಶ್ವರ್ ಯಳಮೇಲಿ, ಜಿಲ್ಲಾ ಸಂಚಾಲಕರಾದ ಸತೀಶ್ ಮಾಹುರ್, ಗುರುರಾಜ್ ಅಂಬಾಡಿ, ಸತೀಶ್ ಕೋಣಿನ್ ಕಿರಣ್ ಕಣ್ಣಿ, ಗುರುರಾಜ್ ಸುಂಟನೂರ್, ಅಣ್ಣರಾಯ ಹಿರೇಗೌಡ ಮತ್ತು ಸದ್ಯಸರಾದ ಪ್ರಜ್ವಲ್, ಸಚಿನ್, ಶ್ರೀಕಾಂತ್ ಬಿರಾದರ, ಆಕಾಶ್ ಕುಲಕರ್ಣಿ ಉಪಸ್ಥಿತರಿದ್ದರು