ಡಾ.ಬಿ.ಆರ್. ಅಂಬೇಡ್ಕರ ಅವರ ಜನ್ಮ ಭೂಮಿ ಮಧ್ಯ ಪ್ರದೇಶದ ಮೊವ್ ನಲ್ಲಿ ಬಾಬಾ ಸಾಹೆಬರ್ ಜಯಂತಿ ಆಚರಣೆ.

ಡಾ.ಬಿ.ಆರ್. ಅಂಬೇಡ್ಕರ ಅವರ ಜನ್ಮ ಭೂಮಿ ಮಧ್ಯ ಪ್ರದೇಶದ ಮೊವ್ ನಲ್ಲಿ ಬಾಬಾ ಸಾಹೆಬರ್ ಜಯಂತಿ ಆಚರಣೆ.
ದಿನಾಂಕ:14 -04 - 2025 ರಂದು ಡಾ. ಬಿ . ಆರ್. ಅಂಬೇಡ್ಕರ ಅವರ ಜನ್ಮ ಭೂಮಿ ಮಧ್ಯಪ್ರದೇಶದ ಇಂಧೋರ ಜಿಲ್ಲೆಯ , ಮೊವ್ ಅಂಬೇಡ್ಕರ್ ನಗರದಲ್ಲಿರುವ ಬಾಬಾ ಸಾಹೆಬರ ಭವ್ಯ ಪ್ರತಿಮೆಗೆ ಜೈ ಭಾರತ ಮಾತಾ ಸೇವಾ ಸಮಿತಿ ( ರಿ ) ನವದೆಹಲಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರು ಪುಷ್ಪ ನಮನ ಸಲ್ಲಿಸಿ , ನಂತರ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜಯಂತ್ಯೋತ್ಸವದ ವೆದಿಕೆ ಕಾರ್ಯಕ್ರಮದಲ್ಲಿ ಪರಮ ಪೂಜ್ಯರು ಹಾಗೂ ಅತಿಥಿಗಳು ಜ್ಯೋತಿ ಬೆಳಗಿಸಿ ಗೌತಮ ಬುದ್ದರ, ಡಾ. ಬಿ ಆರ್ . ಅಂಬೇಡ್ಕರ ಅವರ ಹಾಗು ಛತ್ರಪತಿ ಶಿವಾಜಿ ಮಾಹರಾಜರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ರಾಷ್ಟ್ರ ಗಿತೆ ಹೆಳಿ ತದ ನಂತರ ಸರ್ವರಿಗು ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸುವದರೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಶ್ರೀಮತಿ ತಸ್ನಿಮಾ ಪಟೇಲ, ರಾಮೇಶ್ವರ ಬದ್ದರ, ಡಾ. ಹೆಮಂತರುಮಾರ ಹಿರೋಳೆ, ಜಿತ್ರೆಂದ್ರ ಜಾಡುಕರ, ಅನಿತಾ ಗಾಯಕವಾಡ, ಅಭಿ ಶೆಕ ಸೌಡೆ, ಸಿದ್ಧಾರ್ಥ ತಲವಾರೆ, ದಾಸರಾವ ಅಂಬಾಡೆ, ವೈಜನಾಥ ಝಳಕಿ, ಸಂದೇಶ ಪವಾರ, ಮಲ್ಲಿಕಾರ್ಜುನ ಸಾರವಾಡ, ಪಪ್ಪು ಪಾಟಿಲ, ನಾಗರಾಜ ಚಿಟಗುಪ್ಪ, ಡಾ. ನಿಲಂಗೆ, ನಾಮದೆವ ಬಬಲಾದ, ಆಕಾಶ ಬಗವಾನ, ಕಾಪರೆ ಬಾಯಿ ನಾಂದೇಡ , ಗಿರಿಶ ಸೊಲಾಪುರ, ರೆವಪ್ಪಾ ಮಮದಾಪುರ, ಸಂತೋಷ ಬೊನೆ, ರವಿಂದ್ರ ಫಂಟೆ, ಪ್ರಕಾಶ ಚಲಗೆರಿ, ಅನಿಲ ಜಾಧವ, ಶಿವಶರಣ ಬೋಧಾನ, ಅನಿಲ ಆಲಮಾ, ಶ್ಯಾಮ ನಾಂದೆಡ, ಅರುಣ ಮುಂಬೈ ಸೇರಿದಂತೆ ಅನೆಕ ಗಣ್ಯರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಪರಮ ಪೂಜ್ಯ ಶ್ರೀ ಹವಾ ಮಲ್ಲಿ ನಾಥರು ಸತ್ಕರಿಸಿ ಗೌರವಿಸಿದರು, ಈ ಸಂಧರ್ಭದಲ್ಲಿ ಪರಮ ಪೂಜ್ಯರು ದೇಶದ ಸಮಸ್ತ ನಾಗರಿಕರು ಸರ್ವ ಧರ್ಮ ಸಮಭಾವ, ನಿಸರ್ಗ ನಿಯಮಗಳ ಪಾಲನೆ ಹಾಗೂ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಪಾಲಿಸಿದಾಗ ಮಾತ್ರ ಭಾರತ ದೇಶ ವಿಶ್ವ ಗುರುವಾಗುವುದು ಎಂದು ಹೇಳಿದರು,
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉತ್ತರ ಕರ್ನಾಟಕ ಶೈಲಿಯ ಹೊಳಿಗೆ, ಹುಗ್ಗಿ, ರೊಟ್ಟಿ, ಸಾಂಬರ ಸೆರಿದಂತೆ ಅನೆಕ ಸಿಹಿ ಸ್ವಾದಿಷ್ಟ ಆಹಾರ ಪದಾರ್ಥಗಳ ಶುಚಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು, ಈ ದೇಶಭಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ , ಮಾಹರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಂದ ಸಹಸ್ರಾರು ದೆಶಬಾಂಧವರು ಸಾವಿರಾರು ಕಿಲೋಮಿಟರ ದೇಶಭಕ್ತಿ ಯಾತ್ರೆಯಲ್ಲಿ ಪರಮ ಪೂಜ್ಯರ ನೇತ್ರತ್ವದಲ್ಲಿ ಉತ್ಸಾಹದೊಂದಿಗೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ ತಿಳಿಸಿದ್ದಾರೆ.