ರೇವು ನಾಯಕ ಆಪ್ತ ನವನಾಥ ಕುಸಾಳೆ ಬಿಜೆಪಿ ಸೇರ್ಪಡೆ .
ರೇವು ನಾಯಕ ಆಪ್ತ ನವನಾಥ ಕುಸಾಳೆ ಬಿಜೆಪಿ ಸೇರ್ಪಡೆ .
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಮಾಜಿ ಸಚಿವ ರೇವು ನಾಯಕ ಬೆಳಮಗಿ ಯವರ ಅಪ್ತ ಬೆಂಬಲಿಗರಾದ ನವನಾಥ ಕುಸಾಳೆ ಯವರು ಕಾಂಗ್ರೇಸ ಪಕ್ಷ ತೊರೆದು ಜನಪ್ರಿಯ ಶಾಸಕ ಬಸವರಾಜ ಮತ್ತಿಮಡು ರವರ ನೇತೃತ್ವದಲ್ಲಿ ಬಿಜೆಪಿ ಗೆ ಸೇರ್ಪಡೆ ಗೊಂಡರು.
ಇದೆ ಸಂದರ್ಭದಲ್ಲಿ ಗೋಳಾ(ಕೆ) ಗ್ರಾಮದ
ನೂರಾರು ಯುವಕರು ವಿವಿದ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದರು.
ಭಾಜಪ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಅರುಣ ಪಟ್ಟಣಕರ, ನಾಗರಾಜ ಮೇಲಗಿರಿ, ಭೀಮರಾವ ಸಾಳುಂಕೆ, ದೇವದಾಸ ಜಾಧವ, ದಿನೇಶ ಗೌಳಿ ಇದ್ದರು.
