ಸಾಂಸ್ಕೃತಿಕ ಸಮನ್ವಯಕಾರ ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಡಾ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸಿ ಪ್ರಶಸ್ತಿ ಪ್ರದಾನ

.ಸಾಂಸ್ಕೃತಿಕ ಸಮನ್ವಯಕಾರ ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಡಾ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸಿ ಪ್ರಶಸ್ತಿ ಪ್ರದಾನ
ಈ ದೇಶದ ಹೆಮ್ಮೆಯ ಸಂತ ಮನಸ್ಸಿನ ವಿಜ್ಞಾನಿ ಮತ್ತು ರಾಷ್ಟ್ರಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಯುವ ಮನಸ್ಸುಗಳಲ್ಲಿ ದೇಶ ಪ್ರೇಮದ ಕನಸು ಬಿತ್ತಿದವರು.ವಿಜ್ಞಾನಿಯಾಗಿ, ರಾಷ್ಟ್ರಪತಿಗಳಾಗಿ, ಮಕ್ಕಳಿಗೆ ಮೇಷ್ಟ್ರಾಗಿ ದೊಡ್ಡವರಿಗೆ ಬದುಕಿನ ಸರಳತೆಯನ್ನು ಕಲಿಸಿದ ತತ್ವಜ್ಞಾನಿಯಾಗಿ ಹಾಗೂ ಮಾದರಿ ಜೀವನ ನಡೆಸಿ ಶತಕೋಟಿ ಭಾರತೀಯರ ಸ್ಫೂರ್ತಿಯ ಸೆಲೆಯದವರು ಎಂದು ಸಾಂಸ್ಕೃತಿಕ ಸಮನ್ವಯಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯಪಟ್ಟಿರುತ್ತಾರೆ.
ತಮಿಳುನಾಡಿನ ಹೊಸೂರಿನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ರವರು ಕೊಡ ಮಾಡಿದ ಈ ಸಾಲಿನ ಪ್ರತಿಷ್ಠಿತ ಡಾ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕಳೆದ ಎರಡು ದಶಕಗಳಿಂದ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿ ಛಾಪ್ಪನ್ನು ಮೂಡಿಸಿರುವ ಅಂಕಣಕಾರ,ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ರಾಗಿರುವ ಶ್ರೀಯುತರ ಅವಿಸ್ಮರಣೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಆಯೋಜಕರು ತಿಳಿಸಿರುತ್ತಾರೆ.